
ಗಂಗಾವತಿ: ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ಜಲಸಮಾಧಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಹೈದರಾಬಾದ್ ಮೂಲದ ಮಧುಕಿರಣ್(25) ಮತ್ತು ರಾಜೇಶ್ ಕುಮಾರ್(26) ಮೃತ ಯುವಕರು.
ಇಬ್ಬರೂ ಯುವಕರು ಐಟಿ – ಬಿಟಿ ಉದ್ಯೋಗಿಗಳಾದ್ದರು. ಪ್ರವಾಸಕ್ಕೆಂದು ಆನೆಗುಂದಿಗೆ ಬಂದಿದ್ದರು. ಗಂಗಾವತಿಯ ಸಂಗಾಪುರದ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯುವಕರಿಬ್ಬರೂ ಕಲ್ಲಿನ ಮೇಲಿಂದ ಕೆರೆಯಲ್ಲಿ ಜಂಪಿಂಗ್ ಮಾಡಿದ್ದರು. ರಾಜೇಶ್ ಕುಮಾರ್ ಶವ ಪತ್ತೆಯಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಮಧುಕಿರಣ್ ಶವ ಹುಡುಕುತ್ತಿದ್ದಾರೆ.
Also Read:
ಎಲೆಕ್ಟ್ರಾನಿಕ್ಸ್ ಅಂಗಡಿಗೆ ಬೆಂಕಿ: 24 ಗಂಟೆಗಳಲ್ಲಿ ಕ್ಯಾಷಿಯರ್ ಅರೆಸ್ಟ್, ಉದ್ದೇಶ ಏನು ಗೊತ್ತಾ!?
Also Read:
ಬೆಂಗಳೂರಿನಲ್ಲಿ ಮೃತಪಟ್ಟ ಬೆಂಗಾಲಿ ನಟಿ, ಕಾರಣ ಏನು ಗೊತ್ತಾ!?
15 ಲಕ್ಷ ರೂ. ಮೌಲ್ಯದ ಮುರುಘಾಶ್ರೀ ಮಾದರಿಯ ಬೆಳ್ಳಿ ಪುತ್ಥಳಿ ಗಿಫ್ಟ್ |MurughaShree | Tv9kannada

CM Bommai City Round: ಸಮಸ್ಯೆ ಹೇಳಿಕೊಳ್ಳಲು ಪರದಾಡಿದ ಮಹಿಳೆ | Tv9kannada

(two hyderabad techies died in a lake in Gangavathi taluk)