ಕುಂಬಳಕಾಯಿ ಒಡೆದು ಬಸ್ ಸೇವೆ ಪುನರಾರಂಭ

ಬೆಂಗಳೂರು: ಲಾಕ್​​ಡೌನ್​​ ನಡುವೆ ಬಂಧಿಯಾಗಿದ್ದ ಕೆಎಸ್​ಆರ್​​ಟಿಸಿ ಬಸ್​​ಗಳು ಇವತ್ತು ರಸ್ತೆಗಿಳೀತಿವೆ. 55 ದಿನಗಳ ಬಳಿಕ ಮತ್ತೆ ಬಸ್ ಸಂಚಾರ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕುಂಬಳಕಾಯಿ ಒಡೆದು ಅರ್ಚಕರನ್ನ ಕರೆಸಿ ಪೂಜೆ ಸಲ್ಲಿಸಲಾಗಿದೆ. ಪ್ರಯಾಣಿಕರನ್ನ ಕರೆದೊಯ್ಯೋಕೆ ಬಸ್​​ಗಳು ಸರ್ವಸನ್ನದ್ಧವಾಗಿವೆ. ಇಂದು ಸುಮಾರು 1,500 ಕೆಎಸ್​​ಆರ್​ಟಿಸಿ ಬಸ್​ಗಳು ಸಂಚಾರ ಆರಂಭಿಸಲಿವೆ. ಬಸ್ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳವಿಲ್ಲ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಓಡಾಟ ಇರುತ್ತದೆ. ಕಂಟೇನ್ಮೆಂಟ್​​ ಜೋನ್​ಗಳಲ್ಲಿ ಬಸ್​ ಸಂಚಾರವಿಲ್ಲ. ಸರ್ಕಾರದ ಅದೇಶ […]

ಕುಂಬಳಕಾಯಿ ಒಡೆದು ಬಸ್ ಸೇವೆ ಪುನರಾರಂಭ
ಸಾಧು ಶ್ರೀನಾಥ್​

Updated on: May 19, 2020 | 1:49 PM

ಬೆಂಗಳೂರು: ಲಾಕ್​​ಡೌನ್​​ ನಡುವೆ ಬಂಧಿಯಾಗಿದ್ದ ಕೆಎಸ್​ಆರ್​​ಟಿಸಿ ಬಸ್​​ಗಳು ಇವತ್ತು ರಸ್ತೆಗಿಳೀತಿವೆ. 55 ದಿನಗಳ ಬಳಿಕ ಮತ್ತೆ ಬಸ್ ಸಂಚಾರ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕುಂಬಳಕಾಯಿ ಒಡೆದು ಅರ್ಚಕರನ್ನ ಕರೆಸಿ ಪೂಜೆ ಸಲ್ಲಿಸಲಾಗಿದೆ.

ಪ್ರಯಾಣಿಕರನ್ನ ಕರೆದೊಯ್ಯೋಕೆ ಬಸ್​​ಗಳು ಸರ್ವಸನ್ನದ್ಧವಾಗಿವೆ. ಇಂದು ಸುಮಾರು 1,500 ಕೆಎಸ್​​ಆರ್​ಟಿಸಿ ಬಸ್​ಗಳು ಸಂಚಾರ ಆರಂಭಿಸಲಿವೆ. ಬಸ್ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳವಿಲ್ಲ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಓಡಾಟ ಇರುತ್ತದೆ. ಕಂಟೇನ್ಮೆಂಟ್​​ ಜೋನ್​ಗಳಲ್ಲಿ ಬಸ್​ ಸಂಚಾರವಿಲ್ಲ. ಸರ್ಕಾರದ ಅದೇಶ ಪಾಲಿಸುವುದು ಕಡ್ಡಾಯವಾಗಿದೆ.

Published On - 7:43 am, Tue, 19 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us