ಕೊಪ್ಪಳ: ಬಸ್ಸಿನ ಬಾಗಿಲಿಗೆ ನಿಂತು ಪ್ರಯಾಣ ಮಾಡಬೇಡ ಎಂದ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 01, 2023 | 10:37 AM

ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿಮೋತಿ ಗ್ರಾಮದ ಯುವಕರಿಂದ ಬಸ್ಸಿನ ಬಾಗಿಲಿಗೆ ನಿಂತು ಪ್ರಯಾಣ ಮಾಡಬೇಡ ಎಂದು ಹೇಳಿದ ಕಾರಣಕ್ಕೆ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಕೊಪ್ಪಳ: ಬಸ್ಸಿನ ಬಾಗಿಲಿಗೆ ನಿಂತು ಪ್ರಯಾಣ ಮಾಡಬೇಡ ಎಂದ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ
ಹಲ್ಲೆಗೊಳಗಾದ ನಿರ್ವಾಹಕ
Follow us on

ಕೊಪ್ಪಳ: ಬಸ್ಸಿನ ಬಾಗಿಲಿಗೆ ನಿಂತು ಪ್ರಯಾಣ ಮಾಡಬೇಡ ಎಂದ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ ಘಟನೆ ಯಲಬುರ್ಗಾ ತಾಲೂಕಿನ ಕುದರಿಮೋತಿ ಕ್ರಾಸ್ ಬಳಿ ನಡೆದಿದೆ. ಬಸ್​ನಲ್ಲಿ ಪ್ರಯಾಣಿಸುವ ವೇಳೆ ಬಾಗಿಲಿಗೆ ನಿಲ್ಲಬೇಡ ಎಂದಿದ್ದಕ್ಕೆ ಕುದುರಿ ಮೋತಿ ಗ್ರಾಮದ ಗಣೇಶ ಕೆಂಗಾರ ಸೇರಿ ಯುವಕರ ಗುಂಪೊಂದು ಕೆಎಸ್​ಆರ್​ಟಿಸಿ ಬಸ್ ಚಾಲಕ ರಾಜೆಸಾಬ್ ಕುಂಬಾರ್ ಹಾಗೂ ನಿರ್ವಾಹಕ ಹನಮೆಗೌಡ ಪಾಟೀಲ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಬೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ದೇಬೋರನಹಳ್ಳಿಯಲ್ಲಿ ಬೊಲೆರೊ ವಾಹನ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ಉದ್ದೇಬೋರನಹಳ್ಳಿಯಲ್ಲಿ ಬೊಲೆರೊ ವಾಹನ ಡಿಕ್ಕಿಯಾಗಿ ಪಾದಚಾರಿ ನೇಮರಾಜ(55) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೊಲೆರೊ ವಾಹನ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಕ್ಕರೆ ನಗರಿ ಮಂಡ್ಯದಲ್ಲಿ ಕೈಯಲ್ಲಿ ಲಾಂಗ್ ಹಿಡಿದು ರೋಡ್ ರಾಬರ್ಸ್ ಹಾವಳಿ

ಮಂಡ್ಯ: ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಕೈಯಲ್ಲಿ ಲಾಂಗ್ ಹಿಡಿದು ಬೈಕಲ್ಲಿ ರಾಜರೋಷವಾಗಿ ಸುತ್ತಾಟ ಮಾಡುತ್ತಿದ್ದಾರೆ. ಕಂಠ ಪೂರ್ತಿ ಕುಡಿದು ಕೈಯಲ್ಲಿ ಲಾಂಗ್ ಹಿಡಿದು ಶೋ ಆಫ್ ಕೊಡುತ್ತಿದ್ದಾರೆ. ದಾರಿಯಲ್ಲಿ ಬರುವ ಕಾರನ್ನ ಅಡ್ಡ ಗಟ್ಟಿ ಲಾಂಗ್ ಬೀಸಲು ಯತ್ನ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಮಲ್ಲಿಗೆರೆ ಬಳಿ ನಡೆದಿದೆ. ಕೆಲಸ ಮುಗಿಸಿ ಬೆಳ್ಳೂರಿನಿಂದ ಮಂಡ್ಯದ ಕಡೆಗೆ ಬರುತ್ತಿದ್ದ ಮಹೇಶ್ ಎಂಬುವವರ ಕಾರನ್ನ ಹಿಂಬಾಲಿಸಿ ಅಡ್ಡ ಗಟ್ಟಿ ಲಾಂಗ್ ಬೀಸಲು ಯತ್ನಿಸಿದ್ದಾರೆ. ಕೈಯಲ್ಲಿ ಮಾರಕಾಸ್ತ್ರ ನೋಡುತ್ತಿದ್ದಂತೆ ಕಾರನ್ನ ವೇಗವಾಗಿ ಚಲಾಯಿಸಿಕೊಂಡು ಮಹೇಶ್ ಎಸ್ಕೇಪ್ ಆಗಿದ್ದಾರೆ. KA 11 ES 3339 ಸಂಖ್ಯೆಯ ಡಿಯೋ ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಹೇಶ್​ ಮೊಬೈಲ್​ ತೆಗೆದು ವಿಡಿಯೋ ಮಾಡುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಸೆಕ್ಯೂರಿಟಿ ಗಾರ್ಡ್​​​ ಮೇಲೆ ಡೆಲಿವರಿ ಬಾಯ್​​ನಿಂದ ಹಲ್ಲೆ

ಮೊಬೈಲ್ ಹಾಗೂ ಬೈಕ್ ಕದಿಯುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು: ರಸ್ತೆಯಲ್ಲಿ ಮೊಬೈಲ್​ನಲ್ಲಿ ಮಾತನಾಡಿಕೊಂಡು ಹೋಗುವವರನ್ನ ಟಾರ್ಗೇಟ್ ಮಾಡಿ ಮೊಬೈಲ್ ಕದಿಯುವ ಸಲುವಾಗಿ ಬೈಕ್ ಕೂಡ ಕದಿಯುತ್ತಿದ್ದ ಆಂಥೋಣಿ ಡಿ ಸಿಲ್ವಾ ಟೋನಿ ಹಾಗೂ ನಾರಾಯಣ್ ಎಂಬಿಬ್ಬರನ್ನು ಯಲಹಂಕ ಪೊಲೀಸರು ಬಂಧಿಸಲಾಗಿದೆ. ಬಂಧಿತರಿಂದ 4.5 ಲಕ್ಷ ಬೆಲೆಬಾಳುವ 6 ಬೈಕ್, 1.8 ಲಕ್ಷ ಬೆಲೆಬಾಳುವ ನಾಲ್ಕು ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