Sagarmala: ಸಾಗರಮಾಲಾ ಯೋಜನೆಗೆ ಮೀನುಗಾರರಿಂದ ವಿರೋಧ; ಶಾಸಕಿ ರೂಪಾಲಿ ನಾಯ್ಕ್ ಜೊತೆ ಮಾತಿನ ಚಕಮಕಿ

ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀನುಗಾರರು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಸಾಗರ ಮಾಲಾ ಯೋಜನೆ ಕೈಬಿಡದಿದ್ದರೆ ಸಾಮೂಹಿತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಎಚ್ಚರಿಸಿ, ಮೀನುಗಾರರು ಬೊಬ್ಬೆ ಹಾಕಿದರು.

Sagarmala: ಸಾಗರಮಾಲಾ ಯೋಜನೆಗೆ ಮೀನುಗಾರರಿಂದ ವಿರೋಧ; ಶಾಸಕಿ ರೂಪಾಲಿ ನಾಯ್ಕ್ ಜೊತೆ ಮಾತಿನ ಚಕಮಕಿ
ಸಾಗರಮಾಲಾ ಯೋಜನೆಗೆ ಮೀನುಗಾರರಿಂದ ವಿರೋಧ; ಶಾಸಕಿ ರೂಪಾಲಿ ನಾಯ್ಕ್ ಜೊತೆ ಮಾತಿನ ಚಕಮಕಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 12, 2022 | 7:32 PM

ಕಾರವಾರ: ಸಾಗರಮಾಲಾ ಯೋಜನೆ (Sagarmala Project) ವಿಚಾರಕ್ಕೆ ಸಂಬಂಧಿಸಿ ಮೀನುಗಾರರು ಮತ್ತು ಶಾಸಕಿ ನಡುವೆ ಮಾತಿನ ಚಕಮಕಿ ನಡೆದಿದೆ. ಬಿಜೆಪಿ ಶಾಸಕಿ ರೂಪಾಲಿ ನಾಯ್ಕ್ (Roopali Naik Ankola BJP MLA) ಹಾಗೂ ಮೀನುಗಾರರ ನಡುವೆ ಈ ಮಾತಿನ ಚಕಮಕಿ ನಡೆದಿದೆ. ಮೀನುಗಾರಿಕಾ ಸಚಿವ ಎಸ್. ಅಂಗಾರ ಮುಂದೆಯೇ ಸ್ಥಳೀಯ ಮೀನುಗಾರರು (Karwar Fishermen) ಶಾಸಕಿಯ ಜತೆ ವಾಗ್ವಾದಕ್ಕಿಳಿದು, ತಮ್ಮ ಆಕ್ರೋಶ ಹೊರಹಾಕಿದರು. ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀನುಗಾರರು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಸಾಗರ ಮಾಲಾ ಯೋಜನೆ ಕೈಬಿಡದಿದ್ದರೆ ಸಾಮೂಹಿತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಎಚ್ಚರಿಸಿ, ಮೀನುಗಾರರು ಬೊಬ್ಬೆ ಹಾಕಿದರು.

ಆ ವೇಳೆ, ಮೀನುಗಾರರ ಮಾತು ಕೇಳಿ ಎಂಎಲ್‌ಸಿ ಹಾಗೂ ಮೀನುಗಾರರ ಮುಖಂಡ ಗಣಪತಿ ಉಳ್ವೇಕರ್ ಗರಂ ಆದರು. ಮಾತು ಸ್ಥಿಮಿತದಲ್ಲಿರಲಿ, ಸಚಿವರು ಇದ್ದಾಗಲೇ ಅವಾಜ್ ಎಲ್ಲಾ ಹಾಕೋದು ಸರಿಯಲ್ಲ. ಶಾಸಕರು, ಸಚಿವರು ಮುಂದೆ ಸರಿಯಾಗಿ ಮಾತನಾಡಿ, ಹುಷಾರ್… ಎಂದು ಎಮ್‌ಎಲ್‌ಸಿ ಗಣಪತಿ ಉಳ್ವೇಕರ್ ಗುಡುಗಿದರು.

ನೀವು ಯಾರಿಗೆ ಕೈ ತೋರಿಸಿ ಮಾತನಾಡ್ತೀರಾ..? ಕೈ ತೋರಿಸಿ ನನ್ನ ಮುಂದೆ ಜೋರು ಮಾತನಾಡಬೇಡಿ.. ಕೇಂದ್ರ ಸರ್ಕಾರ ಈ ಯೋಜನೆಗೆ ಅನುದಾನ ನೀಡಿದ್ದು, ಕೋರ್ಟ್ ಕೂಡಾ ಯೋಜನೆಗೆ ಅಸ್ತು ಎಂದಿದೆ. ಈಗೇನೂ ಮಾಡುವುದಕ್ಕೆ ಆಗಲ್ಲ ಎಂದು ಮೀನುಗಾರರಿಗೆ ಹೇಳಿದ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಕೊನೆಗೂ ಸರಿಯಾದ ನಿರ್ಣಯವಾಗದೆ ಸಭೆ ಮುಕ್ತಾಯಗೊಂಡಿತು.

ಹಳ್ಳಿ ರಸ್ತೆಗಾಗಿ ಎಷ್ಟೇ ಮನವಿ ಮಾಡಿದರೂ ಡೋಂಟ್ ಕೇರ್, ಬಿಜೆಪಿ ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರಿಂದ ತರಾಟೆ ಗದಗ: ಮುಂಡರಗಿ ತಾಲೂಕಿನ ಶಿರೋಳ ಗ್ರಾಮದಲ್ಲಿ (Shirol village) ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮದ ರಸ್ತೆ ಮಾಡಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದದರೂ ಸ್ಪಂದಿಸದ ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ.

ನಡುರಸ್ತೆಯಲ್ಲೇ ಶಾಸಕರ ಕಾರು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ ಗ್ರಾಮಸ್ಥರು. ರಾಮಣ್ಣ ಲಮಾಣಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಗ್ರಾಮಕ್ಕೆ ಆಗಮಿಸಿದ್ದ ಶಾಸಕ ರಾಮಣ್ಣ ಲಮಾಣಿಗೆ (Shirahatti BJP MLA Ramanna Lamani) ದಿಗ್ಭಂಧನ ಹಾಕಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಆ ವೇಳೆ ರೈತರ ಆಕ್ರೋಶಕ್ಕೆ ಶಾಸಕ ರಾಮಣ್ಣ ತಡಬಡಾಯಿಸಿದ್ದಾರೆ. ಕೆಲಸ ಮಾಡ್ತಿರೋ, ಇಲ್ವೋ ಅಂತ ಶಾಸಕ ರಾಮಣ್ಣಗೆ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಕ್ಷೇತ್ರಗಳಿಗೆ ಬಿಜೆಪಿ ಸರ್ಕಾರದಿಂದ ನಿರಂತರ ತಾರತಮ್ಯ ನಡೆಯುತ್ತಿದೆ: ರಾಮಲಿಂಗಾ ರೆಡ್ಡಿ ಗರಂ

ಇದನ್ನೂ ಓದಿ: ಕೇಂದ್ರದಲ್ಲಿ ಬಿಜೆಪಿಯನ್ನು ಹಿಂದಿಕ್ಕಲು ಆಗಿಲ್ಲವೆಂಬುದು ವಾಸ್ತವ, ಬೊಮ್ಮಾಯಿ ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ -ದೇವೇಗೌಡ

Published On - 7:28 pm, Sat, 12 March 22