Bus Strike: ಸಾರಿಗೆ ಸಿಬ್ಬಂದಿ ನೌಕರರು ಹಠಮಾರಿತನದಿಂದ ಹೊರಬರಬೇಕು: ಸಚಿವ ಲಕ್ಷ್ಮಣ ಸವದಿ

ಬೇರೆ ರಾಜ್ಯಗಳಲ್ಲಿ ಕೊರೊನಾ ನೆಪವೊಡ್ಡಿ ಸಂಬಳ ಕಡಿತ ಮಾಡಲಾಗಿದೆ. ಆದರೆ ನಾವು ಸಾರಿಗೆ ನೌಕರರ ಸಂಬಳವನ್ನು ಕಡಿತ ಮಾಡಿಲ್ಲ. ಸೌರಿಗೆ ನೌಕರರ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ; ಸಾರಿಗೆ ಸಚಿವ ಲಕ್ಷ್ಮಣ ಸವದಿ

Bus Strike: ಸಾರಿಗೆ ಸಿಬ್ಬಂದಿ ನೌಕರರು  ಹಠಮಾರಿತನದಿಂದ ಹೊರಬರಬೇಕು: ಸಚಿವ ಲಕ್ಷ್ಮಣ ಸವದಿ
ಸಾರಿಗೆ ಸಚಿವ ಲಕ್ಷ್ಮಣ ಸವದಿ
Follow us
guruganesh bhat
|

Updated on:Apr 06, 2021 | 4:50 PM

ಬೀದರ್: ಕೊರೊನಾ ಸಮಯದಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಸಾರಿಗೆ ನೌಕರರು ನಾಳಿನ ಮುಷ್ಕರವನ್ನು ಕೈಬಿಡಬೇಕು. ಪ್ರತಿಭಟನೆ ಮಾಡಿದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ. ಮಧ್ಯಮ ವರ್ಗ ಮತ್ತು ಬಡವರು ಹಠಮಾರಿತನದಿಂದ ಹೊರಬರಬೇಕು ಎಂದು ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಕೊರೊನಾದಿಂದ ಸಾರಿಗೆ ಇಲಾಖೆಗೆ ₹ 3,200 ಕೋಟಿ ನಷ್ಟವಾಗಿದೆ. ಕೊರೊನಾಗೂ ಮುಂಚೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ದಿನಕ್ಕೆ 1 ಕೋಟಿ ಜನ ಪ್ರಯಾಣಿಸ್ತಿದ್ದರು. ಆದರೆ ಈಗ ದಿನಕ್ಕೆ 60 ಲಕ್ಷ ಜನರಷ್ಟೇ ಪ್ರಯಾಣಿಸುತ್ತಿದ್ದಾರೆ. ಈಗ ಬರುವ ಆದಾಯ ಸಂಬಳ, ಇಂಧನಕ್ಕೂ ಸಾಕಾಗುತ್ತಿಲ್ಲ. ಹಣದ ಕೊರತೆ ನೀಗಿಸಲು ಸರ್ಕಾರದಿಂದ ಹಣ ಪಡೆದಿದ್ದೇವೆ. ₹ 1,962 ಕೋಟಿ ಪಡೆದು ನೌಕರರಿಗೆ ಸಂಬಳ ಕೊಡಲಾಗಿದೆ. ಬೇರೆ ರಾಜ್ಯಗಳಲ್ಲಿ ಕೊರೊನಾ ನೆಪವೊಡ್ಡಿ ಸಂಬಳ ಕಡಿತ ಮಾಡಲಾಗಿದೆ. ಆದರೆ ನಾವು ಸಾರಿಗೆ ನೌಕರರ ಸಂಬಳವನ್ನು ಕಡಿತ ಮಾಡಿಲ್ಲ. ಸೌರಿಗೆ ನೌಕರರ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಸಂಬಳ ಪರಿಷ್ಕರಣೆಯ ಒಂದು ಬೇಡಿಕೆ ಮಾತ್ರ ಬಾಕಿ ಇದೆ. ಇದನ್ನು ಈಡೇರಿಸಿದರೆ ₹ 1 ಸಾವಿರ ಕೋಟಿ ಹೊರೆಯಾಗುತ್ತದೆ. ಆದರೂ ಕೂಡ ಸಿಎಂ ಯಡಿಯೂರಪ್ಪ ಜತೆ ಚರ್ಚಿಸಿ ಸಂಬಳ ಹೆಚ್ಚಿಸುತ್ತೇವೆ. ಚುನಾವಣಾ ನಿತಿ ಸಂಹಿತೆ ಇರುವ ಕಾರಣ ಮೇ 2ರ ವೇಳೆಗೆ ಸಂಬಳ ಹೆಚ್ಚಿಸಲು ಅನುಮತಿ ದೊರೆಯಬಹುದು ಎಂದು ಹೇಳಿದರು.

ನಾಳೆಯ ಬಂದ್​ನ ಬಿಸಿ ಇಂದಿನಿಂದಲೇ ಜನಸಾಮಾನ್ಯರಿಗೆ ತಟ್ಟತೊಡಗಿದೆ. ಬೆಂಗಳೂರಿನ ನೆಲಮಂಗಲದಲ್ಲಿ ಬಸ್‌ಗಳು‌ ಇಲ್ಲದೆ ಪ್ರಯಾಣಿಕರು ಪರದಾಟ ಪಡುತ್ತಿದ್ದಾರೆ. ಕೆಲ ಮಾರ್ಗದಲ್ಲಿ 2ನೇ ಪಾಳಿಯ ಬಸ್‌ ಸೇವೆಯಲ್ಲಿ ವ್ಯತ್ಯಯವಾಗಿದೆ. ಯಶವಂತಪುರ ಘಟಕ 8ರಲ್ಲಿ ಬಸ್​ಗಳು ನಿಂತಲ್ಲೇ ನಿಂತಿವೆ. ಯಶವಂತಪುರ ಘಟಕ 8ರಲ್ಲಿ ಒಟ್ಟು 177 ಬಸ್​ಗಳಿದ್ದು, ಜನರಲ್ ಶಿಫ್ಟ್​ನಲ್ಲಿ 60 ಹೊರಟಿವೆ.ಆದರೆ ರಾತ್ರಿ ಪಾಳಿಯಲ್ಲಿ 79 ಹೋಗಬೇಕಿದ್ದು, ಈವರೆಗೆ ಕೇವಲ 2 ಬಸ್ ಗಳು ಮಾತ್ರ ಹೋಗಿವೆ. ಜತೆಗೆ 77 ಬಸ್​ಗಳು ಡಿಪೋದಲ್ಲಿಯೇ ಇವೆ. ಬೆಂಗಳೂರಿನ ಇನ್ನೂ ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ವ್ಯತ್ಯಯವಾಗುತ್ತಿದೆ.

ಇದನ್ನೂ ಓದಿ: ನಾಳೆಯ ಮುಷ್ಕರದಲ್ಲಿ ಏನೇ ನಡೆದರೂ ಕೋಡಿಹಳ್ಳಿ ಚಂದ್ರಶೇಖರ ಹೊಣೆ; ಬಿಎಂಟಿಸಿ ಎಂಡಿ ಶಿಖಾಗೆ ದೂರು

Bus Strike: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತ ಸಂಬಳಕ್ಕೆ ಸಾಕಷ್ಟು ಹಣ ಖರ್ಚಾಗುತ್ತಿದೆ: ಕಂದಾಯ ಸಚಿವ ಆರ್.ಅಶೋಕ್

Published On - 4:40 pm, Tue, 6 April 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್