ಕುಕನೂರಿನಲ್ಲಿ ಮಾಲೀಕನ ಮಗನನ್ನು ಬಾವಿಯಲ್ಲಿ ಮುಳುಗಿಸಿ ಪ್ರಾಣ ತೆಗೆದ ಕಾರು ಚಾಲಕ, ಇಷ್ಟಕ್ಕೂ ಹತ್ಯೆ ಮಾಡಿದ್ದು ಏಕೆ ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Jun 11, 2023 | 1:09 PM

ಬಾಲಕ ಪ್ರಜ್ವಲನಿಗೂ ಆರೋಪಿ ಶಂಕರ್ ಹಣದ ಬೇಡಿಕೆ ಇಟ್ಟಿದ್ದ. ಹಣ ನೀಡದ ಹಿನ್ನೆಲೆಯಲ್ಲಿ ಪ್ರಜ್ವಲನನ್ನು ಪಟ್ಟಣದ ಹೊರವಲಯದ ಬಾವಿಗೆ ಕರೆದುಕೊಂಡು ಹೋಗಿ ಮುಳುಗಿಸಿ ಸಾಯಿಸಿದ್ದಾನೆ.

ಕುಕನೂರಿನಲ್ಲಿ ಮಾಲೀಕನ ಮಗನನ್ನು ಬಾವಿಯಲ್ಲಿ ಮುಳುಗಿಸಿ ಪ್ರಾಣ ತೆಗೆದ ಕಾರು ಚಾಲಕ, ಇಷ್ಟಕ್ಕೂ ಹತ್ಯೆ ಮಾಡಿದ್ದು ಏಕೆ ಗೊತ್ತಾ?
ಮಾಲೀಕನ ಮಗನನ್ನು ಬಾವಿಯಲ್ಲಿ ಮುಳುಗಿಸಿ ಪ್ರಾಣ ತೆಗೆದ ಕಾರು ಚಾಲಕ
Follow us on

ಅವರು ಅನ್ನ ಹಾಕುವ ಮಾಲೀಕ. ಆದರೆ ಇವನು ಮಾಡಿದ್ದು ಅನ್ನ ಹಾಕಿದ ಮಾಲೀಕನ ಮಗನ ಪ್ರಾಣ ತೆಗೆಯುವ ಕೆಲಸ. ತಾನೇ ಕೊಲೆ ಮಾಡಿ (murder), ಸಹಜ ಸಾವೆಂದು ಬಿಂಬಿಸಲು ಹೊರಟಿದ್ದ ಆತ ಇದೀಗ ಪೊಲೀಸರ ಅತಿಥಿ ಆಗಿದ್ದಾನೆ.‌ ಏನಿದು ಮಾಲೀಕನ ಮಗನ‌ (boy) ಕೊಲೆಯ ಪ್ರಕರಣ ಅಂತೀರಾ ತೊರಿಸ್ತಿವಿ ನೋಡಿ. ಒಂದೆಡೆ ಬಾವಿಯಿಂದ ಶವ ಹೊರಗಡೆ ತೆಗೆಯುತ್ತಿರುವ ದೃಶ್ಯ. ಇನ್ನೊಂದಡೆ ಮಗನ ಫೋಟೋ ಹಿಡಿದುಕೊಂಡು ಕಣ್ಣೀರು ಹಾಕುತ್ತಿರುವ ತಾಯಿ. ಇವೆಲ್ಲಾ ದೃಶ್ಯಗಳು ಕಂಡುಬಂದದ್ದು ಕೊಪ್ಪಳದಲ್ಲಿ (Koppal). ಹೌದು ಕೊಪ್ಪಳ ಜಿಲ್ಲೆ ಕುಕನೂರು (kuknur) ಪಟ್ಟಣದಲ್ಲಿ ಜೂನ್ 4 ರಂದು 15 ವರ್ಷದ ಪ್ರಜ್ವಲ್ ಎನ್ನುವ ಬಾಲಕ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿತ್ತು.‌

ಆರಂಭದಲ್ಲಿ ಇದು ಸಹಜ ಸಾವೆಂದು ಎಲ್ಲರೂ ಅಂದುಕೊಂಡಿದ್ದರು. ಯಾಕೆಂದ್ರೆ ಈಜಾಡೋಕೆ ಹೊಗಿ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲಾಗಿತ್ತು. ಆದರೆ ಈ ಸಾವಿನ ಹಿಂದೆ ಕೊಲೆಯ ಸಂಚು ಇರುವುದು ಪ್ರಜ್ವಲ್ ನ‌ ಪಾಲಕರಿಗೆ ವಾಸನೆ ಬಡೆದಿತ್ತು. ಮೂರು ದಿನಗಳ ಬಳಿಕ ಪ್ರಜ್ವಲ್ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಂಕರ್ ಎನ್ನುವ ಯುವಕ ಪ್ರಜ್ವಲ್ ನನ್ನು ಕೊಲೆ ಮಾಡಿರುವ ವಿಷಯ ಬಹಿರಂಗಗೊಂಡಿದೆ. ಸದ್ಯ ತಮ್ಮ ಹಿರಿಯ ಪುತ್ರನನ್ನ ಕಳೆದುಕೊಂಡ ಗೌರಮ್ಮ ಹಾಗೂ ಗವಿಸಿದ್ದಪ್ಪ ದಂಪತಿ ನಿತ್ಯವು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಇನ್ನು ಕೊಲೆ ಆರೋಪಿ ಶಂಕರ್ ಚಾಲಕನಾಗಿ ಹಲವರ ಬಳಿ ಕೆಲಸ ಮಾಡುತ್ತಿದ್ದ. ಅದರಂತೆ ಪ್ರಜ್ವಲ್ ನ ಅಪ್ಪನ ಬಳಿಯೂ ಸಹ ಕೆಲಸ ಮಾಡುತ್ತಿದ್ದ.‌ ಇನ್ನು ಶಂಕರ್ ಅಪ್ರಾಪ್ತ ಹುಡುಗರಿಗೆ ಸಿಗರೇಟ್ ಸೇದಿಸಿ, ಮದ್ಯ ಕುಡಿಸಿ ಅದನ್ನ ವಿಡಿಯೋ ಮಾಡುತ್ತಿದ್ದ. ಬಳಿಕ ಅವರಿಗೆ ಹಣದ ಡಿಮ್ಯಾಂಡ್ ಮಾಡುತ್ತಿದ್ದ.‌ ಹಣ ನೀಡದಿದ್ದರೆ ಅದನ್ನು ನಿಮ್ಮ ಪಾಲಕರಿಗೆ ತೋರಿಸುತ್ತೇನೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇನೆಂದು ಬ್ಲಾಕ್ ಮೇಲ್ ಮಾಡುತ್ತಿದ್ದ.‌ ಇದರಿಂದ ಹೆದರಿದ ಅನೇಕರು ಶಂಕರ್ ಗೆ ಹಣ ನೀಡುತ್ತಿದ್ದರು.

