ಅಂಜನಾದ್ರಿಗೆ ಬರ್ತಿದ್ದೀರಾ? ಹಾಗಾದ್ರೆ ಕ್ಯೂಆರ್ ಕೋಡ್ ಬಳಸಿ ನಾನಾ ಸೌಕರ್ಯದ ಸ್ಥಳಗಳನ್ನು ಸುಲಭವಾಗಿ ಹುಡುಕಿ

ಅಂಜನಾದ್ರಿಗೆ ಹೊಸದಾಗಿ ಬರುವ ಭಕ್ತರಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಈ ಬಾರಿ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಅಳವಡಿಸಿದ ಲಿಂಕ್ ಮೂಲಕವು ಈ ಮೇಲಿನ ಸ್ಥಳಗಳ ಮಾಹಿತಿಯನ್ನು ಪಡೆಯಬಹುದಾಗಿದೆ.

ಅಂಜನಾದ್ರಿಗೆ ಬರ್ತಿದ್ದೀರಾ? ಹಾಗಾದ್ರೆ ಕ್ಯೂಆರ್ ಕೋಡ್ ಬಳಸಿ ನಾನಾ ಸೌಕರ್ಯದ ಸ್ಥಳಗಳನ್ನು ಸುಲಭವಾಗಿ ಹುಡುಕಿ
ಅಂಜನಾದ್ರಿಗೆ ಬರ್ತಿದ್ದೀರಾ? ಹಾಗಾದ್ರೆ ಕ್ಯೂಆರ್ ಕೋಡ್ ಬಳಸಿ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಸಾಧು ಶ್ರೀನಾಥ್​

Updated on:Dec 23, 2023 | 12:53 PM

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯಲ್ಲಿ (Anjanadri), ಡಿಸೆಂಬರ್ 24 ರಂದು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ದೇಶದ ವಿವಿಧಡೆ ಸಾವಿರಾರು ಹನುಮ ಮಾಲಾದಾರಿಗಳು ಅಂಜನಾದ್ರಿಗೆ ಬರುತ್ತಿದ್ದಾರೆ. ಅಂಜನಾದ್ರಿಗೆ ಬರುವ ಭಕ್ತರಿಗೆ ನಾನಾ ಸೌಲಭ್ಯಗಳ ಮಾಹಿತಿ ಲಭ್ಯವಾಗುವ ಹಾಗೆ ಕೊಪ್ಪಳ ಜಿಲ್ಲಾಡಳಿತ (Spiritual, Tourism) ಈ ಬಾರಿ ಕ್ಯೂಆರ್ ಕೋಡ್ (QR code) ವಿಶೇಷ ವ್ಯವಸ್ಥೆಯನ್ನು ಸಹ ಮಾಡಿದೆ.

ಕ್ಯೂ ಆರ್ ಕೋಡ್ ಬಳಸಿ ಸೌಲಭ್ಯಗಳ ಸ್ಥಳಗಳನ್ನು ಹುಡುಕಿ

ಅಂಜನಾದ್ರಿಗೆ ಬರುವ ಭಕ್ತರ ಅನಕೂಲಕ್ಕಾಗಿ ಜಿಲ್ಲಾಡಳಿತ ಹತ್ತಾರು ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿದೆ. ಆದರೆ ದೂರದ ಊರುಗಳಿಂದ ಬರುವ ಭಕ್ತಾಧಿಗಳಿಗೆ ಯಾವ ವ್ಯವಸ್ಥೆ ಎಲ್ಲಿದೆ ಅನ್ನೋದು ಸರಿಯಾಗಿ ಗೊತ್ತಾಗೋದಿಲ್ಲಾ, ಗೊತ್ತಾದ್ರು ಕೂಡಾ ಆ ಸ್ಥಳಕ್ಕೆ ಹೋಗಲು ಪರದಾಡಬೇಕಾದುತ್ತದೆ. ಅದಲ್ಲವನ್ನು ತಪ್ಪಿಸಲು ಇದೀಗ ಜಿಲ್ಲಾಡಳಿತ ಕ್ಯೂ ಆರ್ ಕೋಡ್ ಮೊರೆಹೋಗಿದೆ.

ಅಂಜನಾದ್ರಿಯಲ್ಲಿ ಪಾರ್ಕಿಂಗ್ ಸ್ಥಳಗಳು ಯಾವ ಯಾವ ಕಡೆಗಿವೆ. ಪ್ರಥಮ ಚಿಕಿತ್ಸಾ ಕೇಂದ್ರಗಳ ಎಲ್ಲಿಲ್ಲಿ ಇವೆ. ಕುಡಿಯುವ ನೀರಿನ ಸ್ಥಳಗಳು, ಸಹಾಯವಾಣಿ ಕೇಂದ್ರಗಳು, ಸ್ಥಾನ ಗೃಹಗಳ ಸ್ಥಳಗಳು ಯಾವ ಯಾವ ಕಡೆಗಳಲ್ಲಿ ಇವೆ ಎಂಬುದು ಸೇರಿದಂತೆ ನಾನಾ ಸೌಲಭ್ಯಗಳು ದೊರಕುವ ಸ್ಥಳಗಳ ಮಾಹಿತಿಯನ್ನು ಈ ಕ್ಯೂಆರ್ ಕೋಡ್ ಮೂಲಕ ಪಡೆಯಬಹುದಾಗಿದೆ.

Also Read: ಕೊಪ್ಪಳ – ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದೆ ಅಂಜನಾದ್ರಿ ಬೆಟ್ಟ

ಅಂಜನಾದ್ರಿಗೆ ಹೊಸದಾಗಿ ಬರುವ ಭಕ್ತರಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಈ ಬಾರಿ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಅಳವಡಿಸಿದ ಲಿಂಕ್ ಮೂಲಕವು ಈ ಮೇಲಿನ ಸ್ಥಳಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಕ್ಯೂಆರ್ ಕೋಡ್ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಯಲ್ಲಿ ಲಭ್ಯವಿರುತ್ತದೆ. ಭಕ್ತರ ಅನುಕೂಲಕ್ಕೆ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ತಿಳಿಸಿದ್ದಾರೆ.

ಕ್ಯೂಆರ್ ಕೋಡ್ ಲಿಂಕ್ https://koppal.nic.in/hanumamala-events1/ ಅಥವಾ https://koppal.nic.in/ ಹನುಮಮಾಲಾ-ಕಾರ್ಯಕ್ರಮ/ ಈ ರೀತಿ ಇರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:48 pm, Sat, 23 December 23