ತೀವ್ರ ಸ್ವರೂಪ ಪಡೆದ ಗವಿಸಿದ್ದಪ್ಪ ಕೊಲೆ: ಹಿಂದೂ ಸಂಘಟನೆಗಳ ಸಭೆ, ಅತ್ತ ಮತ್ತೆ ಮೂವರು ಆರೋಪಿಗಳು ವಶಕ್ಕೆ

ಕೊಪ್ಪಳದಲ್ಲಿ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ಗವಿಸಿದ್ದಪ್ಪ ಎಂಬ ಹಿಂದೂ ಯುವಕನನ್ನು ಕೊಲೆ ಮಾಡಲಾಗಿದೆ.ಈ ಕೊಲೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಯಿಂದಾಗಿ ಕೊಪ್ಪಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಮತ್ತು ಹಿಂದೂ ಸಂಘಟನೆಗಳು ಒಟ್ಟಾಗಿ ಹೋರಾಟ ನಡೆಸಲು ನಿರ್ಧರಿಸಿವೆ.

ತೀವ್ರ ಸ್ವರೂಪ ಪಡೆದ ಗವಿಸಿದ್ದಪ್ಪ ಕೊಲೆ: ಹಿಂದೂ ಸಂಘಟನೆಗಳ ಸಭೆ, ಅತ್ತ ಮತ್ತೆ ಮೂವರು ಆರೋಪಿಗಳು ವಶಕ್ಕೆ
ಕೊಲೆಯಾದ ಗವಿಸಿದ್ದಪ್ಪ
Updated By: ವಿವೇಕ ಬಿರಾದಾರ

Updated on: Aug 04, 2025 | 10:17 PM

ಕೊಪ್ಪಳ, ಆಗಸ್ಟ್​ 04: ಮುಸ್ಲಿಂ ಧರ್ಮದ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕ ಸಾಧಿಕ್​ ಕೊಪ್ಪಳ (Koppal) ನಗರದ ವಾರ್ಡ್​ 3ರ ಮಸೀದಿ ಮುಂಭಾಗದಲ್ಲಿ ಭಾನುವಾರ ಯುವಕ ಗವಿಸಿದ್ದಪ್ಪನನ್ನು (Gavisiddappa) ಕೊಲೆ ಮಾಡಿದ್ದನು. ಈ ಕೊಲೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಇನ್ನು, ಕೊಲೆಯಾದ ಗವಿಸಿದ್ದಪ್ಪನ ಮನೆಗೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಖಂಡರು ಭೇಟಿ ನೀಡಿದ್ದಾರೆ. ಈ ನಡುವೆ ಹಿಂದೂ ಸಂಘಟನೆ ಕೊಪ್ಪಳದ ಈಶ್ವರ ಪಾರ್ಕ್ ದೇಗುಲದಲ್ಲಿ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸಭೆ ನಡೆಸಿದವು. ಸಭೆಯಲ್ಲಿ, ಗವಿಸಿದ್ದಪ್ಪನ ಕೊಲೆಯನ್ನು ಖಂಡಿಸಿ ಹಿಂದೂಗಳು ಒಂದಾಗಿ ಹೋರಾಟ ಮಾಡುವ ಬಗ್ಗೆ ನಿರ್ಧರಿಸಿವೆ.

ಮೂವರು ಆರೋಪಿಗಳು ಪೊಲೀಸ್​ ವಶಕ್ಕೆ

ಪ್ರಕರಣ ಸಂಬಂಧ ಕೊಪ್ಪಳ ನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಿದ ಆರೋಪಿ ಸಾಧಿಕ್ ಸೇರಿ ನಾಲ್ವರ ವಿರುದ್ಧ ಗವಿಸಿದ್ದಪ್ಪ ದೂರು ನೀಡಿದ್ದರು. ನಿಂಗಪ್ಪ ದೂರಿನನ್ವಯ ಪೊಲೀಸರು ಆರೋಪಿಗನ್ನು ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ?

