AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವರು ಟ್ರೆಡಿಷನಲ್‌ಗಾಗಿ ಗುಳೆ ಹೋಗ್ತಾರೆ, ಅವರನ್ನ ತಡೆಯಲು ಆಗಲ್ಲ ಎಂದ ಡಿಸಿಎಂ ಪರಮೇಶ್ವರ್

ಮಳೆ ಬೆಳೆ ಇಲ್ಲದೇ ಕರ್ನಾಟಕದಲ್ಲಿ ಬರ ಆವರಿಸಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದ್ದಾರೆ. ಬರದಿಂದ ಹಾನಿಗೊಳಗಾದ ಕೃಷಿ ಪ್ರದೇಶಗಳಿಗೆ ತೆರಳಿ ಬೆಳೆಗಳ ಸ್ಥಿತಿ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆದ್ರೆ, ಈ ವೇಳೆ ಕೊಪ್ಪಳದಲ್ಲಿ ಪರಮೇಶ್ವರ್ ಅವರ ಒಂದು ಮಾತು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಕೆಲವರು ಟ್ರೆಡಿಷನಲ್‌ಗಾಗಿ ಗುಳೆ ಹೋಗ್ತಾರೆ, ಅವರನ್ನ ತಡೆಯಲು ಆಗಲ್ಲ ಎಂದ ಡಿಸಿಎಂ ಪರಮೇಶ್ವರ್
Dr G Parameshwar
ಶಿವಕುಮಾರ್ ಪತ್ತಾರ್
| Edited By: |

Updated on:Oct 08, 2026 | 7:03 PM

Share

ಬೆಂಗಳೂರು, (ಅಕ್ಟೋಬರ್ 8): ಮಳೆ ಇಲ್ಲದೇ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಬೆಳೆ ಇಲ್ಲದೇ ಊರಲ್ಲಿ ಯಾವುದೇ ಕೆಲಸವಿಲ್ಲದೇ ಕಂಗಾಲಾಗಿದ್ದು, ಹೊಟ್ಟೆಪಾಡಿಗಾಗಿ ಬೇರೆ ಊರುಗಳಿಗೆ ಗುಳೆ ಹೊರಟ್ಟಿದ್ದಾರೆ. ಆದ್ರೆ, ಇದು ಉಪಮುಖ್ಯಮಂತ್ರಿ, ಡಾ ಜಿ ಪರಮೇಶ್ವರ್ ಅವರಿಗೆ ಟ್ರೆಡಿಷನಲ್‌ ಅನ್ನಿಸಿದೆ. ಹೌದು…ಕೆಲವರು ಟ್ರೆಡಿಷನಲ್‌ಗಾಗಿ ಗುಳೆ ಹೋಗುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಕೊಪ್ಪಳದಲ್ಲಿಂದು ಬರಗಾಲ ಪರಿಶೀಲನೆ ಸಭೆಯಲ್ಲಿ ಮಾತನಅಡುವ ವೇಳೆ ಈ ರೀತಿ ಹೇಳಿದ್ದು,  ಇದು ಚರ್ಚೆಗೆ ಗ್ರಾಸವಾಗಿದೆ.

