ಸಿದ್ದರಾಮಯ್ಯ ಎರಡು ತಲೆಯುಳ್ಳ ಹಾವು, ಅವರ ನಾಲಿಗೆ ಸೀಳು ನಾಲಿಗೆ‌ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಾರಿಗೆ ಸಚಿವ ಶ್ರೀರಾಮುಲು

| Updated By: ಆಯೇಷಾ ಬಾನು

Updated on: Jun 09, 2022 | 1:03 PM

ಸಿದ್ದರಾಮಯ್ಯ ಬೆಳಗ್ಗೆ ಒಂದು, ಸಂಜೆಯೊಂದು ಮಾತಾಡ್ತಾನೆ. ಯಾಕಂದ್ರೆ ಸಿದ್ದರಾಮಯ್ಯನವರ ನಾಲಿಗೆ ಸೀಳು ನಾಲಿಗೆ‌. ಸೀಳು ನಾಲಿಗೆ ಇಟ್ಟುಕೊಂಡು ಸಿದ್ದರಾಮಯ್ಯ ಮಾತಾಡ್ತಿದ್ದಾನೆ. ಸಿದ್ದರಾಮಯ್ಯ ಘನತೆಗೆ ತಕ್ಕಂತೆ ಮಾತಾಡಲಿ.

ಸಿದ್ದರಾಮಯ್ಯ ಎರಡು ತಲೆಯುಳ್ಳ ಹಾವು, ಅವರ ನಾಲಿಗೆ ಸೀಳು ನಾಲಿಗೆ‌ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಾರಿಗೆ ಸಚಿವ ಶ್ರೀರಾಮುಲು
ಸಾರಿಗೆ ಸಚಿವ ಶ್ರೀರಾಮುಲು
Follow us on

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ‌ ಪಂಪಾ ಸರೋವರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಎರಡು ತಲೆಯುಳ್ಳ ಹಾವು ಎಂದು ಪಂಪಾ ಸರೋವರದಲ್ಲಿ ಏಕವಚನದಲ್ಲೇ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಬೆಳಗ್ಗೆ ಒಂದು, ಸಂಜೆಯೊಂದು ಮಾತಾಡ್ತಾನೆ. ಯಾಕಂದ್ರೆ ಸಿದ್ದರಾಮಯ್ಯನವರ ನಾಲಿಗೆ ಸೀಳು ನಾಲಿಗೆ‌. ಸೀಳು ನಾಲಿಗೆ ಇಟ್ಟುಕೊಂಡು ಸಿದ್ದರಾಮಯ್ಯ ಮಾತಾಡ್ತಿದ್ದಾನೆ. ಸಿದ್ದರಾಮಯ್ಯ ಘನತೆಗೆ ತಕ್ಕಂತೆ ಮಾತಾಡಲಿ. ಸಿದ್ದರಾಮಯ್ಯ ಒಂದು ಪಕ್ಷದಲ್ಲೂ ಪ್ರಾಮಾಣಿಕವಾಗಿಲ್ಲ. ಅವರ ಪಾರ್ಟಿ ಅಲ್ಲೆ ಅವರ ಮಾತಿಗೆ ಕಿಮ್ಮತ್ತು ಕೊಡ್ತಿಲ್ಲ. ಎಲ್ಲ ಪಕ್ಷಗಳನ್ನು ಮುಗಿಸಿಯೇ ಇದೀಗ ಇಲ್ಲಿ ಬಂದಿದ್ದಾನೆ. ಈಗಾಗಲೇ ದೇವೇಗೌಡ, ಕುಮಾರಸ್ವಾಮಿಯನ್ನ ಮುಗಿಸಿದ್ದಾನೆ. ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿಗೆ ಹೇಗೆ ಮುಗಿಸಬೇಕು ಅಂತಾ ಚೆಸ್ ಆಟ ಆಡ್ತಿದ್ದಾನೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೋ ಭ್ರಮೆಯಲ್ಲಿದ್ದಾನೆ ಎಂದು ಸಚಿವ ಶ್ರೀರಾಮುಲು ಏಕವಚನದಲ್ಲೇ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಪ್ರಾರ್ಥನೆ ವಿವಾದ ಶುರು! ಹಿಂದೂಗಳಿಗೊಂದು, ಅನ್ಯ ಧರ್ಮಗಳಿಗೊಂದು ನ್ಯಾಯನಾ? ಸರ್ಕಾರಕ್ಕೆ ಹಿಂದೂಪರ ಸಂಘಟನೆಗಳ ಪ್ರಶ್ನೆ

ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರನ ತರಹ ಮಾತನಾಡುತ್ತಾನೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮಾತು ಯಾರೂ ಕೇಳಲ್ಲ. ಬಾದಾಮಿಯಲ್ಲೂ ಸಿದ್ದರಾಮಯ್ಯ ವರ್ಚಸ್ಸು ಕಳೆದುಕೊಂಡಿದ್ದಾರೆ. ಅಲ್ಲಿ ಚಿಮ್ಮನಕಟ್ಟಿ & ಎಸ್.ಆರ್.ಪಾಟೀಲ್ರನ್ನು ಮುಗಿಸಿದ್ದಾನೆ. ಸಿದ್ದರಾಮಯ್ಯ ಎಲ್ಲಿಲ್ಲಿ ಹೋಗ್ತಾನೆ ಅವರೆಲ್ಲರನ್ನು ಮುಗಿಸ್ತಾನೆ. ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಅವರನ್ನ ಮುಗಿಸಿದ್ದಾನೆ. ಇದೀಗ ಡಿಕೆಶಿಯನ್ನು ಸಹ ಸಿದ್ದರಾಮಯ್ಯ ಮುಗಿಸಲಿದ್ದಾನೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ  ಕ್ಲಿಕ್ ಮಾಡಿ

ಸಿದ್ದರಾಮಯ್ಯ ವಿರುದ್ಧ ರವಿಕುಮಾರ್ ಅಸಮಾಧಾನ
ಇನ್ನು ಮತ್ತೊಂದು ಕಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನ ಸೀಳು ನಾಯಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಬಿಜೆಪಿ ಎಂಎಲ್‌ಸಿ ರವಿಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯನವರು ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರನ್ನ ಅವಹೇಳನ ಮಾಡೋದನ್ನ ನೋಡಿದ್ರೇ ನಮಗೆ ಬಹಳ ಬೇಸರ, ನೋವಾಗುತ್ತೆ. ನಾವು ಕಷ್ಟಪಟ್ಟು ಮನೆ ಮನೆಗೆ ಹೋಗಿ ಸಂಘಟನೆ ಬೆಳೆಸಿದ್ದೇವೆ. ನಮ್ಮವರಿಗೆ ಬೈದಾಗ ಬಹಳ ಬೇಸರವಾಗಿ ನಾವೆಲ್ಲರೂ ರಿಯಾಕ್ಟ್ ಮಾಡುತ್ತೇವೆ. ಸಿದ್ದರಾಮಯ್ಯನವರು ಯಾರೋ ಕಟ್ಟಿದ ಮನೆಯಲ್ಲಿ ಬಂದು ಅವಿತುಕೊಂಡವರು. ಕಾಂಗ್ರೆಸ್ನ ಸಿದ್ದರಾಮಯ್ಯನವರು ಕಟ್ಟಿದ್ದಾರಾ? ಕಾಂಗ್ರೆಸ್ ಕಟ್ಟಿದ್ದವರು ಯಾರೋ ಬೇರೆಯವರಿದ್ದಾರೆ. ಕಟ್ಟಿದ ಮನೆಯಲ್ಲಿ ಬಂದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯಗೆ ಯಾವ ಪೇನ್ ಇದೆ.

ಯಾವ ನೋವಿದೆ. ಬಿಜೆಪಿ, ಆರ್‌ಎಸ್ಎಸ್‌ಗೆ ಬೈದಾಗ ಆ ನೋವಿರೋದಕ್ಕೆ ನಾವು ರಿಯಾಕ್ಟ್ ಮಾಡ್ತೇವಿ. ಸಿದ್ದರಾಮಯ್ಯನವರು ಮಾತನಾಡಿದಾಗ ಕಾಂಗ್ರೆಸ್ ನವರು ಯಾಕೆ ರಿಯಾಕ್ಟ್ ಮಾಡಲ್ಲ. ಕಾಂಗ್ರೆಸ್ ನವರಿಗೆ ಆರ್‌ಎಸ್‌ಎಸ್ ಬಗ್ಗೆ ಗೌರವ ಇದೆ. ಆರ್‌ಎಸ್‌ಎಸ್ ನಲ್ಲಿದ್ದವರು ಕೆಲವರು ಕಾಂಗ್ರೆಸ್ ನಲ್ಲಿದ್ದಾರೆ. ಸಿದ್ದರಾಮಯ್ಯನವರನ್ನ ಬಿಟ್ಟು ಅನೇಕ ಪ್ರಮುಖರಿದ್ದಾರೆ. ಅವರ ಹೆಸರನ್ನ ನಾನು ಹೇಳುವುದಿಲ್ಲ. ಆರ್‌ಎಸ್‌ಎಸ್ ಬಗ್ಗೆ ಸಿದ್ದರಾಮಯ್ಯನವರು ಅಸತ್ಯವನ್ನ ನುಡಿಯುತ್ತಾರೆ. ಹೀಗಾಗಿ ಅವರಿಗೆ ಕಾಂಗ್ರೆಸ್ನಲ್ಲಿ ಸಪೋರ್ಟ್ ಸಿಗುವುದಿಲ್ಲ. ಸಿದ್ದರಾಮಯ್ಯನವರು ಇದೇ ರೀತಿ ಮಾತಾಡಿದ್ರೇ ಕಾಂಗ್ರೆಸ್ ನಲ್ಲಿ ಆಧಾರ ರಹಿತ ಇರಬೇಕಾಗುತ್ತೆ ಎಂದು ಸಿದ್ದರಾಮಯ್ಯ ವಿರುದ್ಧ ರವಿಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: Purushottama Kanagal Death: ಚಿತ್ರಸಾಹಿತಿ ಪುರುಷೋತ್ತಮ ಕಣಗಾಲ್ ನಿಧನ