Viral: ನಾವಿರೋದು ಮೂರೇ ಜನ; ಮೈಸೂರಿನಲ್ಲಿ ಜೀವನ ನಡೆಸಲು ತಿಂಗಳಿಗೆ 1.5 ಲಕ್ಷ ರೂ ಸಾಕಾ ಎಂದು ಕೇಳಿದ ಅನಿವಾಸಿ ಭಾರತೀಯ
ವಿದೇಶದಲ್ಲಿ ಕೆಲಸ ಸಿಕ್ಕರೆ ಸಾಕು, ಲೈಫ್ ಸೆಟ್ಲ್ ಆದಂತೆ ಎನ್ನುವವರ ನಡುವೆ ವಿದೇಶದಲ್ಲಿ ನೆಲೆಸಿರುವ ಭಾರತೀಯರು ತಾಯ್ನಾಡಿಗೆ ಮರಳುವ ನಿರ್ಧಾರ ಮಾಡುತ್ತಿದ್ದಾರೆ. ಇದೀಗ ಕೆನಡಾದಿಂದ ಭಾರತಕ್ಕೆ ಬರಲು ಮುಂದಾದ ಕುಟುಂಬವು ಮೈಸೂರಿನಲ್ಲಿ ಜೀವನ ನಡೆಸಲು ತಿಂಗಳಿಗೆ ಒಂದೂವರೆ ಲಕ್ಷ ರೂ ಸಾಕಾಗುತ್ತದೆಯೇ ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾರೆ. ಈ ರೆಡ್ಡಿಟ್ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತಮ ಗುಣಮಟ್ಟದ ಜೀವನ, ಅಧಿಕ ಸಂಬಳ ಸಿಗುವ ಕೆಲಸ ಹುಡುಕಿಕೊಂಡು ತಾಯ್ನಾಡು ಬಿಟ್ಟು ಕುಟುಂಬದೊಂದಿಗೆ ಅಮೆರಿಕ, ಕೆನಾಡ, ಜಪಾನ್ ಅಭಿವೃದ್ಧಿಶೀಲ ದೇಶಗಳಿಗೆ ಹೋಗ್ತಾರೆ. ಇದೀಗ ಕೆನಡಾದಲ್ಲಿರುವ ನೆಲೆಸಿರುವ ಎನ್‌ಆರ್‌ಐ ಕುಟುಂಬವೊಂದು (NRI family) ಇದೀಗ ತಾಯ್ನಾಡಿಗೆ ಬರಲು ನಿರ್ಧರಿಸಿದೆ. ಮೈಸೂರಿನಲ್ಲಿಯೇ ಉಳಿದು ಕೊಳ್ಳಲು ಮುಂದಾಗಿದ್ದು ತಿಂಗಳಿಗೆ 1.5 ಲಕ್ಷ ರೂಯಲ್ಲಿ ಜೀವನ ನಡೆಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಆದ್ರೆ ಈ ಪೋಸ್ಟ್ ಗೆ ನೆಟ್ಟಿಗರು ನೀವು ಇಲ್ಲಿ ಆರಾಮವಾಗಿ ಬದುಕ್ಬಹುದು ಎಂದು ಸಲಹೆ ನೀಡಿದ್ದಾರೆ.
ಕೆನಾಡದಿಂದ ಮೈಸೂರಿಗೆ ಶಿಫ್ಟ್ ಆಗಲು ನಿರ್ಧರಿಸಿದ ವ್ಯಕ್ತಿ
ರಿಟರ್ನ್ ಟು ಇಂಡಿಯಾ (ReturntoIndia) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ತಾಯ್ನಾಡಿಗೆ ಮರಳುವ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದಾರೆ. ಕೆನಾಡ ಒಂಟಾರಿಯೊದಲ್ಲಿ ನೆಲೆಸಿದ್ದೆ. ಆದರೆ ಇದೀಗ ತನ್ನ ಮಡದಿ, ಎಂಟು ವರ್ಷದ ಮಗುವಿನೊಂದಿಗೆ ಮೈಸೂರಿಗೆ ಮರಳಲು ನಿರ್ಧರಿಸಿದ್ದೇನೆ. ಆದರೆ ಕೇವಲ ದಿನಸಿ ಸಾಮಗ್ರಿ ಸೇರಿದಂತೆ ದಿನನಿತ್ಯದ ಖರ್ಚುಗಳಿಗೆ 1.5 ಲಕ್ಷ ರೂಪಾಯಿ ಮೀಸಲಿಡುತ್ತಿದ್ದು, ಇದರಲ್ಲಿ ಬದುಕಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಕೃತಿ ನಡುವೆ ವಾಸಿಸುವುದೇ ಮೊದಲ ಆದ್ಯತೆ
