ಕೊಪ್ಪಳ: ಮಾಜಿ ಸಚಿವ ವಿರೂಪಾಕ್ಷಪ್ಪ ಅಗಡಿ ಕೊಪ್ಪಳದ ಕಲ್ಯಾಣ ನಗರದ ಮನೆಯಲ್ಲಿ ನಿಧನ ಹೊಂದಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 81 ವರ್ಷ ವಯಸ್ಸಾಗಿತ್ತು. 1985-1989 ರವರೆಗೆ ಜನತಾ ಪಾರ್ಟಿಯಿಂದ ವಿರೂಪಾಕ್ಷಪ್ಪನವರು ಶಾಸಕರಾಗಿದ್ದರು. ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಒಂದು ವಾರಗಳ ಕಾಲ ಅವರು ಕಾರ್ಯ ನಿರ್ವಹಿಸಿದ್ದರು. ಆದರೆ ನಂತರದಲ್ಲಿ ಎಸ್.ಆರ್.ಬೊಮ್ಮಾಯಿ ಅವರ ಸರ್ಕಾರ ಪತನವಾಗಿದ್ದರಿಂದ ಸಚಿವರಾಗಿ ಕಾರ್ಯನಿರ್ವಹಿಸಲು ವಿರೂಪಾಕ್ಷಪ್ಪನವರಿಗೆ ಸಾಧ್ಯವಾಗಲಿಲ್ಲ.
ನಂತರ 1989ರಲ್ಲಿ ನಡೆದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದರು. 1998ರಲ್ಲಿ ಲೋಕಶಕ್ತಿ ಪಕ್ಷದಿಂದ ಹಾಗೂ 2004 ರಲ್ಲಿ ಜೆಡಿಎಸ್ನಿಂದ ಲೋಕಸಭೆಗೆ ವಿರೂಪಾಕ್ಷಪ್ಪ ಅಗಡಿ ಸ್ಪರ್ಧಿಸಿದ್ದರು. ವಿರೂಪಾಕ್ಷಪ್ಪ ಅಗಡಿಯವರು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. 1940ರ ಡಿಸೆಂಬರ್ 19ರಂದು ಜನಿಸಿದ್ದ ಅಗಡಿಯವರು, ತಮ್ಮ 81ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಇದನ್ನೂ ಓದಿ:
Shopian Encounter: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು
ತುಮಕೂರು: ಹೆರಿಗೆಯ ಬಳಿಕ ಬಾಲ್ಯವಿವಾಹ ಪತ್ತೆ; ಅಪ್ರಾಪ್ತೆ ಪತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
Published On - 8:30 am, Tue, 12 October 21