ಸರ್ಕಾರಿ ಬಸ್​ ನೌಕರರಿಗೆ ಸಂಕಷ್ಟ.. ಗಳಿಕೆ ರಜೆ ಖಾಲಿಯಾದ್ರೆ ನೌಕರರ ಸಂಬಳಕ್ಕೆ ಕತ್ತರಿ?

| Updated By: ಸಾಧು ಶ್ರೀನಾಥ್​

Updated on: Jan 09, 2021 | 9:45 AM

BMTC ಹಾಗೂ KSRTC ನಿಗಮಗಳು ದಿವಾಳಿಯಂಚಿಗೆ ಬಂದು ನಿಂತಿವೆ. ಈ ಹಿಂದೆ ಪ್ರತಿನಿತ್ಯ 6500 ಬಸ್ ಸಂಚಾರ ಮಾಡ್ತಿದ್ದ BMTC, ಸದ್ಯ 4 ಸಾವಿರಕ್ಕೆ ಇಳಿದಿದೆ. ಇನ್ನು 45 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಸದ್ಯ 20ರಿಂದ 25ಲಕ್ಷಕ್ಕೆ ಇಳಿದಿದೆ.

ಸರ್ಕಾರಿ ಬಸ್​ ನೌಕರರಿಗೆ ಸಂಕಷ್ಟ.. ಗಳಿಕೆ ರಜೆ ಖಾಲಿಯಾದ್ರೆ ನೌಕರರ ಸಂಬಳಕ್ಕೆ ಕತ್ತರಿ?
Follow us on

ಒಂದು ಕಾಲದಲ್ಲಿ BMTC, KSRTC ಡ್ರೈವರ್ ಇಲ್ಲಾ ಕಂಡಕ್ಟರ್ ಆದ್ರೆ ಸಾಕು ಲೈಫ್ ಸೆಟೆಲ್ ಆಗುತ್ತೆ ಅನ್ನೋ ಭಾವನೆ ಜನ್ರಲ್ಲಿತ್ತು. ಯಾಕಂದ್ರೆ ಮಳೆ ಬರ್ಲಿ ಬಿಸಿಲೇ ಇರಲಿ ಇವರ ಸಂಬಳಕ್ಕೆ ಕೊರತೆ ಮಾತ್ರ ಇರ್ತಿರ್ಲಿಲ್ಲ. ಆದ್ರೆ ಕೊರೊನಾ ಎಲ್ಲವನ್ನೂ ಬದಲಾಯಿಸಿದ್ದು, ಸಂಬಳಕ್ಕೆ ಕತ್ತರಿ ಬೀಳುವ ಆತಂಕ ಎದುರಾಗಿದೆ.

ಗಳಿಕೆ ರಜೆ ಖಾಲಿಯಾದ್ರೆ ಸಂಬಳಕ್ಕೆ ಕತ್ತರಿ..!
BMTC ಹಾಗೂ KSRTC ನಿಗಮಗಳು ದಿವಾಳಿಯಂಚಿಗೆ ಬಂದು ನಿಂತಿವೆ. ಈ ಹಿಂದೆ ಪ್ರತಿನಿತ್ಯ 6,500 ಬಸ್ ಸಂಚಾರ ಮಾಡ್ತಿದ್ದ BMTC, ಸದ್ಯ 4 ಸಾವಿರಕ್ಕೆ ಇಳಿದಿದೆ. ಇನ್ನು 45 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಸದ್ಯ 20ರಿಂದ 25 ಲಕ್ಷಕ್ಕೆ ಇಳಿದಿದೆ. ಹೀಗಾಗಿ 36 ಸಾವಿರ BMTC ನೌಕರರು ಈಗ ಹಲವು ರೀತಿಯ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ದಿನದಲ್ಲಿ 7 ರಿಂದ 8 ಸಾವಿರ ನೌಕರರಿಗೆ ಡ್ಯೂಟಿಯೇ ಸಿಗ್ತಿಲ್ಲ.