ಹಚ್ಚ ಹಸಿರಾದ ನೈಸರ್ಗಿಕ ಪರಿಸರದಲ್ಲಿ ನೆಲೆಸುವುದು ಆಸೆ. ಹೀಗಾಗಿ ಪ್ರಕೃತಿಯ ನಡುವೆ ವಸತಿ ಇರಬೇಕು ಎನ್ನುವುದಿದೆ. ಈಗಾಗಲೇ ವಸತಿ ವೆಚ್ಚವನ್ನು ಇತ್ಯರ್ಥ ಮಾಡಿಕೊಂಡಿದ್ದೇವೆ. ಹೀಗಾಗಿ ಬಾಡಿಗೆಯಾಗಲಿ, ಹೊಸ ಮನೆ ಖರೀದಿ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ರೆಡ್ಡಿಟ್ ಪೋಸ್ಟ್ ಇಲ್ಲಿದೆ
Moving from Canada to Mysuru (Family of 3, house already taken care of). Is ₹1.5 Lakh/month enough for a comfortable life? by u/yama27tor in returnToIndia
ಒಂದೂವರೆ ಲಕ್ಷ ರೂನಲ್ಲಿ ಎಲ್ಲಾ ಖರ್ಚುಗಳನ್ನು ತೂಗಿಸಲು ಸಾಧ್ಯವೇ?
ಇದನ್ನೆಲ್ಲಾ ಹೊರತು ಪಡಿಸಿ ತಿಂಗಳ ಖರ್ಚಿಗೆ 1.5 ಲಕ್ಷ ರೂಪಾಯಿ ಎತ್ತಿಡುತ್ತೇನೆ. ಈ ಮೊತ್ತದಲ್ಲಿ ವಿದ್ಯುತ್, ನೀರು, ಗ್ಯಾಸ್, ದಿನಸಿ ಸಾಮಗ್ರಿಗಳು, ವಾಹನ ನಿರ್ವಹಣೆ ಮತ್ತು ಸ್ಕೂಲ್ ಫೀಸ್ ಸೇರುತ್ತದೆ. ಈ ಹಣದಲ್ಲಿ ಎಲ್ಲವನ್ನು ನಿರ್ವಹಿಸಿಕೊಂಡು ಹೋಗಲು ಸಾಧ್ಯವೇ ಎಂಬುದು ತಿಳಿದಿಲ್ಲ ಎಂದಿದ್ದಾರೆ. ಭಾರತದಲ್ಲಿ ಮಗುವಿನ ಶಿಕ್ಷಣದ ಬಗ್ಗೆ ಚಿಂತಿಸುತ್ತಿರುವ ಈ ವ್ಯಕ್ತಿ ಮೈಸೂರಿನಲ್ಲಿ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡುವ ಶಾಲೆಗಳಿದ್ದರೆ ದಯವಿಟ್ಟು ತಿಳಿಸಿ ಎಂದು ಇಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ನೀವು ಭಾರತಕ್ಕೆ ಒಮ್ಮೆ ಬಂದ್ರೆ ಹುಟ್ಟೂರಿಗೆ ಹೋಗಲ್ಲ; ಅಸಲಿ ಕಾರಣ ತಿಳಿಸಿದ ಜಪಾನೀಸ್ ಮಹಿಳೆ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದು ಕೊಂಡಿವೆ. ಒಬ್ಬ ಬಳಕೆದಾರ, ನೀವು ಇಷ್ಟು ದೊಡ್ಡ ಮೊತ್ತವು ಒಂದು ತಿಂಗಳ ಖರ್ಚಿಗೆ ಸಾಕಾಗುತ್ತದೆಯೇ ಎಂದು ಕೇಳುತ್ತೀರಿ, ಐಷಾರಾಮಿ ಬದುಕಿಗೆ ಈ ಹಣ ಸಾಕಾಗುತ್ತದೆ ಎಂದಿದ್ದಾರೆ. ಮತ್ತೊಬ್ಬರು, ನೀವು ಈ ಹಣದಲ್ಲಿ ಉಳಿತಾಯ ಕೂಡ ಮಾಡಲು ಸಾಧ್ಯ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ನಿಮ್ಮ ಜೀವನಶೈಲಿ ಹೇಗಿದೆ ಎಂದು ತಿಳಿದಿಲ್ಲ, ಹೀಗಾಗಿ ಈ ಮೊತ್ತ ಸಾಕಾಗುತ್ತದೆಯೇ ಎಂದು ಹೇಳುವುದು ಕಷ್ಟ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




