ಕೊಪ್ಪಳ: ಸಾಲ ತೀರಬೇಕೆಂದ್ರೆ ಬೆತ್ತಲೆ ಪೂಜೆ ಮಾಡಬೇಕೆಂದು ಹೇಳಿ ಬಾಲಕನಿಂದ ಗ್ರಾಮಸ್ಥರು ಬೆತ್ತಲೆ ಪೂಜೆ ಮಾಡಿಸಿದ ಅಮಾನವೀಯ ಘಟನೆ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ನಡೆದಿದೆ. ಬಡತನದ ಬೇಗೆಯಿಂದ ಬಳಲುತ್ತಿದ್ದ 16 ವರ್ಷದ ಬಾಲಕನನ್ನು ಪುಸಲಾಯಿಸಿ ಆತನಿಗೆ ಬೆತ್ತಲೆ ಪೂಜೆ ಮಾಡುವಂತೆ ಗ್ರಾಮಸ್ಥರು ಸೂಚಿಸಿದ್ದು ಬೆತ್ತಲೆ ಪೂಜೆ ವಿಡಿಯೋ ವೈರಲ್ ಆಗಿದೆ. ಹಾಗೂ ವಿಕೃತ ಮೆರೆದವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಮಸ್ಯೆಗೆ ಪರಿಹಾರ ನೀಡುತ್ತೇವೆಂದು ಅಪ್ರಾಪ್ತ ಬಾಲಕನಿಗೆ ಬೆತ್ತಲೆ ಪೂಜೆ
ಅಪ್ಪನ್ನ ಸಾಲ ತೀರ ಬೇಕು, ಕೈ ತುಂಬಾ ಹಣ ಬೇಕು ಅಂದ್ರೆ ಬೆತ್ತಲೆ ಪೂಜೆ ಮಾಡಬೇಕು ಎಂದು ಗ್ರಾಮದ ಕೆಲವರು ಬಾಲಕನ ತಲೆ ಕೆಡಿಸಿದ್ದಾರೆ. ಬಡತನದ ಬೇಗೆಯಿಂದ ಬಳಲುತ್ತಿದ್ದ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ಬಾಲಕನನ್ನು ಪುಸಲಾಯಿಸಿ ಪರಿಚಯಸ್ಥರೇ ದ್ರೋಹ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ ಕಿರಾತಕರು ಬಾಲಕನ ಬೆತ್ತಲೆ ಪೂಜೆಯ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ನೊಂದ ಬಾಲಕ ಮತ್ತು ಕುಟುಂಬಸ್ಥರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಕೃತ ಮೆರೆದ ಶರಣಪ್ಪ, ಮರಿಗೌಡ, ಶರಣಪ್ಪ ತಳವರ್ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: Bus accident: ಉಧಮ್‌ಪುರದ ಮನ್ಸರ್ ಮೋರ್ಹ್‌ನಲ್ಲಿ ಬಸ್ ಅಪಘಾತ, 1 ಸಾವು, 10 ಮಂದಿಗೆ ಗಾಯ
ಬಾಲಕನ ತಂದೆ ಮನೆ ಕಟ್ಟಲು ಸಾಲ ಮಾಡಿದ್ದರು. ಈ ಸಾಲ ತೀರಿಸಲು ಹುಬ್ಬಳ್ಳಿಗೆ ಕೂಲಿ ಕೆಲಸಕ್ಕೆ ಬಾಲಕ ತೆರಳಿದ್ದ. ಈ ವೇಳೆ ಬಾಲಕನಿಗೆ ಈ ಮೂವರು ಪರಿಚಯವಾಗಿ ನಿಮ್ಮ ತಂದೆಯ ಸಾಲ ತೀರ ಬೇಕು ಅಂದ್ರೆ ಬೆತ್ತಲೆ ಪೂಜೆ ಮಾಡಬೇಕು. ಇದರಿಂದ ದುಡ್ಡು ಬರುತ್ತದೆ ಮತ್ತೆ ಸಾಲ ಕೂಡ ತೀರುತ್ತದೆ ಎಂದು ನಂಬಿಸಿದ್ದಾರೆ. ಬಳಿಕ ರೂಮ್ಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ ಪೂಜೆ ಮಾಡುವ ನಾಟಕ ಮಾಡಿದ್ದಾರೆ. ಪೂಜೆಯ ವಿಡಿಯೋ ಮಾಡಿ ಅದನ್ನು ಫೇಸ್ ಬುಕ್, ವಾಟ್ಸ್ ಆಪ್, ಯೂಟ್ಯೂಬ್ ಗಳಲ್ಲಿ ವೈರಲ್ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