ಇಂದು (ಅಕ್ಟೋಬರ್ 08) ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿ ಬರ ಪರಿಶೀಲನೆ ವೇಳೆ ಮಾತನಾಡಿದ ಪರಮೇಶ್ವರ್, ರಾಜ್ಯದಲ್ಲಿ ಕೆಲವರು ಗುಳೆ ಹೋಗುತ್ತಿದ್ದಾರೆ. ಸುಮಾರು 40ರಿಂದ 45 ವರ್ಷದವರು ಕೆಲಸಕ್ಕೆ ಹೋಗಿದ್ದಾರೆ. ಕಬ್ಬು ಕಟಾವಿಗೆ ಹೋಗಿದ್ದಾರೆ, ಗೋವಾ, ಬೆಂಗಳೂರಿಗೆ ಕೆಲಸಕ್ಕೆ ಹೋಗಿದ್ದಾರೆ. ಕೆಲವರು ಟ್ರೆಡಿಷನಲ್‌ಗಾಗಿ ಹೋಗುತ್ತಾರೆ. ಅವರನ್ನು ತಡೆಯಕ್ಕೆ ಆಗುವುದಿಲ್ಲ. ನೀವೇ ಏನೇ ಮಾಡಿದರೂ ಅವರನ್ನು ತಡೆಯಕ್ಕೆ ಆಗಲ್ಲ. ಅವರನ್ನು ಬಿಟ್ಟ ಬಿಡಿ. ಆದರೆ ಜನ ಹೆಚ್ಚು ಗುಳೆ ಹೋಗದಂತೆ ನೀವೇ ನೋಡಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ: ಬರದಲ್ಲಿ ಭಾರವಾದ ಜಾನುವಾರುಗಳು: ಮೇವು, ನೀರಿಲ್ಲದೇ ಮಾರಾಟಕ್ಕೆ ಮುಂದಾದ ರೈತರು

ಹಳ್ಳಿಗಳಲ್ಲಿ ವಯಸ್ಸಾದವರು ಇದಾರೆ. ಅವರಿಗೆ ಕೆಲಸ ಮಾಡಲು ಆಗಲ್ಲ. ವಯಸ್ಸಿದ್ದವರೂ ದುಡಿಯಲು ಹೋಗಿದ್ದಾರೆ, ಇವರನ್ನು ತಡೆಯಬೇಕು. ವಿಬಿ-ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಕೆಲಸ ಕೊಡಬೇಕು. ಕೆಲವು ಕಡೆ ಅಧಿಕಾರಿಗಳು ಒಂದು ತಿಂಗಳು ಆದರೂ ಸಂಬಳ ಕೊಟ್ಟಿಲ್ಲ. ನೀವು ಕೆಲಸ ಮಾಡಿಸಿಕೊಂಡು ಕೂಲಿ ಕೊಡಲ್ಲ, ಅವರೇನು ಮಾಡಬೇಕು. ಅವರಿಗೆ ಹಣ ಕೊಟ್ರೆ ಸಮಸ್ಯೆ ಆಗಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಟ್ರೆಡಿಷನಲ್ ಅಂದ್ರೆ ಸಂಪ್ರದಾಯಿಕವಾಗಿ ಹೋಗುತ್ತಾರೆ

ಟ್ರೆಡಿಷನಲ್ ಗಾಗಿ ಗುಳೇ ಹೋಗ್ತಾರೆ ಎನ್ನುವ ಹೇಳಿಕೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ಕೆಲವರು ಸಾಮಾನ್ಯವಾಗಿ ಕಾಫಿತೋಟಕ್ಕೆ ಹೋಗುತ್ತಾರೆ. ನಾನು ಅದನ್ನು ಹೇಳಿದ್ದೇನೆ. ಟ್ರೆಡಿಷನಲ್ ಅಂದ್ರೆ ಸಂಪ್ರದಾಯಿಕವಾಗಿ ಹೋಗುತ್ತಾರೆ ಎಂದು ಹೇಳಿದೀನಿ. ನಾನ ಹೇಳಿದ್ದು ಅರ್ಥ ಮಾಡಿಕೊಳ್ಳಿ. ಲಂಬಾಣಿ ಸಮುದಾಯ,ವರ್ಷಕ್ಕೊಮ್ಮೆ ಕಾಫಿತೋಟಕ್ಕೆ ಹೋಗ್ತಾರೆ. ಅದು ಸಂಪ್ರದಾಯ, ದುಡಿಮೆನೆ ಸಂಪ್ರದಾಯ ಅವರಿಗೆ ನಾನು ಆ ಅರ್ಥದಲ್ಲಿ ಹೇಳಿದ್ದೇನೆ ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Thu, 8 October 26

Follow Us
ಶಿವಕುಮಾರ್ ಪತ್ತಾರ್
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