ಕೊಪ್ಪಳ ಜಿಲ್ಲಾ ಗಣಿ ಮತ್ತು ವಿಜ್ಞಾನ ಇಲಾಖೆ ಕಚೇರಿಯಲ್ಲಿ ಗಲಾಟೆ: ಗನ್ ತೋರಿಸಿದ ಭೂಪ
ಬಸವರಾಜ ಹೊಸಳ್ಳಿ ಟೀಂ ಹಾಗೂ ಬಸವರಾಜ ಪೂಜಾರ ಟೀಂ ಸೇರಿ ಎರಡು ಗುಂಪುಗಳೂ ಅಧಿಕಾರಿಯ ಸಮ್ಮುಖದಲ್ಲೇ ಹೊಡೆದಾಡಿಕೊಂಡಿವೆ. ಘಟನೆಯಲ್ಲಿ ಓರ್ವರಿಗೆ ಗಾಯಗಳಾಗಿದ್ದು ಸಧ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಪ್ಪಳ: ಕೊಪ್ಪಳ ಜಿಲ್ಲಾ ಗಣಿ ಮತ್ತು ವಿಜ್ಞಾನ ಇಲಾಖೆ ಕಚೇರಿಯಲ್ಲಿ ಮಣ್ಣು ಗಣಿಗಾರಿಕೆ ಪರ್ಮಿಷನ್ ವಿಚಾರಕ್ಕೆ 2 ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು ಅಧಿಕಾರಿಗಳ ಎದುರೇ ಗನ್ ತೋರಿಸಿ ವ್ಯಕ್ತಿ ಕೂಗಾಡಿದ ಘಟನೆ ನಡೆದಿದೆ. ಗನ್ ಹಿಡಿದು ಅಧಿಕಾರಿಯ ಎದುರೇ ಏಯ್ ಹೊಯ್ ಎಂದು ಕೂಗಾಡಿದ್ದಾರೆ.
ತುಂಗಭದ್ರ ಡ್ಯಾಂ ಹಿನ್ನೀರಿನ ಮಣ್ಣು ಗಣಿಗಾರಿಕೆ ಸಂಬಂಧ ಗಲಾಟೆ ನಡೆದಿದೆ. ಕೆಲವರ ಜೊತೆ ಇಲಾಖೆ ಅಧಿಕಾರಿಗಳೇ ಶಾಮೀಲಾಗಿದ್ದರೆಂದು ಆರೋಪಿಸಿದ್ದು ರಾಯಲ್ಟಿ ಇಲ್ಲದೇ ಮಣ್ಣು ಗಣಿಗಾರಿಕೆ ಮಾಡಿದ್ದಕ್ಕೆ ಒಂದು ಟೀಂ ಆಕ್ಷೇಪ ವ್ಯಕ್ತಪಡಿಸಿದೆ. ಇದ್ರಿಂದ ಮಾತಿಗೆ ಮಾತು ಬೆಳೆದು ಎರಡು ಟೀಂಗಳ ನಡುವೆ ಗಲಾಟೆಯಾಗಿದೆ. ಬಸವರಾಜ ಹೊಸಳ್ಳಿ ಟೀಂ ಹಾಗೂ ಬಸವರಾಜ ಪೂಜಾರ ಟೀಂ ಸೇರಿ ಎರಡು ಗುಂಪುಗಳೂ ಅಧಿಕಾರಿಯ ಸಮ್ಮುಖದಲ್ಲೇ ಹೊಡೆದಾಡಿಕೊಂಡಿವೆ. ಘಟನೆಯಲ್ಲಿ ಓರ್ವರಿಗೆ ಗಾಯಗಳಾಗಿದ್ದು ಸಧ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲಾಟೆ ವೇಳೆ ನಾಯ್ಡು ಎನ್ನೋರು ಗನ್ ತೆಗೆದುಕೊಂಡು ಬಂದಿದ್ದರು. ಗಣಿ ಇಲಾಖೆ ಕಚೇರಿಯೊಳಗೆ ಗನ್ ತೋರಿಸಿ ಬೆದರಿಸಿದ್ದರು. ಇಷ್ಟಾದ್ರು ಇಲ್ಲಿಯವರೆಗೂ ದೂರು ದಾಖಲಾಗಿಲ್ಲ. ಖುದ್ದು ಹಿರಿಯ ಪೊಲೀಸ್ ಅಧಿಕಾರಿಯಿಂದಲೇ ರಾಜಿ ಪಂಚಾಯಿತಿ ನಡೆದಿದೆ.
ಇದನ್ನೂ ಓದಿ: ಮನೆ-ಮರಗಳಲ್ಲಿ ಹಕ್ಕಿಗಳು ಗೂಡು ಕಟ್ಟತ್ತವೆ, ಸ್ಕೂಟಿಯಲ್ಲಿ ಪಕ್ಷಿ ಗೂಡು ಕಟ್ಟಿರುವುದು ನೋಡಿ
ಇನ್ನು ಮತ್ತೊಂದೆಡೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ, ಬುಳ್ಳಾಪುರ, ಹೊಸಹಳ್ಳಿ, ಬೇಲಿಮಲ್ಲೂರು ಸೇರಿದಂತೆ ಹಲವೆಡೆ ಅಕ್ರಮ ಮರಳು ಸಂಗ್ರಹ ಮಾಡಲಾಗಿದ್ದು ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್, ಎತ್ತಿನಗಾಡಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊಪ್ಪಳಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:53 am, Wed, 14 June 23