MEIL: ಶೀಘ್ರದಲ್ಲೇ ರಾಜ್ಯಾದ್ಯಂತ ಸಂಚರಿಸಲಿವೆ ಎಂಇಐಎಲ್​ನ ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್​ಗಳು

|

Updated on: Mar 04, 2023 | 5:48 PM

ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್​​ನ ಅಂಗಸಂಸ್ಥೆ ಒಲೆಕ್ಟ್ರಾ ಕಂಪನಿಯ 50 ಎಲೆಕ್ಟ್ರಿಕ್ ಬಸ್​​ಗಳು ಶೀಘ್ರದಲ್ಲೇ ರಾಜ್ಯಾದ್ಯಂತ ಸಂಚರಿಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅದ್ಯಕ್ಷ ಎಂ. ಚಂದ್ರಪ್ಪ ಚಿತ್ರದುರ್ಗದಲ್ಲಿ ತಿಳಿಸಿದ್ದಾರೆ.

MEIL: ಶೀಘ್ರದಲ್ಲೇ ರಾಜ್ಯಾದ್ಯಂತ ಸಂಚರಿಸಲಿವೆ ಎಂಇಐಎಲ್​ನ ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್​ಗಳು
ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್
Follow us on

ಚಿತ್ರದುರ್ಗ: ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್​​ನ (MEIL) ಅಂಗಸಂಸ್ಥೆ ಒಲೆಕ್ಟ್ರಾ ಕಂಪನಿಯ 50 ಎಲೆಕ್ಟ್ರಿಕ್ ಬಸ್​​ಗಳು ಶೀಘ್ರದಲ್ಲೇ ರಾಜ್ಯಾದ್ಯಂತ ಸಂಚರಿಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಅದ್ಯಕ್ಷ ಎಂ. ಚಂದ್ರಪ್ಪ ಚಿತ್ರದುರ್ಗದಲ್ಲಿ ‘ಟಿವಿ9’ಗೆ ತಿಳಿಸಿದ್ದಾರೆ. ಎಲೆಕ್ಟ್ರಿಕ್ ಬಸ್​​ಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. 20 ವೋಲ್ವೊ ಬಸ್‌ಗಳಿಗೆ ಫೆಬ್ರುವರಿ 21ಕ್ಕೆ ಚಾಲನೆ ನೀಡಿದ್ದೇವೆ. ಸುಮಾರು ಐವತ್ತು ಇ-ಬಸ್ ಗಳು ಕೆಎಸ್​ಆರ್​ಟಿಸಿ ಬಳಿ ಇವೆ. ಈ ಬಸ್​ಗಳು ಒಂದು‌ ಬಾರಿ ಬ್ಯಾಟರಿ ಚಾರ್ಜ್ ಆದರೆ 350 ಕಿ.ಮೀ. ಚಲಿಸುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬೆಂಗಳೂರು-ಮೈಸೂರು ಮಧ್ಯೆ ಆರಂಭಿಸಿರುವ ಇ-ಬಸ್​​ಗೆ ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇ-ಬಸ್​​ಗಳು ವಾಯುಮಾಲಿನ್ಯ ರಹಿತ ಪರಿಸರ ಸ್ನೇಹಿ ಬಸ್​​ಗಳಾಗಿದ್ದು, ಪ್ರಯಾಣಿಕಸ್ನೇಹಿಯಾಗಿವೆ. ಇವು ಏರ್ ಕಂಡಿಷನ್​​ಯುಕ್ತ ಸುಸಜ್ಜಿತ ಬಸ್​​ಗಳಾಗಿವೆ ಎಂದು ಅವರು ಹೇಳಿದ್ದಾರೆ. ಶೀಘ್ರದಲ್ಲೇ 550 ಸಾಮಾನ್ಯ ಬಸ್​ಗಳು, 50 ಲೇಲ್ಯಾಂಡ್ ಹಾಗೂ ಸ್ಲೀಪರ್ ಕೋಚ್ ಬಸ್​​ಗಳು ಸಹ ಬರಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: KSRTC Electric Bus: ರಸ್ತೆಗಿಳಿದ ಕೆಎಸ್​​​ಆರ್​​​ಟಿಸಿ ಎಲೆಕ್ಟ್ರಿಕ್​​​ ಬಸ್​ಗಳು, ಮೊದಲ ಪ್ರಯಾಣ ಆರಂಭ

ಬೆಂಗಳೂರು-ಮೈಸೂರು ನಡುವೆ ಮೊದಲ ಎಲೆಕ್ಟ್ರಿಕ್​​ ಬಸ್ ಸೇವೆ ಇದೇ ವರ್ಷ ಜನವರಿ 16ರಂದು ಆರಂಭವಾಗಿತ್ತು. ಮೊದಲ ಎಲೆಕ್ಟ್ರಿಕ್​​ ಬಸ್​​ಗೆ ಚಾಲನೆ ನೀಡಿದ ಸಂದರ್ಭದಲ್ಲೇ, ಮುಂದಿನ ಮೂರು ತಿಂಗಳಲ್ಲಿ 50 ಎಲೆಕ್ಟ್ರಿಕ್ ಬಸ್​​ಗಳನ್ನು ರಸ್ತೆಗಿಳಿಸಲಾಗುವುದು ಎಂದು ಕೆಎಸ್​ಆರ್​​ಟಿಸಿ ತಿಳಿಸಿತ್ತು.

ಎಲೆಕ್ಟ್ರಿಕ್ ಬಸ್ ವಿಶೇಷ

ಆರಾಮದಾಯಕ ಆಸನ, ದೂರದರ್ಶನ, ಪ್ರೀಮಿಯಂ ಸೀಟ್‌ಗಳು, ಪ್ರತಿಯೊಂದು ಸೀಟಿಗೂ ಚಾರ್ಜಿಂಗ್ ಸಾಕೆಟ್‌, ಎಸಿ​ ವೆಂಟ್‌ಗಳು, ಓದುವ ದೀಪಗಳು ಸೇರಿದಂತೆ ಇನ್ನೂ ಅನೇಕ ಸೌಲಭ್ಯಗಳನ್ನು ಎಲೆಕ್ಟ್ರಿಕ್ ಬಸ್ ಒಳಗೊಂಡಿವೆ. ಎಲೆಕ್ಟ್ರಿಕ್​ ಬಸ್​ಗಳು 2022 ಡಿಸೆಂಬರ್​ 31 ರಂದೇ ರಾಜ್ಯಕ್ಕೆ ಬಂದಿದ್ದು, ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