AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Koppal News: ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಕಾಲೇಜು ಗೋಡೆಗಳ ಮೇಲೆ ಅಶ್ಲೀಲ ಬರಹ

ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಕಿಡಿಗೇಡಿಗಳ ಕಾಟ ಮತ್ತೆ ಆರಂಭವಾಗಿದೆ. ಕಿಡಗೇಡಿಗಳು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಕಾಲೇಜಿನ ಗೋಡೆಗಳ ಮೇಲೆ ಅಶ್ಲೀಲವಾಗಿ ಬರೆದಿದ್ದಾರೆ.

Koppal News: ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಕಾಲೇಜು ಗೋಡೆಗಳ ಮೇಲೆ ಅಶ್ಲೀಲ ಬರಹ
ಕಾಲೇಜಿನ ಗೋಡೆಗಳ ಮೇಲೆ ಅಶ್ಲೀಲ ಬರಹ
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ವಿವೇಕ ಬಿರಾದಾರ|

Updated on:Jul 16, 2023 | 11:45 AM

Share

ಕೊಪ್ಪಳ ಜು.16: ಜಿಲ್ಲೆಯ ಕನಕಗಿರಿ (Kanakagiri) ಪಟ್ಟಣದ ‘ಪದವಿ ಪೂರ್ವ ಸರ್ಕಾರಿ ಕಾಲೇಜಿನಲ್ಲಿ (Government College) ಕಿಡಿಗೇಡಿಗಳ ಕಾಟ ಮತ್ತೆ ಆರಂಭವಾಗಿದೆ. ಕಿಡಗೇಡಿಗಳು ವಿದ್ಯಾರ್ಥಿನಿಯರನ್ನು (Students) ಗುರಿಯಾಗಿಸಿಕೊಂಡು ಕಾಲೇಜಿನ ಗೋಡೆಗಳ ಮೇಲೆ ಅಶ್ಲೀಲವಾಗಿ ಬರೆದಿದ್ದಾರೆ. ಈ ಬರಹಗಳನ್ನು ಕಂಡು ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತಿದ್ದಾರೆ. ಈ ವಿಕೃತ ಘಟನೆಯಿಂದ ವಿದ್ಯಾರ್ಥಿನಿಯರು ಮಾನಸಿಕ ಖಿನ್ನತೆ ಒಳಗಾಗುವ ಆತಂಕ ಎದುರಾಗಿದೆ. ಇದರಿಂದ ಕೆಲ ಪಾಲಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಮನೆಯಲ್ಲಿ ಕೂರಿಸುತ್ತಿದ್ದಾರೆ. ಈ ಪ್ರಕರಣ ಪೋಷಕರನ್ನು ದಿನೇ ದಿನೇ ಆತಂಕಕ್ಕೆ ದೂಡುತ್ತಿದೆ. ಈ ಘಟನೆ ಇಡೀ ಕನಕಗಿರಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಆದರೆ, ಇದರ ಹಿಂದಿನ ಮುಖ ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.

ಕಳೆದ ಒಂದು ವರ್ಷದಿಂದ ಈ ರೀತಿ ಅಶ್ಲೀಲ‌ ಬರಹದ ಘಟನೆಗಳು ನಡೆಯುತ್ತಲೇ ಇವೆ. ಕಳೆದ ವಾರ ಜುಲೈ 10 ರಂದು ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೋಲೀಸರು ತನಿಖೆ ಆರಂಭಿಸಿದ್ದಾರೆ. ಈ ನಡುವೆ ಮತ್ತೆ ಕಿರಾತಕರು ಶನಿವಾರ ಕನಕಗಿರಿ ಜೂನಿಯರ್ ಕಾಲೇಜು ಗೋಡೆ ಮೇಲೆ ಅಶ್ಲೀಲ ಬರಹದ ಮೂಲಕ ವಿಕೃತಿ ಹೊರ ಹಾಕಿದ್ದಾರೆ.

ಬರೆದಿದ್ದೇನು..?

