ಕೊಪ್ಪಳ: ದೀಪಾವಳಿ ಹಬ್ಬದ ಹಿನ್ನಲೆ ಯಾರು ಜೂಜಾಡುವಂತಿಲ್ಲ ಎಂದು ಕೊಪ್ಪಳ ಜಿಲ್ಲೆಯ ಹಳ್ಳಿಗಳಲ್ಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದರ ಹೊರತಾಗಿಯೂ ಜೂಜಾಡಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ. ಗ್ರಾಮಗಳಲ್ಲಿ ಮೈಕ್ ಮೂಲಕ ಪೊಲೀಸರು ಈ ವಿಚಾರವನ್ನು ಪ್ರಚಾರ ಮಾಡಿದ್ದಾರೆ.
ದೀಪಾವಳಿಯಲ್ಲಿ ಇಸ್ಪೇಟ್ ಆಟವಾಡುವುದು ಕೊಪ್ಪಳ ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ. ಹೀಗಾಗಿ ಹಬ್ಬದ ನೆಪದಲ್ಲಿ ಜೂಜಾಟ ಆಡುವವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ಇಸ್ಪೀಟ್ ಆಟಕ್ಕೆ ನಿರ್ಬಂಧ ಹೇರಿದ್ದಾರೆ.
ನೆಲಮಂಗಲ: ಮಾದನಾಯಕನಹಳ್ಳಿ ಪೊಲೀಸರಿಂದ ನಕಲಿ ಪೊಲೀಸ್ ಬಂಧನ
ನಾನು ಪೊಲೀಸ್ ನನಗೆ ಮಾಮೂಲು ಕೊಡಬೇಕು ಎಂದು ಹೇಳಿ ಸಾವಿರಾರು ರೂಪಾಯಿ ದೋಚಿದ್ದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸರು ಲಕ್ಷ್ಮೀನಾರಾಯಣ(60)ನನ್ನು ಬಂಧಿಸಿದ್ದಾರೆ. ಬೈಲಕೋನೆನಾಹಳ್ಳಿ ಗ್ರಾಮದ ನಿಖಿಲ್ ಹಾಗೂ ಇತರೆ ಅಂಗಡಿಯವರಿಂದ ವೃದ್ಧ ಹಣ ಪಡೆದಿದ್ದ, ಅನುಮಾನಗೊಂಡು ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ಕೊಟ್ಟಿದ್ದರು. ಮಾಹಿತಿ ಆಧಾರದ ಮೇಲೆ ಸದ್ಯ ಲಕ್ಷ್ಮೀನಾರಾಯಣನನ್ನು ಬಂಧಿಸಲಾಗಿದೆ. ಬಂಧಿತನಿಂದ 5 ಸಾವಿರ ರೂಪಾಯಿ ನಗದು ಜಪ್ತಿ ಮಾಡಲಾಗಿದೆ.
ಮೈಸೂರು: ಆರೋಗ್ಯ ಸಿಬ್ಬಂದಿಯ ಜೊತೆ ವಾಹನ ಚಾಲಕ ಗಲಾಟೆ
ಮೈಸೂರಿನಲ್ಲಿ ಲಸಿಕೆ ನೀಡಲು ಪರದಾಟ ಮುಂದುವರಿದೆ. ಈ ವೇಳೆ ಆರೋಗ್ಯ ಸಿಬ್ಬಂದಿಯ ಜೊತೆ ವಾಹನ ಚಾಲಕ ಗಲಾಟೆ ಮಾಡಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ಮಾತಿನ ಸಮರ ಹೋಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಉಡವೆಪುರ ಹಾಡಿಯಲ್ಲಿ ಈ ಘಟನೆ ನಡೆದಿದೆ. ಲಸಿಕೆ ಹಾಕಲು ಆರೋಗ್ಯ ಸಿಬ್ಬಂದಿ ಹಾಡಿಗೆ ತೆರಳಿದ್ದರು. ಈ ವೇಳೆ ಕೃಷಿ ಕೆಲಸಕ್ಕೆ ಜನರನ್ನು ವ್ಯಕ್ತಿ ಕರೆದೊಯ್ತಿದ್ದರು. ಜನರನ್ನು ಕರೆದೊಯ್ಯುತ್ತಿದ್ದಾಗ ವಾಹನ ನಿಲ್ಲಿಸಿದ ಹಿನ್ನೆಲೆ, ಆರೋಗ್ಯ ಸಿಬ್ಬಂದಿಯ ಜೊತೆ ಚಾಲಕ ವಾಗ್ವಾದಕ್ಕಿಳಿದಿದ್ದಾರೆ.
ಇದನ್ನೂ ಓದಿ:
ಮನೆ ಮಾರಿ ಆನ್‌ಲೈನ್ ಜೂಜಾಟ: ಎಲ್ಲವನ್ನೂ ಕಳೆದುಕೊಂಡವ ಸಾವಿಗೂ ಮುನ್ನ ಏನು ಬರೆದಿಟ್ಟ?
Published On - 9:20 am, Wed, 3 November 21