ಜಮೀರ್ ಅಹ್ಮದ್ನನ್ನು ಮುಂದಿಟ್ಟುಕೊಂಡು ರೈತರ ಜಮೀನುಗಳನ್ನು ಕಬಳಿಸುವ ಹುನ್ನಾರ ಸರ್ಕಾರದ್ದು: ಜನಾರ್ಧನರೆಡ್ಡಿ
ಉಪ ಚುನಾವಣೆಗಳು ರಾಜ್ಯದಲ್ಲಿ ನಡೆಯದೇ ಹೋಗಿದ್ದರೆ ಸಿದ್ದರಾಮಯ್ಯ ಸರ್ಕಾರ ವಕ್ಫ್ ಬೋರ್ಡ್ ರೈತರಿಗೆ ಜಾರಿಮಾಡಿದ ನೋಟೀಸ್ಗಳನ್ನು ವಾಪಸ್ಸು ಪಡೆಯುತ್ತಿರಲಿಲ್ಲ, ಚುನಾವಣೆಯ ಹಿನ್ನೆಲೆಯಲ್ಲಿ ಅವುಗಳನ್ನು ವಾಪಸ್ಸು ಪಡೆಯುವಂತೆ ಸಿದ್ದರಾಮಯ್ಯನವರು ಕೇವಲ ಮೌಖಿಕ ಅದೇಶ ನೀಡಿದ್ದಾರೆ ಎಂದು ಜನಾರ್ಧನ ರೆಡ್ಡಿ ಹೇಳಿದರು.
ಕೊಪ್ಪಳ: ದೇಶದೆಲ್ಲೆಡೆ ರೈತರ, ಮಠಮಾನ್ಯಗಳ ಲಕ್ಷಾಂತರ ಎಕರೆಗಳಷ್ಟು ಜಮೀನನ್ನು ವಕ್ಫ್ ಬೋರ್ಡ್ ಕಬಳಿಸುವುದನ್ನು ತಡೆಯಲು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನದಲ್ಲಿದ್ದಾರೆ ಮತ್ತು ಮುಂದಿನ ಸಂಸತ್ ಅಧಿವೇಶನದಲ್ಲಿ ಮಸೂದೆ ಅನುಮೋದನೆ ಪಡೆದುಕೊಳ್ಳುವ ನಿರೀಕ್ಷೆ ಕೂಡ ಇರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರವು ಜಮೀರ್ ಅಹ್ಮದ್ ಹೆಸರಿನ 420 ಮಂತ್ರಿಯನ್ನು ಮುಂದಿಟ್ಟುಕೊಂಡು ರೈತರಿಗೆ ನೋಟೀಸ್ ಗಳನ್ನು ಕೆಲಸ ಶುರುಮಾಡಿತ್ತು. ಅದರೆ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಬಿಜೆಪಿ ವಕ್ಫ್ ವಿರುದ್ಧ ಹೋರಾಟ ಶುರುಮಾಡಿದ ಬಳಿಕ ನೋಟೀಸ್ ಗಳನ್ನು ವಾಪಸ್ಸು ಪಡೆಯಲಾಗಿದೆ ಎಂದು ಬಿಜೆಪಿ ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಿತ್ರದುರ್ಗ ಮತದಾರರು ಬಿಜೆಪಿ ಪರ ಚಲಾಯಿಸುವ ಪ್ರತಿ ವೋಟು ತಂಗಡಗಿ ಕಪಾಳಕ್ಕೆ ಬಾರಿಸಿದಂತೆ: ಗಾಲಿ ಜನಾರ್ಧನರೆಡ್ಡಿ