ಇಷ್ಟು ದಿನ ಡ್ಯೂಟಿ ಸಿಕ್ಕಿಲ್ಲ ಅಂದ್ರೆ, ನೌಕರರು ತಮ್ಮ ಸೇವಾವಧಿಯಲ್ಲಿ ಗಳಿಸಿದ ರಜೆಯನ್ನ ಕಟ್ ಮಾಡಿ ಸಂಬಳ ನೀಡಲಾಗ್ತಿತ್ತು. ಆದ್ರೆ ಈಗ ಈ ರೀತಿ ನೌಕರರ ಸಂಬಳಕ್ಕಾಗಿ ರಜೆ ಕಟ್ ಮಾಡಿ ಮಾಡಿ ಎಲ್ಲಾ ಗಳಿಕೆ ರಜೆ ಖಾಲಿಯಾಗಿದೆ. ಹೀಗಾಗಿ ಮುಂಬರೋ ದಿನಗಳಲ್ಲಿ ನೌಕರ ಸಂಬಳವೇ ಕಟ್ ಆಗೋ ಭೀತಿಯಲ್ಲಿದ್ದಾರೆ. ಇನ್ನು ಸಾರಿಗೆ ನೌಕರರ ಮುಷ್ಕರದ ಬಳಿಕ ನಿಗಮದಲ್ಲಿ ನೌಕರರನ್ನ ಟಾರ್ಗೆಟ್ ಮಾಡಲಾಗ್ತಿದೆ ಅನ್ನೋ ಆರೋಪವೂ ಕೇಳಿಬರ್ತಿದೆ.

500ರಿಂದ 600 KSRTC ಎಸಿ ಬಸ್‌ಗಳು ನಿಂತಲ್ಲೇ ನಿಲ್ಲುತ್ತಿವೆ.
KSRTC ಕಥೆಯೂ ಹೀಗೆ ಇದೆ. ಕೆಎಸ್ಆರ್‌ಟಿಸಿಯಲ್ಲಿ ಕೆಂಪು ಬಸ್‌ಗಳ ಸಂಚಾರ ಚೇತರಿಸಿಕೊಂಡಿದ್ರೂ, ಎಸಿ ಬಸ್‌ಗಳ ಸಂಚಾರ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಸುಮಾರು 500ರಿಂದ 600 KSRTC ಎಸಿ ಬಸ್‌ಗಳು ನಿಂತಲ್ಲೇ ನಿಲ್ಲುತ್ತಿವೆ. ನೌಕರರಿಗೂ ಕೆಲಸ ಇಲ್ಲದಂತಾಗಿದೆ. ಸದ್ಯ ರಾಜ್ಯ ಸರ್ಕಾರ ಸಂಬಳ ನೀಡೋಕೆ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಅನ್ನೋ ಉತ್ತರ ನೀಡ್ತಿದೆ. ಹೀಗಾಗಿ ಮುಂಬರೋ ದಿನಗಳಲ್ಲಿ KSRTC ಮತ್ತು BMTCಯಲ್ಲಿ ನೋ ಡ್ಯೂಟಿ ನೋ ಪೇ ಅನ್ನೋ ರೂಲ್ಸ್ ಬರೋ ಆತಂಕದಲ್ಲಿ ಸಾರಿಗೆ ನೌಕರರಿದ್ದಾರೆ.

ಒಟ್ಟಿನಲ್ಲಿ ಒಂದು ವರ್ಷದ ಹಿಂದೆ ಸೌರಿಗೆ ನೌಕರರು ಅಂದ್ರೆ ಲೈಫ್ ಸೆಟಲ್ ಅನ್ನೋ ಸ್ಥಿತಿ ಇತ್ತು. ಆದ್ರೆ ಈಗ ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿ ಸಾರಿಗೆ ನಿಗಮಗಳು ನಲುಗಿ ಹೋಗಿವೆ. ಸಾರಿಗೆ ನಿಗಮ ದಿನ ಕಳೆದಂತೆ ಕುಸಿಯುತ್ತಾ ಹೋಗುತ್ತಿರುವುದು ಸಿಬ್ಬಂದಿಯಲ್ಲಿ ಭಯ ಹುಟ್ಟಿಸಿದೆ.

Published On - 9:35 am, Sat, 9 January 21