ವಿಜಯನಗರ (ಹೊಸಪೇಟೆ): ಕಾರು ಅಪಘಾತವಾದಾಗ ಇನ್ಸೂರೆನ್ಸ್ ಸಹಾಯಕ್ಕೆ ಬರುತ್ತೆ. ಕಾರು ಅಪಘಾತವಾದ್ರೆ ಮೃತರಿಗೆ ಪರಿಹಾರ ದೊರೆಯುತ್ತೆ. ಆದ್ರೆ ಕಾರು ಕಳ್ಳತನವಾಗಿದೆ ಎಂದು ಸುಳ್ಖು ದೂರು ನೀಡಿ ಇನ್ಸೂರೆನ್ಸ್ ಹಣ (vehicle insurance) ಪಡೆಯಲು ಮುಂದಾದ ವ್ಯಕ್ತಿಯ ವಂಚನೆಯನ್ನ ವಿಜಯನಗರ ಜಿಲ್ಲೆಯ ಪೊಲೀಸರು ಬಯಲು ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಎಚ್ ಆರ್ ಎನ್ ಕಾಲೋನಿಯ ನಿವಾಸಿಯಾಗಿರುವ ಕಾರು ಚಾಲಕ (car driver) ಮೂವರೊಂದಿಗೆ ಸೇರಿಕೊಂಡು ತನ್ನ ಇನ್ನೋವಾ ಕಾರು ಕಳ್ಳತನವಾಗಿದೆ ಎಂದು ಸುಳ್ಳು ದೂರು ನೀಡಿ ಇನ್ಸೂರೆನ್ಸ್ ಹಣಕ್ಕಾಗಿ ವಂಚನೆ ಮಾಡಲು ಮುಂದಾಗಿದ್ದ.
ಆದ್ರೆ ಕಾರು ಕಳ್ಳತನ ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಂಡಿದ್ದ ವಿಜಯನಗರ ನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಪೊಲೀಸರು ಕಾರು ಕಳ್ಳತನ ಪ್ರಕರಣ ಭೇದಿಸಿ ಇನ್ಸೂರೆನ್ಸ್ ಹಣಕ್ಕಾಗಿ ವಂಚನೆ ಮಾಡಲು ಯತ್ನಿಸಿರುವುದನ್ನ ಬಯಲಿಗೆ ಎಳೆಯುವಲ್ಲಿ ಯಶ್ವಸಿಯಾಗಿದ್ದಾರೆ.
ಘಟನೆಯ ವಿವರ: ಇದು ಇನ್ಸೂರೆನ್ಸ್ ಹಣಕ್ಕಾಗಿ ಕಾರು ಕಳ್ಳತನ ನಾಟಕದ ಅಂಕ. ತನ್ನದೇ ಕಾರು ಕಳುವಾಗಿದೆ ಎಂದು ಸುಳ್ಳು ದೂರು ನೀಡಿ ಇನ್ಸೂರೆನ್ಸ್ ಹಣ ಕ್ಲೇಮ್ ಮಾಡಲು (vehicle insurance) ಮುಂದಾಗಿದ್ದ ಆರೋಪಿ ಅಂದರ್ ಆಗಿದ್ದಾನೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದವರಾದ ಮುಸಾಕ್ತ ಅಹ್ಮದ್, ಸೈಯದ್ ಜಾಫರ್. ಮತ್ತೊಬ್ಬರ ಜೊತೆ ಸೇರಿಕೊಂಡು ಇನ್ನೋವಾ ಕಾರು KA 01 MP 7333 ಎಂಬ ಕಾರನ್ನು ಫೆಬ್ರುವರಿ 17 ರಂದು ಹೊಸಪೇಟೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಗುಂಡಾ ಪಾರೆಸ್ಟ್ ಬಳಿ ಯಾರೋ ಇಬ್ಬರು ಕಳ್ಳರು ಚಾಲಕನಿಗೆ ಹೊಡೆದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಕಾರು ಕಳ್ಳತನದ ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಇನ್ನೋವಾ ಕಾರನ್ನ ಕೊಪ್ಪಳದ ಹಿರೇಖೇಡ್ ಗ್ರಾಮದ ಸೈಯದ್ ಅಲಿ ಎನ್ನುವವರ ಜಮೀನಿನಲ್ಲಿ ಪತ್ತೆ ಮಾಡಿದ್ದಾರೆ. ಘಟನೆಗೆ ಸಂಭದಿಸಿದಂತೆ ಆರೋಪಿ ಸೈಯದ್ ಜಾಫರ್ ನನ್ನ ವಿಚಾರಣೆ ನಡೆಸಿದ ವೇಳೆ ಕಾರನ್ನ ಬಿಚ್ಚಿಟ್ಟು ಇನ್ಸೂರೆನ್ಸ್ ಕಂಪನಿಗೆ ಮೋಸ ಮಾಡಿ ಸುಳ್ಳು ಕ್ಲೇಮ್ ಮಾಡಲು ಪ್ರಯತ್ನಿದ ವಿಚಾರ ಬೆಳಕಿಗೆ ಬಂದಿದೆ.
ಹಣಕ್ಕಾಗಿ ಇನ್ಸೂರೆನ್ಸ್ ಕಂಪನಿಗೆ ವಂಚಿಸಲು ಯತ್ನಿಸಿದ ಸೈಯದ್ ಜಾಫರ್ ನನ್ನ ಪೊಲೀಸರು ಬಂಧಿಸಿ ಇನ್ನಿಬ್ಬರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಇನ್ಸೂರೆನ್ಸ್ ಕಂಪನಿಗೆ ವಂಚಿಸಿಲು ಯತ್ನಿಸಿದ ಮೂವರು ಆರೋಪಿಗಳ ವಿರುದ್ದ ಮರಿಯಮ್ಮನಹಳ್ಳಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Also Read:
Guru: ಸಾವಿರಾರು ಸೂರ್ಯ-ಚಂದ್ರರು ಹುಟ್ಟಿ ಬಂದರೂ ಹೃದಯದೊಳಗಿನ ಅಜ್ಞಾನದ ಕತ್ತಲೆ ಹೋಗಲಾಡಿಸಲು ಸಾಧ್ಯವಿಲ್ಲ!
Also Read:
Sugarcane festival: ಆಲೆಮನೆ ಹಬ್ಬದ ಸವಿಯಲ್ಲಿ ಮಿಂದೆದ್ದ ಸ್ಥಳೀಯರು, ವಿಶೇಷ ಖಾದ್ಯಗಳ ರುಚಿ ಸವಿದು ಫುಲ್ ಕುಶ್!