ಕೊಪ್ಪಳ ಗವಿಸಿದ್ದೇಶ್ವರ ಅಜ್ಜನ ಜಾತ್ರೆಗೆ 4 ಲಕ್ಷ ಹೋಳಿಗೆ ಜೊತೆ 275 ಕ್ವಿಂಟಲ್ ಮಾದಲಿ

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಸುಮಾರು 5-6 ಲಕ್ಷ ಜನರು ಸೇರುವ ಸಾಧ್ಯತೆ ಹಿನ್ನೆಲೆ ಜಾತ್ರೆಯಲ್ಲಿ ಸಾಮಾಜಿಕ ಕಳಕಳಿ ಮೂಡಿಸುವ ಸಲುವಾಗಿ 2023ರಲ್ಲಿ ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.

ಕೊಪ್ಪಳ ಗವಿಸಿದ್ದೇಶ್ವರ ಅಜ್ಜನ ಜಾತ್ರೆಗೆ 4 ಲಕ್ಷ ಹೋಳಿಗೆ ಜೊತೆ 275 ಕ್ವಿಂಟಲ್ ಮಾದಲಿ
ಗವಿಸಿದ್ದೇಶ್ವರ ಜಾತ್ರೆ, ಶೇಂಗಾ ಹೋಳಿಗೆ, ಮಾದಲಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 07, 2023 | 3:12 PM

ಕೊಪ್ಪಳ: ಕೊಪ್ಪಳದ (Koppal) ಗವಿಸಿದ್ದೇಶ್ವರ ಮಠ (Gavisiddeshwara Math) ನಾಡಿಗೆ ಪ್ರಸಿದ್ಧಿ ಪಡೆದಿದೆ. ಗವಿಮಠದ 18 ನೇ ಪಿಠಾಧೀಪತಿ ಅಭಿನವ ಗವಿ ಸಿದ್ದೇಶ್ವರ ಶ್ರೀಗಳು (Abhinav Gavisiddeshwara Swamiji) ತಮ್ಮ ಪ್ರವಚನ, ಸಾಮಾಜಿಕ ಕಳಕಳಿ ಕಾರ್ಯಗಳ ಮೂಲಕ ಜನರ ಹೃದಯ ಮಂದಿರದಲ್ಲಿ ನೆಲಸಿದ್ದಾರೆ. ಗವಿಮಠದ ಗವಿಸಿದ್ದೇಶ್ವರ ಅಜ್ಜನ ಜಾತ್ರೆ ಕಳೆದ ಎರಡು ವರ್ಷ ಕರೋನಾ (Covid) ಕಾರಣದಿಂದ ಅದ್ಧೂರಿಯಾಗಿ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಅದ್ಧೂರಿಯಾಗಿ ಜರಗುತ್ತಿದ್ದು, ನಾಳೆ (ಜನವರಿ.8) ಸಂಜೆ 5ಕ್ಕೆ ನಡೆಯುವ ಮಹಾರಥೋತ್ಸವ ಜರುಗಲಿದೆ. ಈ ಸಂಬಂಧ ಲಕ್ಷಾಂತರ ಭಕ್ತರು ಆಗಮಿಸಲಿದ್ದು 4 ಲಕ್ಷ ಶೇಂಗಾ ಹೋಳಿಗೆ (Holige) ಮತ್ತು 275 ಕ್ವಿಂಟಲ್ ಮಾದಲಿ (Madali) ಸಿದ್ಧವಾಗಿದೆ.

ಮಾದಲಿ ಉತ್ತರ ಕರ್ನಾಟಕದ ಪ್ರಸಿದ್ಧ ಸಿಹಿ ಪದಾರ್ಥವಾಗಿದೆ ಗವಿಸಿದ್ದೇಶ್ವರ ಗೆಳೆಯರ ಬಳಗದವತಿಯಿಂದ, 15 ಕ್ಕೂ ಹೆಚ್ಚು ಗ್ರಾಮಸ್ಥರಿಂದ ಸಿದ್ಧಪಡಿಸಲಾಗಿದೆ. ಮಾದಲಿಗೆ 150 ಕ್ವಿಂಟಲ್ ಬೆಲ್ಲ, 100 ಕ್ವಿಂಟಲ್ ಗೋಧಿ, 15 ಕ್ವಿಂಟಲ್ ಹುರಿದ ಹಿಟ್ಟು, 2 ಕ್ವಿಂಟಲ್ ಪುಟಾಣಿ, 5 ಕ್ವಿಂಟಲ್ ಕಡ್ಲಿ ಬೆಳೆ, 50 ಕೆಜಿ ಗಸಗಸಿ, 2 ಕ್ವಿಂಟಲ್ ಕೊಬ್ಬರಿ, 50 ಕೆಜಿ ಶುಂಠಿ ಬಳಕೆ ಮಾಡಲಾಗಿದೆ. ಗವಿಮಠಕ್ಕೆ ಈಗಾಗಲೇ 100 ಕ್ವಿಂಟಲ್ ಮಾದಲಿ ಆಗಮಿಸಿದೆ.

