ಬೆಂಗಳೂರು: ಬೈಕ್ ಮೇಲೆ ಇಟ್ಟಿದ್ದ ಪೋಸ್ಟ್ಗಳನ್ನು ಎಗರಿಸಿದ ಕಳ್ಳ
ಪೋಸ್ಟ್ಮೆನ್ ಅಂಚೆ ಚೀಟಿ ನೀಡಲು ಮನೆಗೆ ತೆರಳಿದ್ದ ವೇಳಗೆ ಕಳ್ಳನೊಬ್ಬ ಬೈಕ್ ಮೇಲೆ ಇಟ್ಟಿದ್ದ ಪೋಸ್ಟ್ಗಳನ್ನು ಕದ್ದು ಪರಾರಿಯಾಗಿದ್ದಾನೆ.
ಬೆಂಗಳೂರು: ಪೋಸ್ಟ್ಮೆನ್ ಅಂಚೆ ಚೀಟಿ ನೀಡಲು ಮನೆಗೆ ತೆರಳಿದ್ದ ವೇಳಗೆ ಕಳ್ಳನೊಬ್ಬ ಬೈಕ್ ಮೇಲೆ ಇಟ್ಟಿದ್ದ ಪೋಸ್ಟ್ಗಳನ್ನು ಕದ್ದು ಪರಾರಿಯಾಗಿದ್ದಾನೆ. ಪೋಸ್ಟ್ಗಳನ್ನು ಕದಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಲ್ಲೇಶ್ವರಂ ಪೋಸ್ಟ್ ಆಫೀಸ್ನ ಪೋಸ್ಟ್ಮೆನ್ ನಿನ್ನೆ ಬಂದಿರುವ ಪತ್ರಗಳನ್ನು ಕೊಡಲು ಮನೆಗೆ ತೆರಳಿದ್ದರು. ಪೋಸ್ಟ್ಮೆನ್ ಮನೆಯೊಳಗೆ ಹೋಗುತ್ತಿದ್ದಂತೆ ಆರೋಪಿ ಹಿಂಬಂದಿ ಬೈಕ್ನಲ್ಲಿ ಬಂದು ಪೋಸ್ಟ್ಮೆನ್ ಬೈಕ್ನಲ್ಲಿದ್ದ ಒಂದು ಕವರ್ ಪೊಸ್ಟ್ ಆರ್ಡರ್ಗಳನ್ನು ಹೊತ್ತೊಯ್ದಿದ್ದಾನೆ.
ಸರ ಕದ್ದ ಕಳ್ಳ ಸೆರೆ ನೆಲಮಂಗಲ: ಚಿನ್ನದ ಸರ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಆರೋಪಿ ಮಜೀಶಾ ಅಹ್ಮದ್ ಎಂಬಾತ ಮಾರ್ಚ್ 19ರಂದು ಟಿ.ದಾಸರಹಳ್ಳಿಯಲ್ಲಿ ವೃದ್ಧೆ ನರಸಮ್ಮ (60) ಎಂಬುವವರ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿದ್ದನು. ಈತನನ್ನು ಪೊಲೀಸರು ಬಂಧಿಸಿ, ಬಂಧಿತನಿಂದ 20 ಗ್ರಾಂ ಚಿನ್ನದ ಸರ ಜೊತೆಗೆ ಕದ್ದ ಬೈಕ್ಅನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ
ಬೆಂಗಳೂರು: ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತದಿಂದ ವ್ಯಕ್ತಿ ಸಾವು
(thief had taken the posts on the bike in Bengaluru)