ಚಿತ್ತಾರ ಬರೆದ ಶಾಲೆಯ ಹೊರ ಗೋಡೆ ಮೇಲೆ ಕಾಣದ ಕೈಗಳು ವಿಕೃತಿ ಹೊರ ಹಾಕುತ್ತಿವೆ. ಈ ಬಾರಿ ಅದೇ ಶಾಲೆಯಲ್ಲಿ ಓದುವ 8 ಅಪ್ರಾಪ್ತ ಬಾಲಕಿಯರ ಹೆಸರಿನೊಂದಿಗೆ ಅಸಹ್ಯವಾಗಿ ನಿಂದಿಸಿದ್ದಾರೆ. ಅವರ ಹೆಸರಿನ ಮುಂದೆ ಯುವಕರ ಹೆಸರು ಬರೆದಿದ್ದರೆ ಕೆಲ ಹೆಸರಿನ ಮುಂದೆ ಶಾಲೆ ಶಿಕ್ಷಕರ ಹೆಸರು ಬರೆದು ವಿಕೃತಿ ಮೆರೆದಿದ್ದಾರೆ. ಸಭ್ಯ ಸಮಾಜ ಓದುವುದಕ್ಕೂ ಅಸಹ್ಯ ಪಡುವ ಪದ ಬಳಕೆ ಮಾಡಿದ್ದಾರೆ. ಬರೆದ ಅಶ್ಲೀಲ‌ ಪದಗಳಿಗೆ ಬಣ್ಣ ಬಳಿಯುವುದೇ ಶಾಲಾ ಶಿಕ್ಷಕರಿಗೆ ನಿತ್ಯದ ಕೆಲಸವಾಗಿದೆ.

ಪೊಲೀಸ್ ವೈಫಲ್ಯ…?

ಪದೇ ಪದೇ ಈ ರೀತಿ ಅಶ್ಲೀಲವಾಗಿ ಬರೆಯುತ್ತಿದ್ದರೂ ಕೊಪ್ಪಳ‌ ಜಿಲ್ಲಾ ಪೊಲೀಸ್ ಇಲಾಖೆ ಇದುವರೆಗೂ ಯಾರನ್ನೂ ಬಂಧಿಸದೇ ಇರುವುದು ಪೊಲೀಸರ ವೈಪಲ್ಯ ಎದ್ದುಕಾಣುತ್ತಿದೆ. ಅಥವಾ ಘಟನೆಯನ್ನ ಕನಕಗಿರಿ ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರಾ ಎನ್ನೋ ಅನುಮಾನ ಮೂಡಿದೆ. ಯಾಕೆಂದ್ರೆ ಕನಕಗಿರಿ ಪಟ್ಟಣದಲ್ಲಿ ಒಂದು ವರ್ಷದ ಹಿಂದೆ ಎರಡು ಬಾರಿ ಇಂಥ ಘಟನೆ ನಡೆದಿದ್ದು, ಆಗ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಮಾಡಿದ್ದರು. ಈವರೆಗೂ ಆರೋಪಿಗಳು ಪತ್ತೆ ಆಗಿಲ್ಲ. ಇದೀಗ ಮತ್ತೇ ಘಟನೆ ಮರುಕಳಿಸಿದೆ. ಜುಲೈ 10 ರಂದು ಸಾರ್ವಜನಿಕ ಸ್ಥಳದಲ್ಲಿ ಇಂಥ ಬರಹ ಬರೆಯಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕನಕಗಿರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ನಡುವೆ ಮತ್ತೇ ಘಟನೆ ಮರುಕಳಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ನನಗೆ ಸಹಕರಿಸುವಂತೆ ಸ್ಟಾಪ್ ನರ್ಸ್​ಗೆ ಕಿರುಕುಳ: ಸರ್ಕಾರಿ ವೈದ್ಯನ ವಿರುದ್ಧ ಪ್ರಕರಣ ದಾಖಲು

ಕನಕಗಿರಿಯಲ್ಲಿ ಸಿಸಿ ಕ್ಯಾಮೆರಾ ಕಡಿಮೆ ಇದ್ದು, ಸಿಸಿ ಕ್ಯಾಮೆರಾ ಹಾಕಲು ಶಾಲಾ ಆಡಳಿತ ಮಂಡಳಿಗೆ ಹೇಳಿದ್ದೆವೆ. ಫಿಂಗರ್ ಪ್ರಿಂಟ್, ಡಾಗ್ ಸ್ಕ್ವಾಡ್ ಕಳುಹಿಸಲಾಗಿದೆ. ಅಲ್ಲದೇ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಎಲ್ಲ ಆಯಾಮದಿಂದ ತನಿಖೆ ಮಾಡುತ್ತಿದ್ದೇವೆ. ಶೀಘ್ರ ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದು ಎಸ್​​​ಪಿ ಯಶೋಧ ವಂಟಗೋಡಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:19 am, Sun, 16 July 23

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