ಅನುಮಾನದ ಭೂತ ಅಂಟಿದ್ದ ಗಂಡ ಪತ್ನಿಯ ಸಿಮ್ ಕಿತ್ತುಕೊಂಡಿದ್ದಕ್ಕೆ ಪತಿಯನ್ನೇ ಕೊಂದ್ಳು ಹೆಂಡ್ತಿ, ಪುಟಾಣಿ ಮಕ್ಕಳು ಅನಾಥ

ಅನುಮಾನದ ಭೂತ ಅಂಟಿದ್ದ ಗಂಡ ಪತ್ನಿಯ ಸಿಮ್ ಕಿತ್ತುಕೊಂಡಿದ್ದಕ್ಕೆ ಪತಿಯನ್ನೇ ಕೊಂದ್ಳು ಹೆಂಡ್ತಿ, ಪುಟಾಣಿ ಮಕ್ಕಳು ಅನಾಥ
ಯಲಬುರ್ಗ ಪೊಲೀಸ್ ಠಾಣೆ

ಸಿಮ್ ಕಸಿದುಕೊಂಡ ಅಂತ ಗಂಡನ ಜೀವ ತೆಗೆದವಳು, ಜೈಲು ಪಾಲಾಗಿದ್ದಾಳೆ. ಮಗನನ್ನ ಕಳೆದುಕೊಂಡು ಪೊಲೀಸ್ ಠಾಣೆ ಎದುರು ವೃದ್ಧ ತಂದೆ-ತಾಯಿ ಕಣ್ಣೀರು ಹಾಕ್ತಿದ್ದಾರೆ.

TV9kannada Web Team

| Edited By: Ayesha Banu

Apr 14, 2022 | 4:09 PM

ಕೊಪ್ಪಳ: ಗಂಡ ಹೆಂಡತಿ ಇಬ್ರು ದುಡಿದು ಜೀವನ ಮಾಡ್ತಿದ್ದರೂ. ಆದ್ರೆ ಗಂಡನಿಗೆ ಹೊಕ್ಕ ಅನುಮಾನದ ಭೂತ, ದೊಡ್ಡ ದುರಂತಕ್ಕೆ ಕಾರಣವಾಗಿದೆ. ಕೈ ಹಿಡಿದ ಪತ್ನಿಯೇ ಗಂಡನ ಪ್ರಾಣ ತೆಗೆದಿದ್ದಾರೆ. ಸದ್ಯ ವೃದ್ಧ ಜೀವಗಳು ಕಂಗಾಲಾಗಿವೆ. ಪುಟಾಣಿ ಮಕ್ಕಳು ಅನಾಥರಾಗಿವೆ.

ಸಿಮ್ ಕಿತ್ತುಕೊಂಡಿದ್ದಕ್ಕೆ ಪತಿಯನ್ನೇ ಕೊಂದ್ಳು ಹೆಂಡ್ತಿ ಕೊಪ್ಪಳ ಜಿಲ್ಲೆ ಕುಷ್ಟಗಿಯ ನಿಲೋಗಲ್ ನಿವಾಸಿಯಾದ ಸಿದ್ದಲಿಂಗಪ್ಪ ಶಿಲ್ಪಾಳನ್ನ 2ನೇ ಮದ್ವೆಯಾಗಿದ್ದರು. ಎರಡು ಮಕ್ಕಳಿದ್ದ ದಂಪತಿ ಸುಖವಾಗೇ ಜೀವನ ಮಾಡ್ತಿದ್ರು. ಐದಾರು ವರ್ಷದಿಂದ ಯಲಬುರ್ಗದ ಮಂಡಲಮರಿ ಕ್ರಾಸ್ನಲ್ಲಿ ಹೋಟೆಲ್ ಹಾಕಿದ್ದು, ಇಬ್ರು ಒಟ್ಟಿಗೆ ದುಡಿಯುತ್ತಿದ್ರು. ಆದ್ರೆ, ಈ ನಡುವೆ ಸಿದ್ದಲಿಂಗಪ್ಪಗೆ ಶಿಲ್ಪಾ ಮೇಲೆ ಸಂಶಯದ ಭೂತ ಹೊಕ್ಕಿತ್ತು. ಅದೇ ಭೂತ ಆತನ ಜೀವಕ್ಕೆ ಗಂಡಾಂತರ ತಂದಿದೆ. ಶಿಲ್ಪಾ ವ್ಯಕ್ತಿಯೊಬ್ಬನ ಜತೆ ಸಲುಗೆಯಿಂದ ಇದ್ದು, ಆತನೊಟ್ಟಿಗೆ ಮಾತನಾಡ್ತಿದ್ಳಂತೆ. ಇದ್ರಿಂದ, ಸಿದ್ದಲಿಂಗಪ್ಪ ಶಿಲ್ಪಾಳನ್ನ ಅನುಮಾನದಿಂದ ನೋಡ್ತಿದ್ದ. ಅಲ್ಲದೆ, ಏಪ್ರಿಲ್ 12ರಂದು ಮುಂಜಾನೆ, ಮಧ್ಯಾಹ್ನ ಹಾಗೂ ರಾತ್ರಿ ಇಬ್ಬರ ನಡುವೆ ಜೋರು ಗಲಾಟೆ ಆಗಿದೆ. ನಂತರ, ಸಿದ್ದಲಿಂಗಪ್ಪ ಮಲಗಿದ್ದಾನೆ. ಆದ್ರೆ, ಮಧ್ಯರಾತ್ರಿ ಶಿಲ್ಪಾ, ಎಳನೀರು ಕೊಚ್ಚುವ ಮಚ್ಚಿನಿಂದ ಪತಿಯನ್ನ ಕೊಚ್ಚಿ ಕೊಂದು ಸೈಲೆಂಟಾಗಿದ್ಳು. ನಂತರ, ಮನೆಯವ್ರಿಗೆಲ್ಲ ಬೇರೊಂದು ಅನುಮಾನ ಶುರುವಾಗಿತ್ತು.

