ಅವರಿಬ್ಬರೂ ಕಾಲೇಜು ದಿನಗಳಿಂದ ಪರಸ್ಪರ ಇಷ್ಟಪಟ್ಟವರು. ಅಲ್ಲದೇ ನಾಲ್ಕೈದು ವರ್ಷಗಳ ಪ್ರೀತಿಯ ಬಳಿಕ ಮದುವೆಯಾಗೋಕೆ ರೆಡಿಯಾಗಿದ್ರು. ಆದ್ರೆ ಹುಡುಗಿಯ ಕುಟುಂಬ ಮಾತ್ರ ಮದುವೆಗೆ ಒಪ್ಪಿರಲಿಲ್ಲ. ಕುಟುಂಬಸ್ಥರ ವಿರೋಧದ ನಡುವೆಯೂ ಲವ್ ಮ್ಯಾರೇಜ್ (love marriage) ಆದ ಜೋಡಿಗೆ ಜೀವ ಭಯ ಶುರುವಾಗಿದೆ. ಯಾಕೆಂದರೆ ಹೆತ್ತ ತಂದೆಯೇ ಸುಪಾರಿ ನೀಡಿದ್ದಾನೆ. ಹಾಗಿದ್ರೆ ಏನೀದು ಲವ್ ಸ್ಟೊರಿ ಅಂತಿರಾ? ಓದಿ ನೋಡಿ. ನವ ಜೋಡಿ (son in law) ಜೀವ ಭಯದಿಂದ ಓಡಾಡುತ್ತಿದೆ. ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆಯಾದರೂ ಜೀವನ ಮಾಡೋಕೆ ಹೆತ್ತವರು ಬಿಡ್ತಿಲ್ಲ. ಹೆತ್ತ ಮಗಳು ಮತ್ತು ಅಳಿಯನನ್ನೇ ಕೊಲ್ಲಿಸೋಕೆ ಸುಪಾರಿ (supari) ನೀಡಿರುವ ತಂದೆ. ಯಸ್ ಇಂತಹ ದೃಶ್ಯಗಳೆಲ್ಲಾ ಕಂಡು ಬಂದಿರುವುದು ಕೊಪ್ಪಳ ಜಿಲ್ಲೆಯಲ್ಲಿ (koppal police). ಅಂದಹಾಗೇ ಈ ದೃಶ್ಯದಲ್ಲಿ ಕಾಣ್ತಿರೋ ಇದೇ ಸಂದೀಪ್ ಹಾಗೂ ಲಕ್ಷ್ಮೀಪ್ರಿಯ ಎಂಬ ಪ್ರೇಮಿಗಳೇ ಸದ್ಯ ಜೀವ ಭಯದಲ್ಲಿ ಜೀವನ ಕಳೆಯುಂತಾಗಿದೆ. ಯಾಕೆಂದ್ರೆ ಹೆತ್ತವರ ವಿರೋಧದ ನಡುವೆಯು ರಿಜಿಸ್ಟ್ರಾರ್ ಮ್ಯಾರೆಜ್ ಆಗಿರೋ ಈ ಜೋಡಿ, ಊರು ತೊರೆದು ಅಲೆದಾಡವಂತಾಗಿದೆ.
ಈ ಲಕ್ಷ್ಮೀಪ್ರಿಯ ಹಾಗೂ ಸಂದೀಪ್ ಕಳೆದ ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೆ ಇಬ್ಬರೂ ಮನೆಯವರಿಗೆ ಒಪ್ಪಿಸಿ ಎಲ್ಲರ ಸಮ್ಮುಖದಲ್ಲಿ ಮದುವೆಯಾಗೋಕೆ ನಿರ್ಧರಿಸಿದ್ದರು. ಆದ್ರೆ ಲಕ್ಷ್ಮೀ ತಂದೆ ಮಾತ್ರ ಇದಕ್ಕೆ ಒಪ್ಪಿರಲಿಲ್ಲ. ಯಾಕೆಂದ್ರೆ ಶ್ರೀನಿವಾಸ್ ಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅದರಲ್ಲಿ ಲಕ್ಷ್ಮೀಯೇ ಹಿರಿಯ ಪುತ್ರಿ. ಅಲ್ಲದೇ ಕೊಟ್ಯಾಂತರ ರೂಪಾಯಿ ಆಸ್ತಿ ಇರುವವರು.