ಜಾತ್ರೆಯ ವಿಶೇಷತೆ

ಕೊಪ್ಪಳ ಗವಿಮಠದ ಜಾತ್ರೆ ಸುಮಾರು 1 ತಿಂಗಳು ನಡೆಯುತ್ತದೆ. ಪ್ರತಿದಿನ ದಾಸೋಹವೂ ಇರುತ್ತದೆ. ವಿಶೇಷ ದಾಸೋಹಕ್ಕಾಗಿ ಸುತ್ತಲಿನ ಜನರು ದವಸ-ಧಾನ್ಯ ನೀಡುತ್ತಾರೆ. ರೊಟ್ಟಿ, ಸಿಹಿತಿಂಡಿಗಳನ್ನೂ ಮಠಕ್ಕೆ ಅರ್ಪಿಸುತ್ತಾರೆ. ಒಟ್ಟಾರೆ ಒಂದು ತಿಂಗಳ ಕಾಲ ಉತ್ಸವ-ದಾಸೋಹದ ಸಂಭ್ರಮ ನಿರಂತರವಾಗಿ ಇರುತ್ತದೆ. 2019ರಲ್ಲಿ ಸುಮಾರು 8 ಲಕ್ಷ ಮಂದಿ ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿದ್ದರು.

ಇನ್ನು ಪ್ರತಿವರ್ಷವೂ ವಿಶೇಷ ಅತಿಥಿಗಳು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದರು. 2019ರಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ ಚಾಲನೆ ನೀಡಿದ್ದರೇ, ಎರಡು ವರ್ಷಗಳ ಹಿಂದೆ ವಿದೇಶಿ ದಂಪತಿ ರಥೋತ್ಸವಕ್ಕೆ ಚಾಲನೆ ನೀಡಿ ಗಮನ ಸೆಳೆದಿದ್ದರು. ಈ ಜಾತ್ರೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ವಿಪಕ್ಷನಾಯಕ  ಸಿದ್ದರಾಮಯ್ಯನವರೂ ಪಾಲ್ಗೊಂಡಿದ್ದರು. ಹಾಗೇ ಅಮಿತ್​ ಶಾ, ರಾಹುಲ್​ ಗಾಂಧಿಯವರೂ ಹಿಂದೊಮ್ಮೆ ಮಠಕ್ಕೆ ಭೇಟಿ ನೀಡಿದ್ದರು.

ಈ ಬಾರಿ ಜನವರಿ 4ರಿಂದ 10ರ ತನಕ ಆರು ದಿನಗಳ ಕಾಲ ಗವಿಸಿದ್ದೇಶ್ವರ ಜಾತ್ರೆಯು ನಡೆಯಲಿದೆ. ಜನವರಿ 8ರಂದು ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ನಡೆಯಲಿದೆ.

ಸಾಮಾಜಿಕ ಕಳಕಳಿ ಹೊಂದಿರುವ ಜಾತ್ರೆ

ಜಾತ್ರೆಗೆ ಸುಮಾರು 5-6 ಲಕ್ಷ ಜನರು ಸೇರುವ ಹಿನ್ನೆಲೆ ಜಾತ್ರೆಯಲ್ಲಿ ಸಾಮಾಜಿಕ ಕಳಕಳಿಯೂ ಮಿಳಿತವಾಗಿರುತ್ತಿತ್ತು. ಪ್ರತಿವರ್ಷವೂ ಲಕ್ಷವೃಕ್ಷೋತ್ಸವ, ರಕ್ತದಾನ, ನೇತ್ರದಾನದಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.

ಗವಿಮಠ ಸಂಸ್ಥಾನ ಹಾಗೂ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಶ್ರೀ ಗವಿಸಿದ್ದೇಶ್ಚರ ಜಾತ್ರಾ ಮಹೋತ್ಸವ ಅಂಗವಾಗಿ ಅಂಗಾಂಗ ದಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಜನವರಿ 4ರಿಂದ ಆಯೋಜಿಸಲಾಗಿದೆ. ಜಾತ್ರೋತ್ಸವ ಮುಗಿಯುವವರೆಗೂ ಒಂದು ಸ್ಟಾಲ್ ಹಾಕಿ ಜಾಗೃತಿಗೆ ಮತ್ತು ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ.

ಗವಿಮಠದ ಇತಿಹಾಸದಲ್ಲಿ ಮೊದಲ ಬಾರಿಗೆ ಗಂಗಾರತಿ

ಗವಿಮಠದ ಇತಿಹಾಸದಲ್ಲಿ ಮೊದಲ ಬಾರಿಗೆ ಗಂಗಾರತಿ ಮಾಡಲಾಯಿತು. ಕೆರೆಯ ಮಧ್ಯಭಾಗದಲ್ಲಿರುವ ಈಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಶಿಸ್ತುಬದ್ಧವಾಗಿ ನಿಂತಿದ್ದ ಐದು ಜನ, ಭಕ್ತರತ್ತ ಮುಖ ಮಾಡಿ ಸಂಭ್ರಮದಿಂದ ಗಂಗೆಗೆ ಆರತಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Sat, 7 January 23

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್