ಅಂದಹಾಗೇ, ಕೆಲ ವರ್ಷದ ಹಿಂದೆ ಸಿದ್ದಲಿಂಗಪ್ಪ ಗ್ರಾಮದ ಕೆಲವರ ಜತೆ ಜಗಳ ಮಾಡ್ಕೊಂಡಿದ್ದ. ಹೀಗಾಗಿ, ಅವರೇ ಯಾರೋ ಕೊಂದಿದ್ದಾರೆ ಅಂತ ಎಲ್ರೂ ಅಂದ್ಕೊಂಡಿದ್ರು. ಪೊಲೀಸ್ರು ಕೂಡ ಸಂಶಯದ ಮೇಲೆ ಏಪ್ರಿಲ್ 13ರಂದು ಕೆಲವ್ರನ್ನ ಕರೆತಂದು ವಿಚಾರಣೆ ನಡೆಸಿದ್ರೂ, ಏನೊಂದು ಗೊತ್ತಾಗಲಿಲ್ಲ. ಕೊನೆಗೆ, ಶಿಲ್ಪಾಳನ್ನ ಮತ್ತೊಮ್ಮೆ ವಿಚಾರಣೆ ಮಾಡಿದಾಗ, ಸತ್ಯ ಒಪ್ಪಿಕೊಂಡಿದ್ದಾಳೆ. ಗಲಾಟೆ ನಂತರ ಸಿದ್ದಲಿಂಗಪ್ಪ, ಶಿಲ್ಪಾಳ ಮೊಬೈಲ್ ಕಸಿದು ಸಿಮ್ ತೆಗೆದು ಕೊಂಡಿದ್ನಂತೆ. ಇದ್ರಿಂದ ರೊಚ್ಚಿಗೆದ್ದ ಶಿಲ್ಪಾ, ಮಚ್ಚಿನಿಂದ ಕೊಚ್ಚಿ ಪತಿಯನ್ನ ಕೊಂದಿದ್ದಾಳೆ.

ಒಟ್ನಲ್ಲಿ, ಸಿಮ್ ಕಸಿದುಕೊಂಡ ಅಂತ ಗಂಡನ ಜೀವ ತೆಗೆದವಳು, ಜೈಲು ಪಾಲಾಗಿದ್ದಾಳೆ. ಮಗನನ್ನ ಕಳೆದುಕೊಂಡು ಪೊಲೀಸ್ ಠಾಣೆ ಎದುರು ವೃದ್ಧ ತಂದೆ-ತಾಯಿ ಕಣ್ಣೀರು ಹಾಕ್ತಿದ್ದಾರೆ. ಪುಟಾಣಿ ಮಕ್ಕಳು ಅನಾಥರಾಗಿವೆ.

ವರದಿ: ಶಿವಕುಮಾರ್ ಪತ್ತಾರ್, ಟಿವಿ 9 ಕೊಪ್ಪಳ.

ಇದನ್ನೂ ಓದಿ: 69 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜಸ್ಥಾನ ಸರ್ಕಾರ; ಕರೌಲಿಗೆ ಹೊಸ ಜಿಲ್ಲಾಧಿಕಾರಿ

ಕಾಂಗ್ರೆಸ್ ‌ಮುಖಂಡನ‌ ಹತ್ಯೆ ಕೇಸ್​ಗೆ ಟ್ವಿಸ್ಟ್: ಆಸ್ತಿಗಾಗಿ ಸೊಸೆಯಿಂದಲೇ ಮಾವನ ಕೊಲೆ; ಪ್ರಿಯತಮನಿಗೆ ಸುಪಾರಿ ಕೊಡಿಸಿ ಕೃತ್ಯ

Follow us on

Related Stories

Most Read Stories

Click on your DTH Provider to Add TV9 Kannada