ಕೊಪ್ಪಳ: ರೆಸಾರ್ಟ್‌ಗಳ ಬಗ್ಗೆ 48 ಗಂಟೆಯಲ್ಲಿ ವರದಿ ನೀಡುವಂತೆ ಡಿಸಿ ಆದೇಶ; ಮಾಲೀಕರು ಕಂಗಾಲು
ಕೃಷಿ ಭೂಮಿಯಲ್ಲಿ ಅನಧಿಕೃತವಾಗಿ ರೆಸಾರ್ಟ್ಗಳಿಗೆ ನೋಟಿಸ್ ಅಂಟಿಸಿ ಬೀಗ ಜಡಿದಿದ್ದಾರೆ. ಅಲ್ಲದೆ ಜೆಸ್ಕಾಂ ಅಧಿಕಾರಿಗಳನ್ನು ಕರೆಸಿ ವಿದ್ಯುತ್ ಕಟ್ ಮಾಡಿಸಿದ್ದಾರೆ. ಎರಡು ದಿನಗಳಲ್ಲಿ ರೆಸಾರ್ಟ್ ತೆರವು ಮಾಡಬೇಕೆಂದು ಎಚ್ಚರಿಕೆ ನೀಡಿದ್ದಾರೆ. ಖುದ್ದು ರೆಸಾರ್ಟ್ ಮಾಲೀಕರನ್ನು ಕರೆದು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡಿದ್ದಾರೆ.
ಕೊಪ್ಪಳ: ಹೊಸ ವರ್ಷಕ್ಕೆ ಬಹುತೇಕ ರೆಸಾರ್ಟ್ಗಳು (Resorts) ಸಜ್ಜಾಗಿದ್ದವು, ಒಮಿಕ್ರಾನ್ (Omicron) ಭೀತಿ ನಡುವೆ ರೆಸಾರ್ಟ್ಗಳಲ್ಲಿ ಮೋಜು ಮಸ್ತಿ ಮಾಡುವುದಕ್ಕೆ ತಯಾರಿ ನಡೆದಿತ್ತು. ಆದರೆ ಕೊಪ್ಪಳ ಜಿಲ್ಲಾಧಿಕಾರಿ ರೆಸಾರ್ಟ್ ಮಾಲೀಕರಿಗೆ ಶಾಕ್ ನೀಡಿದ್ದಾರೆ. ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಅಕ್ರಮ ರೆಸಾರ್ಟ್‌ಗಳ ವಿರುದ್ಧ ಸಮರ ಸಾರಿದ್ದಾರೆ. ಅಕ್ರಮ ರೆಸಾರ್ಟ್‌ಗಳ ಕುರಿತು 48 ಗಂಟೆಯಲ್ಲಿ ವರದಿ ಕೊಡುವಂತೆ ತಹಶಿಲ್ದಾರ್, ಉಪವಿಭಾಗ ಅಧಿಕಾರಿ, ಹಂಪಿ ಪ್ರಾಧಿಕಾರದ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಆನೆಗೊಂದಿ ಸುತ್ತಮುತ್ತ ಇರುವ ಸಣಾಪೂರ, ಮಲ್ಲಾಪೂರ, ಸಂಗಾಪೂರ ಸೇರಿ 15 ಹಳ್ಳಿಗಳಲ್ಲಿ ತಲೆ ಎತ್ತಿದ ಅಕ್ರಮ ರೆಸಾರ್ಟ್ಗಳಿಗೆ ಬೀಗ ಬಿದ್ದಿದೆ. ಡಿಸಿ ನೋಟಿಸ್ ನೀಡಿದ ಕೂಡಲೇ ಎಚ್ಚೆತ್ತ ಕೊಪ್ಪಳ ಉಪವಿಭಾಗಧಿಕಾರಿ ಕನಕರೆಡ್ಡಿ, ಹಂಪಿ ಪ್ರಾಧಿಕಾರದ ಆಯುಕ್ತ ಸಿದ್ದಾರೇಮಶ್ವರ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸುಮಾರು 80 ಕ್ಕೂ ಅಧಿಕ ರೆಸಾರ್ಟ್ಗಳಿಗೆ ಬೀಗ ಹಾಕಿದ್ದಾರೆ.
