ಶಾಸಕಿ ರೂಪಾಲಿ ನಾಯ್ಕ್ ವಿರುದ್ಧ ಮಾಡಿದ 40% ಕಮಿಷನ್ ಆರೋಪ ಸತ್ಯ: ದೇವರ ಮೇಲೆ ಮಾದವ ನಾಯ್ಕ್ ಪ್ರಮಾಣ
ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷಗಳು ಮಾತ್ರವಲ್ಲದೆ ಗುತ್ತಿಗೆದಾರರ ಸಂಘಗಳು 40% ಕಮೀಷನ್ ಆರೋಪ ಮಾಡುತ್ತಿವೆ. ಈಗಾಗಲೇ ಕೆಲವೊಂದು ಸಚಿವರು ಮತ್ತು ಶಾಸಕರ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಇದೀಗ ಕಾರವಾರ ಅಂಕೋಲ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್ ವಿರುದ್ಧವೂ ಅಂತಹ ಆರೋಪ ಗುತ್ತಿಗೆದಾರರ ಸಂಘದ ಮಾಡಿದೆ.
ಕಾರವಾರ: ಕರ್ನಾಟಕ ಬಿಜೆಪಿ ಸರ್ಕಾರದ (Karnataka BJP Govt) ವಿರುದ್ಧ ವಿಪಕ್ಷಗಳು ಮಾತ್ರವಲ್ಲದೆ ಗುತ್ತಿಗೆದಾರರ ಸಂಘಗಳು 40% ಕಮೀಷನ್ (40% Commission allegations) ಆರೋಪ ಮಾಡುತ್ತಿವೆ. ಈಗಾಗಲೇ ಕೆಲವೊಂದು ಸಚಿವರು ಮತ್ತು ಶಾಸಕರ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಇದೀಗ ಕಾರವಾರ ಅಂಕೋಲ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್ (MLA Roopali Naik) ವಿರುದ್ಧವೂ ಅಂತಹ ಆರೋಪ ಮಾಡಲಾಗಿದೆ. ಶಾಸಕಿ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಉತ್ತರಕನ್ನಡ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ (Uttara Kannada District Civil Contractors Association) ಅದ್ಯಕ್ಷ ಮಾಧವ್ ನಾಯ್ಕ್, ನಾನು ಮಾಡಿದ ಆರೋಪ ಸತ್ಯ ಎಂದು ಗಣಪತಿ ದೇವರ ವಿಗ್ರಹದ ಮೇಲೆ ಪ್ರಮಾಣ ಮಾಡಿದ್ದಾರೆ.
ಕಾರವಾರದ ಜಿಲ್ಲಾ ಪತ್ರಕಾಭವದಲ್ಲಿ ದೇವರ ಮೇಲೆ ಪ್ರಮಾಣ ಮಾಡಿದ ಮಾಧವ್ ನಾಯ್ಕ್, ನಾನು ಆಧಾರ ಇಲ್ಲದೆ ಯಾವುದೇ ಆರೋಪ ಮಾಡಿಲ್ಲ. ನನಗೆ ಶಾಸಕರ ಮೇಲೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಕ್ಷೇತ್ರದಲ್ಲಿ ಭಾರೀ ಅನ್ಯಾಯವಾಗುತ್ತಿದೆ. ನಾನು ಈವರೆಗೆ ಶಾಸಕಿ ಮೇಲೆ ಮಾಡಿದ ಆರೋಪ ಸತ್ಯ. ಗಣೇಶನ ವಿಗ್ರಹದ ಮೇಲೆ ಪ್ರಮಾಣ ಮಾಡುತ್ತನೆ. ಶಾಸಕಿ ಯಾವುದೇ ಕಮಿಷನ್ ಪಡೆದಿಲ್ಲ ಅಂದರೆ ಅವರು ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: Sagarmala: ಸಾಗರಮಾಲಾ ಯೋಜನೆಗೆ ಮೀನುಗಾರರಿಂದ ವಿರೋಧ; ಶಾಸಕಿ ರೂಪಾಲಿ ನಾಯ್ಕ್ ಜೊತೆ ಮಾತಿನ ಚಕಮಕಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರವಾರ ಅಂಕೋಲ ಕ್ಷೇತ್ರದಲ್ಲಿ ಸರ್ಕಾರದ ಪ್ಯಾಕೇಜ್ ಕಾಮಗಾರಿಗಳಲ್ಲಿ 40% ಕಮೀಷನ್ ನಡೆಯುತ್ತಿದೆ. ಇದನ್ನ ವಿರೋಧಿಸಿ ಹೋರಾಟ ಮಾಡಿದ್ದೆ. ನನ್ನ ವಿರುದ್ಧ ಶಾಸಕಿ ರೂಪಾಲಿ ನಾಯ್ಕ ಕೋರ್ಟ್ನಲ್ಲಿ 5 ಕೋಟಿ ಮಾನನಷ್ಟ ಮುಕದ್ದಮೆ ಹೂಡಿದ್ದಾರೆ. ಕ್ಷೇತ್ರದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾ ಶಾಸಕಿ ತಿರಗಾಡುತ್ತಿದ್ದಾಳೆ. ನಾನು ಮಾಡಿದ ಆರೋಪದ ಬಗ್ಗೆ ಕೋರ್ಟ್ನಲ್ಲಿ ಸಾಕ್ಷಿಗಳನ್ನ ನೀಡುತ್ತೇನೆ ಎಂದರು.
ಒಂದೆಡೆ, ಶಾಸಕಿ ರೂಪಾಲಿ ವಿರುದ್ಧ 40% ಕಮೀಷನ್ ಆರೋಪ ಕೇಳಿಬರುತ್ತಿದ್ದರೆ ಇನ್ನೊಂದೆಡೆ, ಮಾಜಿ ಶಾಸಕರೊಂದಿಗೆ ಜಟಾಪಟಿಯೂ ನಡೆಯುತ್ತಿದೆ. ಮಾಜಿ ಶಾಸಕ ಸತೀಶ್ ಸೈಲ್ ಮತ್ತು ಹಾಲಿ ಶಾಸಕಿ ರೂಪಾಲಿ ನಾಯ್ಕ್ ನಡುವೆ ಹಲ್ಲೆ ವಿಚಾರವಾಗಿ ವಾಗ್ವಾದ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಇವರಿಬ್ಬರ ನಡುವೆ ಮಾತಿನ ಚಕಾಮಕಿ ನಡೆದಿತ್ತು. ಬಳಿಕ ರೂಪಾಲಿ ಅವರು ಸತೀಶ್ ಸೈಲ್‌ಗೆ ಕುಡುಕ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಈ ಬಗ್ಗೆ ಠಾಣೆಗೂ ದೂರು ನೀಡಿದ್ದಾರೆ. ಈ ವಿಚಾರ ತಿಳಿದ ಶಾಸಕಿ ಕೂಡ ತನ್ನ ಮೇಲೆ ತನ್ನ ಮೇಲೆ ಸಹ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:36 pm, Sat, 4 March 23