ಕೊಲೆಯಾದ ಗವಿಸಿದ್ದಪ್ಪ ಕೊಪ್ಪಳದ ಕುರಬರ ಓಣಿ ನಿವಾಸಿಯಾಗಿದ್ದಾನೆ. ತಂದೆ-ತಾಯಿಗೆ ಒಬ್ಬನೇ ಮಗ, ಮೂವರು ಸಹೋದರಿಯರು ಇದ್ದಾರೆ. ಕಾರು ಚಾಲಕನಾಗಿದ್ದ ಗವಿಸಿದ್ದಪ್ಪ ಪಕ್ಕ ಹಿಂದೂತ್ವವಾದಿಯಾಗಿದ್ದನು.
ಗವಿಸಿದ್ದಪ್ಪನು ಕಳೆದ 2-3 ವರ್ಷಗಳ ಹಿಂದೆ ಕೊಪ್ಪಳದ ಶಾಂತಿ ಆಗ್ರೋದಲ್ಲಿ ಕೆಲಸ ಮಾಡುತ್ತಿದ್ದನು. ಇದೇ ಶಾಂತಿ ಆಗ್ರೋದಲ್ಲಿ ಕೆಲಸ ಮಾಡತಿದ್ದ ಓರ್ವ ಮುಸ್ಲಿಂ ಯುವತಿ ಸ್ನೇಹ ಮಾಡುತ್ತಾನೆ. ಸ್ನೇಹ ಪ್ರೇಮಕ್ಕೆ ತಿರುಗತ್ತದೆ. ಕಳೆದ ಐದು ತಿಂಗಳ ಹಿಂದೆ ಇಬ್ಬರು ಮದುವೆಯಾಗಬೇಕೆಂದು ಓಡಿ ಹೋಗಿದ್ದರು. ಆದರೆ, ಈ ಸಂದರ್ಭದಲ್ಲಿ ಯುವತಿ ಅಪ್ರಾಪ್ತೆಯಾಗಿದ್ದಳು. ಕೊನೆಗೆ ಮನೆಯವರು ಜಾತಿ ಬೇರೆ ಬೇರೆ ಆಗತ್ತೆ ಅಂತ ಇಬ್ಬರಿಗೂ ಬುದ್ದಿ ಹೇಳಿದ್ದಾರೆ.

ಇದನ್ನೂ ಓದಿ: ಮಸೀದಿ ಎದುರಲ್ಲೇ ಯುವಕನ ಭೀಕರ ಕೊಲೆ: ಬೆಚ್ಚಿಬಿದ್ದ ಕೊಪ್ಪಳ ಜನ, ಮುಳುವಾಯ್ತು ಪ್ರೀತಿ!

ಅಪ್ರಾಪ್ತ ಮುಸ್ಲಿಂ ಯುವತಿ ಗವಿಸಿದ್ದಪ್ಪನಕ್ಕಿಂತ ಮೊದಲು ಕೊಲೆ ಆರೋಪಿ ಸಾಧಿಕ್​ನನ್ನು ಪ್ರೀತಿಸುತ್ತಿದ್ದಳಂತೆ.‌ ನಂತರ, ಸಾಧಿಕ್​ನೊಂದಿಗೆ ಬ್ರೇಕಪ್ ಮಾಡಿಕೊಂಡು, ಗವಿಸಿದ್ದಪ್ಪನನ್ನು ಪ್ರೀತಿ ಮಾಡಲು ಆರಂಭಿಸಿದ್ದಾಳೆ.‌ ಈ ವಿಷಯ ತಿಳಿದ ಸಾಧಿಕ್ ಅನೇಕ ಬಾರಿ ಗವಿಸಿದ್ದಪ್ಪನೊಂದಿಗೆ ಜಗಳ ಸಹ ಮಾಡಿದ್ದನಂತೆ.‌ ಈ ವಿಷಯ ಅತಿರೇಕಕ್ಕೆ ಹೋಗಿ ರವಿವಾರ ರಾತ್ರಿ 7.30 ಸುಮಾರಿಗೆ ಮಸೀದಿ ಬಳಿ ಬೈಕ್​ನಲ್ಲಿ ಬರುತ್ತಿದ್ದ ಗವಿಸಿದ್ದಪ್ಪನನ್ನು ಸಾಧಿಕ್​ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