ಕೃಷಿ ಭೂಮಿಯಲ್ಲಿ ಅನಧಿಕೃತವಾಗಿ ರೆಸಾರ್ಟ್ಗಳಿಗೆ ನೋಟಿಸ್ ಅಂಟಿಸಿ ಬೀಗ ಜಡಿದಿದ್ದಾರೆ. ಅಲ್ಲದೆ ಜೆಸ್ಕಾಂ ಅಧಿಕಾರಿಗಳನ್ನು ಕರೆಸಿ ವಿದ್ಯುತ್ ಕಟ್ ಮಾಡಿಸಿದ್ದಾರೆ. ಎರಡು ದಿನಗಳಲ್ಲಿ ರೆಸಾರ್ಟ್ ತೆರವು ಮಾಡಬೇಕೆಂದು ಎಚ್ಚರಿಕೆ ನೀಡಿದ್ದಾರೆ. ಖುದ್ದು ರೆಸಾರ್ಟ್ ಮಾಲೀಕರನ್ನು ಕರೆದು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ರೆಸಾರ್ಟ್ ಮಾಲೀಕರು ತೆರವು ಮಾಡದಿದ್ದರೆ, ಡೆಮಾಲಿಶ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗಂಗಾವತಿ ತಾಲೂಕಿನ ಸಣಾಪೂರ, ಸಂಗಾಪೂರ, ಮಲ್ಲಾಪೂರ, ಆನೆಗೊಂದಿ ಸುತ್ತಮುತ್ತ ನಾಯಿ ಕೊಡೆಯಂತೆ ಅಕ್ರಮ ರೆಸಾರ್ಟ್ಗಳು ತಲೆ ಎತ್ತಿದ್ದವು. ಈ ರೆಸಾರ್ಟ್ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೇ ಎನ್ನುವ ಆರೋಪಗಳು ಕೇಳಿ ಬರುತ್ತದೆ. ಅಧಿಕಾರಿಗಳು ದಾಳಿ ಮಾಡುವ ಸಮಯದಲ್ಲಿ ಕೆಲ ರೆಸಾರ್ಟ್ಗಳಲ್ಲಿ ಮಾದಕ ವಸ್ತುಗಳು ಹುಕ್ಕಾ ಸ್ಟ್ಯಾಂಡ್ಗಳಾಗಿ ಪತ್ತೆಯಾಗಿವೆ.
ಹದಿನೈದು ಹಳ್ಳಿಗಳಲ್ಲಿ ಕೃಷಿ ಭೂಮಿಯನ್ನು ಪರಿವರ್ತನೆ ಮಾಡದೆ, ವಾಣಿಜ್ಯ ಚಟುವಟಿಕೆಗೆ ಬಳಕೆ ಮಾಡಲಾಗುತ್ತಿತ್ತು. ಸುಮಾರು 80 ಕ್ಕೂ ಅಧಿಕ ರೆಸಾರ್ಟ್ಗಳು ಅಕ್ರಮವಾಗಿ ತಲೆ ಎತ್ತಿದವು. ಇನ್ನೇನು ಹೊಸ ವರ್ಷಕ್ಕೆ 2 ದಿನಗಳಿರುವಾಗಲೇ ಇವುಗಳಿಗೆ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ: ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತುರ್ತು ಸಭೆ: ಹೊಸ ವರ್ಷ ಆಚರಣೆಗೆ ಮಾರ್ಗಸೂಚಿ ಪ್ರಕಟ
ಮತ್ತೆ ಹೆಚ್ಚಾದ ಕೊವಿಡ್ 19, ಒಮಿಕ್ರಾನ್ ಸೋಂಕು; ದೆಹಲಿಯಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಜಾರಿ
Published On - 2:59 pm, Wed, 29 December 21