Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ ಮತದಾರರು ಬಿಜೆಪಿ ಪರ ಚಲಾಯಿಸುವ ಪ್ರತಿ ವೋಟು ತಂಗಡಗಿ ಕಪಾಳಕ್ಕೆ ಬಾರಿಸಿದಂತೆ: ಗಾಲಿ ಜನಾರ್ಧನರೆಡ್ಡಿ

ಚಿತ್ರದುರ್ಗ ಮತದಾರರು ಬಿಜೆಪಿ ಪರ ಚಲಾಯಿಸುವ ಪ್ರತಿ ವೋಟು ತಂಗಡಗಿ ಕಪಾಳಕ್ಕೆ ಬಾರಿಸಿದಂತೆ: ಗಾಲಿ ಜನಾರ್ಧನರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 13, 2024 | 5:57 PM

ನಮ್ಮ ದೇಶದ ಸುಭದ್ರೆತೆಗೆ, ಅಭಿವೃದ್ಧಿಗೆ ನರೇಂದ್ರ ಮೋದಿಯವರು ಬೇಕು, ಅವರು ಪುನಃ ಪ್ರಧಾನಿಯಾಗಬೇಕು ಎಂದು ಹೇಳಿದ ಅವರು; ಹಬ್ಬ ಹರಿದಿನಗಳನ್ನು ನಾವೆಲ್ಲ ನಮ್ಮ ನಮ್ಮ ಕುಟುಂಬಗಳೊಂದಿಗೆ ಆಚರಿಸಿದರೆ ದೇಶಕ್ಕಾಗಿ ಕುಟುಂಬವನ್ನೇ ಪರಿತ್ಯಾಗ ಮಾಡಿರುವ ಮೋದಿಯವರು ಹಬ್ಬಗಳನ್ನು ಗಡಿಯಲ್ಲಿ ನಿಂತು ದೇಶ ಕಾಯುವ ಯೋಧರೊಂದಿಗೆ ಹಬ್ಬ ಆಚರಿಸುತ್ತಾರೆ ಎಂದು ಹೇಳಿದರು.

ಚಿತ್ರದುರ್ಗ: ಮೊನ್ನೆಯಷ್ಟೇ ತಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿರುವ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಇಂದು ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ (Govind Karjol) ಪರ ಮತ ಯಾಚಿಸಿದರು. ಇಂಡಿಯ ಒಕ್ಕೂಟ ಎಷ್ಟೇ ಒದ್ದಾಡಿದರೂ 100 ಸ್ಥಾನಗಳನ್ನು ಗೆಲ್ಲಲಾಗಲ್ಲ, ಹಾಗಿರುವಾಗ ಆ ಒಕ್ಕೂಟದ ಉಮೇದುವಾರರಿಗೆ ಮತ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ ಅದು ವ್ಯರ್ಥವಾಗುತ್ತದೆ ಎಂದು ರೆಡ್ಡಿ ಹೇಳಿದರು. ನಮ್ಮ ದೇಶದ ಸುಭದ್ರೆತೆಗೆ, ಅಭಿವೃದ್ಧಿಗೆ ನರೇಂದ್ರ ಮೋದಿಯವರು (Narendra Modi) ಬೇಕು , ಅವರು ಪುನಃ ಪ್ರಧಾನಿಯಾಗಬೇಕು ಎಂದು ಹೇಳಿದ ಅವರು; ಹಬ್ಬ ಹರಿದಿನಗಳನ್ನು ನಾವೆಲ್ಲ ನಮ್ಮ ನಮ್ಮ ಕುಟುಂಬಗಳೊಂದಿಗೆ ಆಚರಿಸಿದರೆ ದೇಶಕ್ಕಾಗಿ ಕುಟುಂಬವನ್ನೇ ಪರಿತ್ಯಾಗ ಮಾಡಿರುವ ಮೋದಿಯವರು ಹಬ್ಬಗಳನ್ನು ಗಡಿಯಲ್ಲಿ ನಿಂತು ದೇಶ ಕಾಯುವ ಯೋಧರೊಂದಿಗೆ ಹಬ್ಬ ಆಚರಿಸುತ್ತಾರೆ ಎಂದು ಹೇಳಿದರು.

ಇಂಥ ಮಹಾನ್ ನಾಯಕನ ಹೆಸರು ಹೇಳುವವರಿಗೆ ಕಪಾಳಕ್ಕೆ ಹೊಡೆಯಬೇಕು ಅಂತ ಕೊಪ್ಪಳದ ಮಂತ್ರಿ ಶಿವರಾಜ ತಂಗಡಗಿ ಹೇಳುತ್ತಾನೆ. ಅವನ ಹೇಳಿಕೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದುವರೆಗೆ ವಿಷಾದ ವ್ಯಕ್ತಪಡಿಸಿಲ್ಲ. ಅವನ ಕಪಾಳಕ್ಕೆ ಬಾರಿಸಲು ನನಗೆ ಒಂದು ನಿಮಿಷವೂ ಬೇಕಾಗಲ್ಲ, ಅದರೆ ಅವನ ಹಾಗೆ ಕೀಳು ವ್ಯಕ್ತಿತ್ವದ ನನ್ನದಲ್ಲ, ಮತದಾರರು ಗೋವಿಂದ ಕಾರಜೋಳ ಅವರಿಗೆ ಹಾಕುವ ಪ್ರತಿ ವೋಟು ತಂಗಡಿಯ ಕಪಾಳಕ್ಕೆ ಬಾರಿಸಿದಂತೆ ಎಂದು ಜನಾರ್ಧನ ರೆಡ್ಡಿ ಸಚಿವ ತಂಗಡಗಿ ವಿರುದ್ಧ ಬೆಂಕಿಯುಗುಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಮೋದಿ ಮೋದಿ ಘೋಷಣೆ ಕೂಗುವ ಯುವಕರು, ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು: ಸಚಿವ ಶಿವರಾಜ ತಂಗಡಗಿ