ಕೊಪ್ಪಳ: ಆರೋಗ್ಯ ಇಲಾಖೆ (Health Department) ಸಿಬ್ಬಂದಿ ಎಡವಟ್ಟಿನಿಂದ ವ್ಯಕ್ತಿಯೊರ್ವರು ಕೈ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ ಘಟನೆ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಬಳಿ ನಡೆದಿದೆ. ಜೀವ ಉಳಿಸುವ ವ್ಯಾಕ್ಸಿನೇಷನ್ (Vaccination) ಕಂಠಕವಾಗಿದೆ. ಕೊಪ್ಪಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸರಿಯಾಗಿ ಕೈಗೆ ಲಸಿಕೆ ಹಾಕದ ಹಿನ್ನೆಲೆ, ಬಹದ್ದೂರಬಂಡಿ ನಿವಾಸಿ ಹನುಮಂತಪ್ಪ ತಳವಾರ್ ಕೈ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಕಳೆದ ಅಕ್ಟೋಬರ್ 4 ರಂದು ಬಹದ್ದೂರಬಂಡಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಕೊವಿಡ್ ಲಿಸಿಕೆ (Corona vaccine) ಹಾಕಿಸಿಕೊಂಡಿದ್ದ ಹನುಮಂತಪ್ಪನ ಕೈಗೆ ಗಂಭೀರ ಗಾಯವಾಗಿದೆ.
ಸ್ಟಾಫ್ ನರ್ಸ್ ಪ್ರಭಾವತಿ ಎನ್ನುವರು ಹನುಮಂತಪ್ಪನ ಕೈಗೆ ಲಸಿಕೆ ಹಾಕಿದ್ದರು. ಪ್ರಭಾವತಿ ಹನುಮಂತಪ್ಪನ ಕೈಗೆ ಸರಿಯಾಗಿ ಲಸಿಕೆ ಹಾಕದ ಹಿನ್ನಲೆಯಲ್ಲಿ, ವ್ಯಾಕ್ಸಿನೇಷನ್ ಹಾಕಿಸಿಕೊಂಡ ನಾಲ್ಕು ದಿನದಲ್ಲಿ ಹನುಮಂತಪ್ಪನ ಕೈಯಲ್ಲಿ ಬಾವು ಕಾಣಿಸಿಕೊಂಡಿದೆ. ಬಳಿಕ ಹನುಮಂತಪ್ಪನ ಕೈಗೆ ಗಂಭೀರ ಗಾಯವಾಗಿದೆ. ಕೈ ಗಾಯದ ಕುರಿತು ಹನುಮಂತಪ್ಪ ಆರೋಗ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ.
ಈ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾದ ಹನುಮಂತಪ್ಪ ಅಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಆರೋಗ್ಯ ಇಲಾಖೆಯವರ ಎಡವಟ್ಟಿನಿಂದ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಹನುಮಂತಪ್ಪ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವ್ಯಾಕ್ಸೀನ್ ಹಾಕಿಸಿಕೊಂಡು ವ್ಯಕ್ತಿಯ ಕೈಗೆ ಗಾಯ ಪ್ರಕರಣ: ಕೊಪ್ಪಳ ಡಿಎಚ್ಒ ಅಲಕನಂದ ಸ್ಪಷ್ಟನೆ
ವ್ಯಾಕ್ಸೀನ್ ಹಾಕಿಸಿಕೊಂಡು ವ್ಯಕ್ತಿಯ ಕೈಗೆ ಗಾಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಎಚ್ಒ ಅಲಕನಂದ ಸ್ಪಷ್ಟನೆ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ 98 ಲಕ್ಷ ಡೋಸ್ ವ್ಯಾಕ್ಸೀನ್ ಹಾಕಲಾಗಿದೆ. ಈ ರೀತಿಯ ಘಟನೆಯಾಗಿರುವ ಪ್ರಕರಣ ಪತ್ತೆ ಆಗಿಲ್ಲ. ಕೆಲ ಕಡೆ ಒಂದಷ್ಟು ಬಾವು ಬಂದು ಗುಣಮುಖ ಆಗಿದ್ದಾರೆ. ಇಂಥ ಪ್ರಕರಣಗಳೂ ತೀರಾ ವಿರಳ ಎಂದು ಹೇಳಿದ್ದಾರೆ.
ಹನುಮಂತಪ್ಪ ಅವರಿಗೆ ಹೀಗಾಗಿರುವ ಬಗ್ಗೆ ತನಿಖೆ ಮಾಡುತ್ತೇವೆ. ಇದಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಮಾಡುತ್ತೇವೆ. ಸಮಸ್ಯೆಗೆ ಒಳಗಾದವರಿಗೂ ಸೂಕ್ತ ಚಿಕಿತ್ಸೆ ನೀಡಲಾಗುವುದು. ವ್ಯಾಕ್ಸೀನ್ ಹಾಕಲು ಹಗಲಿರುಳು ಶ್ರಮಿಸುವ ಆರೋಗ್ಯ ಸಿಬ್ಬಂದಿ ಶ್ರಮವನ್ನೂ ನಾವು ಸ್ಮರಿಸಬೇಕಿದೆ ಎಂದು ಕೊಪ್ಪಳ ಡಿಎಚ್ಒ ಅಲಕನಂದ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:
ಮಾರ್ಚ್ನಿಂದ 12-14ವರ್ಷದವರಿಗೆ ಕೊರೊನಾ ಲಸಿಕೆ ನೀಡಿಕೆ; ಆರೋಗ್ಯ ತಜ್ಞ ಎನ್.ಕೆ.ಅರೋರಾ ಮಾಹಿತಿ
ಕೋವಿಡ್ ಲಸಿಕೆ ಅಭಿಯಾನದಡಿ ಭಾರತ ಮಾಡಿರುವ ಸಾಧನೆಯನ್ನು ಇಡೀ ವಿಶ್ವ ಬೆರಗುಗಣ್ಣುಳಿಂದ ನೋಡುತ್ತಿದೆ!!
Published On - 3:00 pm, Tue, 18 January 22