ಬೆಂಗಳೂರು: ಹೆತ್ತ ತಾಯಿಗೆ ಚಾಕು ಹಾಕಿ, ಹತ್ಯೆ ಮಾಡಿ ಪರಾರಿಯಾಗಿದ್ದ ಟೆಕ್ಕಿ ಅಮೃತಾಳನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 2ರಂದು ಬೆಳಗ್ಗೆ ನಿದ್ರಿಸುತ್ತಿದ್ದ ತಾಯಿಯನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಳು. ಸಹೋದರ ಹರೀಶ್ ಮೇಲೂ ಹಲ್ಲೆ ಮಾಡಿ, ಪ್ರಿಯತಮನ ಜೊತೆ ಓಡಿ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ತನ್ನ ಪ್ರಿಯತಮ ಶ್ರೀಧರ್ ರಾವ್ ಜೊತೆ ವಿಮಾನವೇರಿದ್ದಾಳೆ. ಪ್ರಕರಣ ಬೆಳಕಿಗೆ ಬಂದ ಬಳಿಕ ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್ ಮಾರ್ಗದರ್ಶನದಲ್ಲಿ ಕೆ.ಆರ್. ಪುರಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ಸ್ ಪೆಕ್ಟರ್ ಅಂಬರೀಶ್ ನೇತೃತ್ವದ ತಂಡ ಅಂಡಮಾನ್ ನಿಕೋಬಾರ್ನ ಪೊರ್ಟ್ ಬ್ಲೇರ್ನಲ್ಲಿ ಪತ್ತೆಹಚ್ಚಿದ್ದಾರೆ. ಸ್ಥಳೀಯ ಪೊಲೀಸರ ನೆರವಿನೊಂದಿಗೆ ಅಮೃತಾ ಮತ್ತು ಶ್ರೀಧರ್ ರಾವ್ನನ್ನು ಬಂಧಿಸಿದ್ದಾರೆ.
ಕೊಲೆಗೆ ನಿಖರ ಕಾರಣ ಇನ್ನೂ ನಿಗೂಢವಾಗಿದೆ:
ಪುತ್ರಿ ಅಮೃತಾ ಚಂದ್ರಶೇಖರ್ ತಾಯಿಯನ್ನು ಕೊಲೆ ಮಾಡಿದ ಆರೋಪದಡಿ ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಗಮನಿಸಿದಾಗ ಶ್ರೀಧರ್ ಜತೆಗೆ ಅಮೃತಾ ತೆರಳಿರುವುದು ಕಂಡು ಬಂದಿತ್ತು. ಇದನ್ನ ಬೆನ್ನಟ್ಟಿ ಆರೋಪಿಗಳಿಬ್ಬರನ್ನು ಅಂಡಮಾನ್ ನಿಕೋಬರ್ ಫೋರ್ಟ್ ಬ್ಲೇರ್ನಲ್ಲಿ ಬಂಧಿಸಲಾಗಿದೆ. ಕೊಲೆಗೆ ನಿಖರ ಮಾಹಿತಿ ಇನ್ನೂ ನಿಗೂಢವಾಗಿದ್ದು, ಹೆಚ್ಚಿನ ವಿಚಾರಣೆ ಬಳಿಕ ತಿಳಿಯ ಬೇಕಿದೆ ಎಂದು ವೈಟ್ ಫೀಲ್ಡ್ ವಿಭಾಗ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
Published On - 12:57 pm, Wed, 5 February 20