KSRTC BMTC Strike: ಸಾರಿಗೆ ನೌಕರರ ನೋವು, ವೇದನೆ ಬಹಳ ದಿನಗಳಿಂದ ಮಡುಗಟ್ಟಿದೆ – ಕೋಡಿಹಳ್ಳಿ ಚಂದ್ರಶೇಖರ್​

| Updated By: Digi Tech Desk

Updated on: Apr 07, 2021 | 10:09 AM

Kodihalli Chandrashekar: ಸಾರಿಗೆ ನೌಕರರ ನೋವು ಹಲವು ದಿನಗಳಿಂದ ಇದೆ. ಬಂದ್ ಯಶಸ್ವಿಗೆ ಸಾರಿಗೆ ನೌಕರರ ನೋವುಗಳೇ ಕಾರಣ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

KSRTC BMTC Strike: ಸಾರಿಗೆ ನೌಕರರ ನೋವು, ವೇದನೆ ಬಹಳ ದಿನಗಳಿಂದ ಮಡುಗಟ್ಟಿದೆ - ಕೋಡಿಹಳ್ಳಿ ಚಂದ್ರಶೇಖರ್​
ಕೋಡಿಹಳ್ಳಿ ಚಂದ್ರಶೇಖರ್
Follow us on

ಬೆಂಗಳೂರು: ಕರ್ನಾಟಕ ಸರ್ಕಾರದ ವಿರುದ್ಧ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ಇತರ ನಾಲ್ಕು ಸಾರಿಗೆ ನಿಗಮದ ನೌಕರರು ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಕುರಿತಂತೆ ಸಾರಿಗೆ ನೌಕರರ ನೋವು ಹಲವು ದಿನಗಳಿಂದ ಇದೆ. ಬಂದ್ ಯಶಸ್ವಿಗೆ ಸಾರಿಗೆ ನೌಕರರ ನೋವುಗಳೇ ಕಾರಣ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಟಿವಿ9 ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸರ್ಕಾರ ಕಾಟಾಚಾರದ ಪ್ರಯತ್ನ ಮಾಡುವಂತೆ ಅನಿಸುತ್ತಿದೆ. ವ್ಯಕ್ತಿಯ ಪ್ರತಿಷ್ಠೆಗಿಂತ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸುವುದು ಮುಖ್ಯವಾಗಿದೆ. 6 ನೇ ವೇತನ ಆಯೋಗದ ಪ್ರಕಾರ ಸಂಬಳ ಹೆಚ್ಚಾಗಬೇಕು. ಆದರೆ ಸರ್ಕಾರ ಶೇ. 8ರಷ್ಟು ಹೆಚ್ಚಿಗೆ ಮಾಡುವಂತೆ ಹೇಳುತ್ತಿದೆ. ಸರ್ಕಾರ ಅವೈಜ್ಞಾನಿಕ ಪ್ರಯತ್ನ ಮಾಡುತ್ತಿರುವಂತೆ ಅನಿಸುತ್ತಿದೆ ಎಂದು ಅವರು ಮಾತನಾಡಿದ್ದಾರೆ.

ಖಾಸಗಿ ಬಸ್​ಗಳಿಂದ ಸರ್ಕಾರಕ್ಕೆ ನಷ್ಟವೇ ಹೊರತು ಲಾಭವೇನಿಲ್ಲ. 8 ಬೇಡಿಕೆಗಳಲ್ಲಿ ಹಲವು ನ್ಯೂನ್ಯತೆ ಇದೆ. ಇದನ್ನೇ ಜಾರಿ ಮಾಡಲಾಗಿದೆ. ಅವುಗಳು ಸಾರಿಗೆ ನೌಕರರ ಪರವಾಗಿಲ್ಲ. ಮೊದಲು 6 ನೇ ವೇತನದ ಬಗ್ಗೆ ನಿರ್ಧಾರವಾಗಲಿ ತದನಂತರ 8 ಬೇಡಿಕೆಗಳ ಬಗ್ಗೆ ಮಾತನಾಡುತ್ತೇವೆ. 6 ನೇ ವೇತನ ಜಾರಿಯಾಗುವವರೆಗೂ ಸಾರಿಗೆ ಮುಷ್ಕರ ಮುಂದುವರೆಯಲಿದೆ ಎಂದು ಪಟ್ಟುಹಿಡಿದಿದ್ದಾರೆ.

ಇದನ್ನೂ ಓದಿ: Bus Strike: ಸಾರಿಗೆ ಸಿಬ್ಬಂದಿ ನೌಕರರು ಹಠಮಾರಿತನದಿಂದ ಹೊರಬರಬೇಕು: ಸಚಿವ ಲಕ್ಷ್ಮಣ ಸವದಿ

Bus Strike: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತ ಸಂಬಳಕ್ಕೆ ಸಾಕಷ್ಟು ಹಣ ಖರ್ಚಾಗುತ್ತಿದೆ: ಕಂದಾಯ ಸಚಿವ ಆರ್.ಅಶೋಕ್

Published On - 9:44 am, Wed, 7 April 21