ಕಿರುಕುಳ ಆರೋಪ: ಕೊಪ್ಪಳದಲ್ಲಿ ನರ್ಸಿಂಗ್​ ಆಫೀಸರ್​ ಆತ್ಮಹತ್ಯೆಗೆ ಯತ್ನ

| Updated By: ರಮೇಶ್ ಬಿ. ಜವಳಗೇರಾ

Updated on: Nov 18, 2024 | 4:19 PM

ಸರ್ಕಾರಿ ಉದ್ಯೋಗಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿತ್ತಿವೆ. ಮೊನ್ನೆ ಅಷ್ಟೇ ಬೆಳಗಾವಿಯಲ್ಲಿ ಎಸ್​ಡಿಎ ತಹಶೀಲ್ದಾರ್ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಕೊಪ್ಪಳದಲ್ಲಿ ನರ್ಸಿಂಗ್​ ಆಫೀಸರ್​ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಕಿರುಕುಳ ಆರೋಪ: ಕೊಪ್ಪಳದಲ್ಲಿ ನರ್ಸಿಂಗ್​ ಆಫೀಸರ್​ ಆತ್ಮಹತ್ಯೆಗೆ ಯತ್ನ
ಕೊಪ್ಪಳದಲ್ಲಿ ನರ್ಸಿಂಗ್​ ಆಫೀಸರ್​ ಆತ್ಮಹತ್ಯೆಗೆ ಯತ್ನ
Follow us on

ಕೊಪ್ಪಳ, (ನವೆಂಬರ್ 18): ಕೊಪ್ಪಳ ಜಿಲ್ಲಾಸ್ಪತ್ರೆ ಬಳಿ ನರ್ಸಿಂಗ್​ ಆಫೀಸರ್​ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಕೊಪ್ಪಳ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ನಿದ್ರೆ ಮಾತ್ರೆ ಸೇವಿಸಿ ನರ್ಸಿಂಗ್ ಆಫೀಸರ್ ಶಶಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಸಹೋದ್ಯೋಗಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿರುವ ನರ್ಸಿಂಗ್ ಆಫೀಸರ್ ಶಶಿ ಅವರನ್ನು ಸಹೋದ್ಯೋಗಿಗಳು, ಸ್ಥಳೀಯರು ಸೇರಿಕೊಂಡು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವರ ಕಿರುಕುಳದಿಂದಲೇ ಆತ್ಮಹತ್ಯಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಪುತ್ತೂರಿನಲ್ಲೊಂದು ಅಮಾನವೀಯ ಘಟನೆ: ಮೃತ ಕಾರ್ಮಿಕನ ಶವ ರಸ್ತೆ ಬದಿ ಮಲಗಿಸಿ ಹೋದ ಮಾಲೀಕ

ನರ್ಸಿಂಗ್​ ಆಫೀಸರ್ ಶಶಿ ಅವರು ಇತ್ತೀಚೆಗೆ ಇತ್ತೀಚಿಗೆ ನಡೆದಿದ್ದ ನೌಕರರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದ್ರೆ, ಸಹೋದ್ಯೋಗಿಗಳು ಶಶಿ ಅವರ ಮನವೊಲಿಸಿ ನಾಮಪತ್ರ ಹಿಂದಕ್ಕೆ ತೆಗೆಸಿದ್ದರು. ಬಳಿಕ ಇದೇ ಚುನಾವಣೆ ವಿಚಾರದಲ್ಲಿ ಕೆಲವರು ಕಿರುಕುಳದ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮೊನ್ನೇ ಅಷ್ಟೇ ಬೆಳಗಾವಿಯಲ್ಲಿ ಗುರಿಯಾಗಿಸಿಕೊಂಡೇ ವರ್ಗಾವಣೆ ಮಾಡಿರುವ ಆರೋಪದಿಂದ ಮನನೊಂದು ಎಸ್​ಡಿಎ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಆಪ್ತ ಸಹಾಯಕನ ಹೆಸರು ಕೇಳಿಬಂದಿದ್ದು, ಬಳಿಕ ಈ ಪ್ರಕರಣ ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಂಡಿತ್ತು.

ಬಿಜೆಪಿ ನಾಯಕರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ  ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಅವರ ರಾಜೀನಾಮೆಗೆ ಆಗ್ರಹಿಸಿದ್ದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