ಇದೇ ರೀತಿ ಪ್ರಜ್ವಲ್ ಗೂ ಸಹ ಶಂಕರ್ ಹಣದ ಬೇಡಿಕೆ ಇಟ್ಟಿದ್ದ. ಹಣ ನೀಡದ ಹಿನ್ನೆಲೆಯಲ್ಲಿ ಪ್ರಜ್ವಲನನ್ನು ಪಟ್ಟಣದ ಹೊರವಲಯದ ಬಾವಿಗೆ ಕರೆದುಕೊಂಡು ಹೋಗಿ ಮುಳುಗಿಸಿ ಸಾಯಿಸಿದ್ದಾನೆ. ಬಳಿಕ ತಾನೇ ಪ್ರಜ್ವಲ್ ನ ತಂದೆಗೆ ಫೋನ್ ಮಾಡಿ, ನಿಮ್ಮ ಮಗ ಬಾವಿಯಲ್ಲಿ ಬಿದ್ದಿದ್ದಾ‌ನೆ ಎಂದು ಹೇಳಿದ್ದಾನೆ. ಕೂಡಲೇ ಆತನ ಪಾಲಕರು ಬಾವಿ ಬಳಿ ಹೋಗಿ ಶವವನ್ನು ಹುಡುಕಾಡಿದ್ದಾರೆ. ಈ ವೇಳೆ ತನ್ನ ಮೇಲೆ ಅನುಮಾನ ಬರಬಾರದೆಂದು ತಾನೂ ಸಹ ಶವ ಹುಡುಕಾಟ ನಡೆಸಿದ್ದಾನೆ.‌ ಆದರೆ ಮೂರು ದಿನಗಳ ಬಳಿಕ ಪೊಲೀಸರ ತನಿಖೆ ವೇಳೆ ಪ್ರಜ್ವಲನೇ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದ್ದು, ಶಂಕರ್ ಗೆ ಶಿಕ್ಷೆಯಾಗಬೇಕೆಂದು ಪಾಲಕರು ಒತ್ತಾಯುಸಿದ್ದಾರೆ.

ಇನ್ನು ಶಂಕರ್, ಪ್ರಜ್ವಲ್ ನನ್ನು ಬಾವಿಯಲ್ಲಿ ಮುಳುಗಿಸಿ ಕೊಲೆ ಮಾಡುವುದನ್ನು ಒಂದಿಷ್ಟು ಬಾಲಕರು ನೋಡಿದ್ದರು.‌ ಇದನ್ನು ಯಾರಿಗಾದರೂ ಹೇಳಿದರೆ ನಿಮಗೂ ಸಹ ಇದೇ ರೀತಿ ಮಾಡುತ್ತೇನೆಂದು ಬೆದರಿಕೆ ಹಾಕಿದ್ದನಂತೆ.‌ ಹೀಗಾಗಿ ಬಾಲಕರು ಹೆದರಿ ಸುಮ್ಮನಿದ್ದರು. ಆದರೆ ಪ್ರಜ್ವಲ್ ಸಾವಿನ ಬಳಿಕ ಆತನ ಸಂಬಂಧಿಕರು ಆತನನ್ನು ಯಾರು ಕರೆದುಕೊಂಡು ಹೋಗಿದ್ದರು ಎಂದು ಪತ್ತೆ ಮಾಡುತ್ತಾ ಹೋದಾಗ, ಶಂಕರ್ ಕರೆದುಕೊಂಡು ಹೋಗಿದ್ದು ಗೊತ್ತಾಗಿದೆ. ಬಳಿಕ ಆತನ ಜೊತೆಗಿದ್ದವರನ್ನು ವಿಚಾರಣೆ ಮಾಡಿದಾಗ ಕೊಲೆಯ ವಿಷಯ ಬಹಿರಂಗವಾಗಿದೆ. ‌ಸದ್ಯ ಶಂಕರ್ ಜೈಲು ಪಾಲಾಗಿದ್ದು, ಉಂಡ ಮನೆಗೆ ದ್ರೋಹ ಬಗೆದಿರುವ ಶಂಕರ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಶಂಕರ್ ಗೆ ಶಿಕ್ಷೆಯಾಗಲಿ ಎನ್ನುವ ಒತ್ತಾಯ ಕೇಳಿಬಂದಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