ಆಸ್ತಿ ಹೊಡೆಯಲು ಸಂದೀಪ್ ಈ ರೀತಿ ಸ್ಕೆಚ್ ಹಾಕಿದ್ದಾನೆಂದು ಪುತ್ರಿಯ ಬಳಿ ಗೋಳಾಡಿದ್ದರಂತೆ. ಆದರೆ ಲಕ್ಷ್ಮೀ ಮಾತ್ರ ಇದನ್ನು ಸುತಾರಂ ಒಪ್ಪಿಲ್ಲ. ಆದರೆ ಸಂದೀಪನನ್ನೇ ತಾನು ಮದುವೆಯಾಗೋದು ಎಂದು ಮಾರುತ್ತರ ಕೊಟ್ಟಳಂತೆ. ಅದಕ್ಕಾಗೇ ಸದ್ಯ ತನ್ನ ಮಾತು ಮೀರಿ ಸಂದೀಪ್ ಜೊತೆ ಹೋಗಿ ಮದುವೆಯಾಗಿದ್ದಕ್ಕೆ ಹೆತ್ತ ಮಗಳು ಮತ್ತು ಅಳಿಯನ್ನೆ ಕೊಲ್ಲಿಸೋಕೆ ತನ್ನಪ್ಪ ಲಕ್ಷ ಲಕ್ಷ ಸುಪಾರಿ ನೀಡಿದ್ದಾರೆ ಎಂದು, ಕರುಳ ಬಳ್ಳಿಯೇ ಆರೋಪಿಸುತ್ತಿದೆ.
ಸಂದೀಪ್ ಮತ್ತು ಲಕ್ಷ್ಮೀದು ಅಕ್ಕಪಕ್ಕದ ಊರು. ಕಾಲೇಜು ದಿನದಿಂದಲೇ ಇಬ್ಬರೂ ಪರಸ್ಪರ ಪ್ರೀತಿಸಿದ್ದರು. ಹೈದರಾಬಾದ್ ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿರೋ ಸಂದೀಪ್ ಹೊಸ ಜೀವನ ಶುರು ಮಾಡೋಕೆ ನಿರ್ಧರಿಸಿದ್ದ. ಅತ್ತ ಲಕ್ಷ್ಮೀ ಕೂಡಾ ಡಬಲ್ ಗ್ರ್ಯಾಜುಯೇಟ್ ಮುಗಿಸಿರೋದ್ರಿಂದ, ಇಬ್ಬರೂ ಮದುವೆ ಮಾಡಿಕೊಂಡಿದ್ದಾರೆ. ಆದ್ರೆ ಲಕ್ಷ್ಮೀ ಮನೆಯವರು ಮಾತ್ರ ಇದಕ್ಕೆ ಮೊದಲಿನಿಂದಲೂ ವಿರೋಧಿಸಿದ್ದರಂತೆ.
ಮನೆಯಲ್ಲೆ ಕುಡಿಯುವ ಹಾಲಿಗೆ ವಿಷ ಹಾಕಿಸಿ, ಕೊಲ್ಲುವುದಕ್ಕೆ ನಿರ್ಧರಿಸಿದ್ದರಂತೆ. ಆದ್ರೆ ಈ ವಿಷಯ ಲಕ್ಷ್ಮೀಗೆ ಗೊತ್ತಾಗಿ, ಸಂದೀಪ್ ಗೆ ಮುನ್ಸೂಚನೆ ಕೊಟ್ಟಿದ್ದಳಂತೆ. ಕೂಡಲೆ ಸಂದೀಪ್ ಆಕೆಯನ್ನ ಮನೆಯಿಂದ ಕರೆದುಕೊಂಡು ಬಂದು ಮದುವೆಯಾಗಿದ್ದಾನೆ. ಆದ್ರೂ ನೆಮ್ಮದಿಯಿಂದ ಬದುಕಲು ಬಿಡ್ತಿಲ್ಲ. ನಮ್ಮ ಜೀವಗಳಿಗೆ ರಕ್ಷಣೆ ಕೊಡಿ ಅಂತಾ ಜಿಲ್ಲಾ ಎಸ್ಪಿಗೆ ನವ ಜೋಡಿ ಮೊರೆ ಹೋಗಿದೆ.
ಖುದ್ದು ಕೊಪ್ಪಳ ಎಸ್ಪಿ ಅರುಣಾಂಗ್ಶು ಗಿರಿ ಅವರಿಗೆ ದೂರು ನೀಡಿರೋ ನವ ಜೋಡಿ, ನಮ್ಮನ್ನು ಹೇಗಾದರೂ ಕಾಪಾಡಿ ಎನ್ನುತ್ತಿದೆ. ಕಳೆದೊಂದು ವಾರದಿಂದ ಊರು ಬಿಟ್ಟು ಅಲೆಮಾರಿಯಾಗಿರೋ ಈ ಜೋಡಿ ಪೊಲೀಸರಿಂದ ರಕ್ಷಣೆ ಬೇಡುತ್ತಿದೆ. ಅದೇನೆ ಇರಲಿ ಪ್ರೀತಿಸಿದ ತಪ್ಪಿಗೆ ಹೆತ್ತವರು ನವಜೋಡಿಯನ್ನೆ ಕೊಲ್ಲಿಸೋಕೆ ಹೊರಟಿರುವುದು ನಿಜಕ್ಕೂ ದುರಂತವೇ ಸರಿ.
ವರದಿ: ದತ್ತಾತ್ರೇಯ ಪಾಟೀಲ್, ಟಿವಿ 9, ಕೊಪ್ಪಳ