ಕನ್ನಡಿಗರಿಗೆ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಜಾಗವಿಲ್ಲ ಯಾಕೆ? ಹರಿಪ್ರಿಯಾ ಕಿಡಿಕಿಡಿ

ಕನ್ನಡದ ಬೆಡಗಿ ಹರಿಪ್ರಿಯಾ ಸರಿಯಾದ ಪ್ರಶ್ನೆಯನ್ನೇ ಎತ್ತಿದ್ದಾರೆ. ಲಂಡನ್​ನ ಪ್ರತಿಷ್ಠಿತ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಮೇಣದ ಪ್ರತಿಮೆಗಳನ್ನುನಿರ್ಮಿಸುವುದರ ವಿರುದ್ಧ ನಟಿ ಹರಿಪ್ರಿಯಾ ಗರಂ ಆಗಿದ್ದಾರೆ. ಅಲ್ಲಾ ನಮ್ಮ ಕನ್ನಡಿಗರ ಸಾಧನೆಗೇನು ಕಡಿಮೆ? ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದಿಗ್ಗಜರಿದ್ದಾರೆ. ಯಾರಿಗೂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಗೌರವ ಸಂದಿಲ್ಲ. ಡಾ. ರಾಜ್​ಕುಮಾರ್, ಡಾ. ವಿಷ್ಣು ವರ್ಧನ್, ಡಾ. ಅಂಬರೀಶ್, ಶಂಕರ್ ನಾಗ್, ಪಂಡರೀ ಬಾಯಿ, ಜಯಂತಿ, ಬಿ ಸರೋಜಾ ದೇವಿ ಹೀಗೆ ದೊಡ್ಡ ಲಿಸ್ಟ್ ಇದೆ. ಆದ್ರೆ ಯಾವೊಬ್ಬ ಕನ್ನಡಿಗನ ಮೇಣದ […]

ಕನ್ನಡಿಗರಿಗೆ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಜಾಗವಿಲ್ಲ ಯಾಕೆ? ಹರಿಪ್ರಿಯಾ ಕಿಡಿಕಿಡಿ
sadhu srinath

|

Feb 05, 2020 | 5:33 PM

ಕನ್ನಡದ ಬೆಡಗಿ ಹರಿಪ್ರಿಯಾ ಸರಿಯಾದ ಪ್ರಶ್ನೆಯನ್ನೇ ಎತ್ತಿದ್ದಾರೆ. ಲಂಡನ್​ನ ಪ್ರತಿಷ್ಠಿತ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಮೇಣದ ಪ್ರತಿಮೆಗಳನ್ನುನಿರ್ಮಿಸುವುದರ ವಿರುದ್ಧ ನಟಿ ಹರಿಪ್ರಿಯಾ ಗರಂ ಆಗಿದ್ದಾರೆ. ಅಲ್ಲಾ ನಮ್ಮ ಕನ್ನಡಿಗರ ಸಾಧನೆಗೇನು ಕಡಿಮೆ? ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದಿಗ್ಗಜರಿದ್ದಾರೆ. ಯಾರಿಗೂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಗೌರವ ಸಂದಿಲ್ಲ.

ಡಾ. ರಾಜ್​ಕುಮಾರ್, ಡಾ. ವಿಷ್ಣು ವರ್ಧನ್, ಡಾ. ಅಂಬರೀಶ್, ಶಂಕರ್ ನಾಗ್, ಪಂಡರೀ ಬಾಯಿ, ಜಯಂತಿ, ಬಿ ಸರೋಜಾ ದೇವಿ ಹೀಗೆ ದೊಡ್ಡ ಲಿಸ್ಟ್ ಇದೆ. ಆದ್ರೆ ಯಾವೊಬ್ಬ ಕನ್ನಡಿಗನ ಮೇಣದ ಪ್ರತಿಮೆ ಟುಸ್ಸಾಡ್ಸ್​ನಲ್ಲಿ ಇಲ್ಲ ಎಂದು ನಟಿ ಹರಿಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಗುಡುಗಿದ್ದಾರೆ.

ಇತ್ತೀಚೆಗೆ ನಟಿ ಕಾಜಲ್ ಅಗರ್ವಾಲ್ ಮೇಣದ ಪ್ರತಿಮೆ ಅನಾವರಣದ ಬೆನ್ನಲ್ಲೇ, ಮ್ಯೂಸಿಯಂನ ಆಡಳಿತ ಮಂಡಳಿಗೆ ಹರಿಪ್ರಿಯಾ ಸರಿಯಾಗಿ ತಿವಿದಿದ್ದಾರೆ.

ಕನ್ನಡಿಗರ ಒಂದು ಮೇಣದ ಪ್ರತಿಮೆ ಮ್ಯೂಸಿಮಂನಲ್ಲಿ ಇಲ್ಲ ಯಾಕೆ ಎಂದು ಪ್ರಶ್ನಿಸಿರುವ ನಟಿ, ನಿನ್ನೆ ಮೊನ್ನೆ ಬಂದು ಸಿನಿರಂಗದಲ್ಲಿ ದಾಪುಗಾಲಿಡುತ್ತಿರೋರಿಗೆ ಮೇಣದ ಪ್ರತಿಮೆ ಕಿರೀಟ ಬೇಕಾ? ಸಾಧನೆ ಮಾಡದೇ ಇದ್ದರೂ ಅಂಥವರ ಮೇಣದ ಪ್ರತಿಮೆ ಸಿದ್ಧವಾಗ್ತಿದೆ ಎಂದು ಹರಿಪ್ರಿಯಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಂದಹಾಗೆ ಕಾಜಲ್ ಅಗರವಾಲ್ ಮೇಣದ ಪ್ರತಿಮೆ ನಿನ್ನೆಯಷ್ಟೆ ಅನಾವರಣಗೊಂಡಿದೆ. ಸಿಂಗಾಪುರದಲ್ಲಿನ ಮ್ಯೂಸಿಯಂನಲ್ಲಿ ಕಾಜಲ್ ಪ್ರತಿಮೆ ಇಡಲಾಗಿದೆ.

https://www.facebook.com/IamHariprriya/posts/3663226557050626

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada