Koppal News: ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್​, ಪ್ರಯಾಣಿಕನ ನಡುವೆ ಗಲಾಟೆ: ಮೂವರಿಗೆ ಗಾಯ

|

Updated on: Jun 01, 2023 | 2:06 PM

ಟಿಕೆಟ್ ತೆಗೆದುಕೊಳ್ಳುವ ವಿಚಾರವಾಗಿ ಪ್ರಯಾಣಿಕ ಹಾಗೂ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್​ ನಡುವೆ ಗಲಾಟೆಯಾಗಿದ್ದು, ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ.

Koppal News: ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್​, ಪ್ರಯಾಣಿಕನ ನಡುವೆ ಗಲಾಟೆ: ಮೂವರಿಗೆ ಗಾಯ
ಬಸ್ ಚಾಲಕ, ನಿರ್ವಾಹಕ
Follow us on

ಕೊಪ್ಪಳ: 12 ವರ್ಷದ ಮಗನಿಗೆ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಕ, ಬಸ್ ಕಂಡಕ್ಟರ್​ ನಡುವೆ ಗಲಾಟೆ ನಡೆದಿದ್ದು, ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಈ ಘಟನೆ ಇಂದು(ಜೂನ್ 01) ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಗಲಾಟೆ ಬಿಡಿಸಲು ಬಂದ ಚಾಲಕನ ಮೇಲೂ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಚಾಲಕ ಸೇರಿ ಮೂವರಿಗೆ ಗಾಯಗಳಾಗಿದ್ದು, ಇವರನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 12 ವರ್ಷದ ಮಗನಿಗೆ ಟಿಕೆಟ್ ತೆಗೆದುಕೊಳ್ಳಲು ಹೇಳಿದ್ದಕ್ಕೆ ಪ್ರಯಾಣಿಕ ಹಾಗೂ ಬಸ್ ಕಂಡಕ್ಟರ್​ ಮುತ್ತಣ್ಣ ಪೂಜಾರ್ ನಡುವೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.

ಚೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಆರೋಪ

ಹಾಸನ : ಬಿಲ್ ಕಲೆಕ್ಷನ್‌ಗೆ ಹೋಗಿದ್ದ ಚೆಸ್ಕಾಂ ಸಿಬ್ಬಂದಿ ಮೇಲೆ ತಂದೆ ಮಗ ಸೇರಿಕೊಂಡು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹಾಸನ ಜಿಲ್ಲೆ, ಅರಕಲಗೂಡು ಪಟ್ಟಣದ ಹಳೇ ಕೋರ್ಟ್ ರಸ್ತೆಯಲ್ಲಿ ಚೆಸ್ಕಾಂ ಸಿಬ್ಬಂದಿ ಸಂತೋಷ್​ಗೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಕೋಳಿ ಅಂಗಡಿ ಮಾಲೀಕನಾಗಿರುವ ಸುರೇಶ್ ತನ್ನ ಮನೆಯ 1150 ರೂ ವಿದ್ಯುತ್ ಬಿಲ್ ಪಾವತಿಸಬೇಕಿತ್ತು. ಇದನ್ನು ಕೇಳಲು ಹೋದ ಚೆಸ್ಕಾಂ ಸಿಬ್ಬಂದಿಯನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆ ಎನ್ನು ಆರೋಪಿಸಲಾಗಿದೆ. ಸಂತೋಷ್‌ಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆಸ್ಪತ್ರೆಗೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.