ಕೊಪ್ಪಳ: ಶಿಕ್ಷಕರ ದಿನಾಚರಣೆಯಂದು ಡಾ.ರಾಧಾಕೃಷ್ಣನ್ ಭಾವಚಿತ್ರದ ಎದುರೇ ಕೊಪ್ಪಳದ ಖಾಸಗಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕಿಯರು ಕುಣಿದು ಕುಪ್ಪಳಿಸಿದ್ದಾರೆ. ಉಪನ್ಯಾಸಕರ ವಿಡಿಯೋ ಕೊಪ್ಪಳದಲ್ಲಿ ವೈರಲ್ ಆಗಿದೆ. ಪಿಯು ಕಾಲೇಜು ಉಪನ್ಯಾಸಕರು ಶಿಕ್ಷಕ ದಿನಾಚರಣೆಯ ದಿನದಂದೇ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಮುಂದೇ ಡ್ಯಾನ್ಸ್ ಮಾಡಿರುವುದು ಹಲವರ ವಿರೋಧಕ್ಕೂ ಕಾರಣವಾಗಿದೆ. ಶಿಕ್ಷಕರ ದಿನಾಚರಣೆಯಂದು ಅನುಚಿತ ವರ್ತನೆ ತೋರಿದ್ದಾರೆ ಎಂಬ ಟೀಕೆಗಳೂ ವ್ಯಕ್ತವಾಗಿವೆ.
Viral Video: ಕಾರಿನಡಿ ಸಿಲುಕುತ್ತಿದ್ದ ಬಾಲಕನ ಜೀವ ಕಾಪಾಡಿದ ಪೌರ ಕಾರ್ಮಿಕ; ವಿಡಿಯೋ ವೈರಲ್
ಇನ್ನೇನು ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಆ ಬಾಲಕ ಕಾರಿನ ಅಡಿ ಸಿಲುಕಿ ಅಪ್ಪಚ್ಚಿಯಾಗುತ್ತಿದ್ದ. ಆದರೆ, ಅಷ್ಟರಲ್ಲಿ ದೇವರಂತೆ ಬಂದ ಪೌರ ಕಾರ್ಮಿಕ ಆ ಬಾಲಕನನ್ನು ಎಳೆದು ನಿಲ್ಲಿಸಿ ದೊಡ್ಡ ಅಪಾಯದಿಂದ ಪಾರು ಮಾಡಿದ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಚಿಕ್ಕ ಬಾಲಕನ ಜೀವ ಉಳಿಸಿದ ಆ ಪೌರ ಕಾರ್ಮಿಕನ ಸಮಯಪ್ರಜ್ಞೆಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಈ ಘಟನೆ ಬ್ರೆಜಿಲ್ನ ರೋಲಾಂಡಿಯದಲ್ಲಿ ನಡೆದಿದೆ. ಆ ಬಾಲಕನ ತಾತ ಮನೆಯ ಗೇಟ್ ದಾಟಿ ಮುಂದೆ ಹೋಗಿದ್ದರು. ಅವರ ಜೊತೆ ಹೊರಟಿದ್ದ ಮೊಮ್ಮಗನೂ ಇನ್ನೇನು ರಸ್ತೆ ದಾಟಿ ಹೋಗಬೇಕು ಎನ್ನುವಷ್ಟರಲ್ಲಿ ಕಸದ ಲಾರಿ ಬಂದಿತು. ಆ ಕಸದ ಲಾರಿಯ ಹಿಂಭಾಗದಿಂದ ಇನ್ನೊಂದು ಕಾರು ಬರುತ್ತಿತ್ತು. ಆದರೆ, ಎದುರಿನಲ್ಲಿ ಲಾರಿ ಇದ್ದುದರಿಂದ ಬಾಲಕನಿಗೆ ಆ ಕಾರು ಕಾಣಲಿಲ್ಲ.
If you’ve already seen a sanitation worker save a little boy’s life today just keep on scrolling… pic.twitter.com/lVG44aSnco
— Rex Chapman (@RexChapman) September 5, 2021
ಇದನ್ನೂ ಓದಿ:
Puneeth Rajkumar: ಕೊಪ್ಪಳದ ಸ್ಥಳೀಯ ಕಲಾವಿದರ ಪ್ರದರ್ಶನಕ್ಕೆ ಮನಸೋತ ಅಪ್ಪು; ವಿಡಿಯೊ ನೋಡಿ
Published On - 8:32 pm, Tue, 7 September 21