ಒಂಬತ್ತು 9 ಒಂಬತ್ತು.. ನಾಳೆ ಮಂತ್ರಿ ಆಗುವವರಿಗೆ ಇದೇ ಸಂಖ್ಯೆ ಕಾರ್ ಬೇಕಂತೆ!
ಬೆಂಗಳೂರು: ಸಚಿವ ಸ್ಥಾನ ಅಲಂಕರಿಸುವುದಕ್ಕೂ ಮುನ್ನವೇ ನೂತನ ಸಚಿವರಿಗೆ ಕಾರುಗಳು ರೆಡಿಯಾಗಿವೆ. ಕೆ.ಕೆ.ಗೆಸ್ಟ್ ಹೌಸ್ನಲ್ಲಿ ನೂತನ ಸಚಿವರಿಗೆ ಕಾರುಗಳು ರೆಡಿಯಾಗಿದ್ದು, ಫ್ಯಾನ್ಸಿ ನಂಬರ್ಗಾಗಿ ಈಗಾಗಲೇ ಸಚಿವಾಕಾಂಕ್ಷಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ಅದರಲ್ಲೂ ನೂತನ ಕಾರುಗಳು ಒಂಬತ್ತು ನಂಬರ್ ಅನ್ನು ಹೆಚ್ಚು ಹೊಂದಿವೆ. ನೂತನ ಸಚಿವರಿಗಾಗಿ ಒಟ್ಟು 20 ಕಾರುಗಳನ್ನು ಆಡಳಿತ ಸುಧಾರಣಾ ಇಲಾಖೆ ಸಿದ್ಧಪಡಿಸಿದೆ. 999, 4999, 1449, 9009, 9333, 666, 8, 9, 6000 ನಂಬರ್ ಪ್ಲೇಟ್ನ ಕಾರ್ಗಳು ರೆಡಿಯಾಗಿವೆ. ಇದರಲ್ಲಿ 1008 ನಂಬರ್ ಕಾರಿಗೆ […]
ಬೆಂಗಳೂರು: ಸಚಿವ ಸ್ಥಾನ ಅಲಂಕರಿಸುವುದಕ್ಕೂ ಮುನ್ನವೇ ನೂತನ ಸಚಿವರಿಗೆ ಕಾರುಗಳು ರೆಡಿಯಾಗಿವೆ. ಕೆ.ಕೆ.ಗೆಸ್ಟ್ ಹೌಸ್ನಲ್ಲಿ ನೂತನ ಸಚಿವರಿಗೆ ಕಾರುಗಳು ರೆಡಿಯಾಗಿದ್ದು, ಫ್ಯಾನ್ಸಿ ನಂಬರ್ಗಾಗಿ ಈಗಾಗಲೇ ಸಚಿವಾಕಾಂಕ್ಷಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ಅದರಲ್ಲೂ ನೂತನ ಕಾರುಗಳು ಒಂಬತ್ತು ನಂಬರ್ ಅನ್ನು ಹೆಚ್ಚು ಹೊಂದಿವೆ.
ನೂತನ ಸಚಿವರಿಗಾಗಿ ಒಟ್ಟು 20 ಕಾರುಗಳನ್ನು ಆಡಳಿತ ಸುಧಾರಣಾ ಇಲಾಖೆ ಸಿದ್ಧಪಡಿಸಿದೆ. 999, 4999, 1449, 9009, 9333, 666, 8, 9, 6000 ನಂಬರ್ ಪ್ಲೇಟ್ನ ಕಾರ್ಗಳು ರೆಡಿಯಾಗಿವೆ. ಇದರಲ್ಲಿ 1008 ನಂಬರ್ ಕಾರಿಗೆ ಆನಂದ್ ಸಿಂಗ್ ಡಿಮ್ಯಾಂಡ್ ಮಾಡಿದ್ರೆ, 9ನೇ ನಂಬರ್ ಕಾರಿಗೆ ಎಸ್.ಟಿ.ಸೋಮಶೇಖರ್ ಬೇಡಿಕೆಯಿಟ್ಟಿದ್ದಾರೆ.
ಸಂಖ್ಯಾಶಾಸ್ತ್ರದ ಮೊರೆ ಹೋದ್ರಾ ಸಚಿವಾಕಾಂಕ್ಷಿಗಳು? ಸಂಖ್ಯಾಶಾಸ್ತ್ರದ ಮೊರೆ ಹೋದ್ರಾ ಸಚಿವ ಸ್ಥಾನದ ಆಕಾಂಕ್ಷಿಗಳು? ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಮಾಣವಚನಕ್ಕೂ ಮೊದಲೇ ಲಕ್ಕಿ ನಂಬರ್ ಕಾರ್ ಅನ್ನು ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಬುಕ್ ಮಾಡಿದ್ದಾರೆ ಎನ್ನಲಾಗಿದೆ. ಕಾರ್ಗೆ ಇಂಥದ್ದೇ ನಂಬರ್ ಬೇಕು ಅಂತೇನೂ ಇಲ್ಲ. ಆದರೆ 9 ನಂಬರ್ ಎಂಡ್ ಆಗೋ ಗಾಡಿ ನೋಡಿದ್ದೀನಿ. ನನ್ನ ಬಹುತೇಕ ಎಲ್ಲ ಕಾರ್ಗಳು 9 ರಿಂದ ಎಂಡ್ ಆಗುತ್ತೆ. ಅದಕ್ಕೆ ನೋಡಿಕೊಂಡು ಹೋಗೋಣ ಅಂತ ಬಂದೆ ಅಷ್ಟೇ ಎಂದು ಕೆ.ಸಿ.ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ.
Published On - 2:38 pm, Wed, 5 February 20