Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತದಿಂದ ವ್ಯಕ್ತಿ ಸಾವು

ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಹದೇವಪುರ ಗ್ರಾಮದ ಬಳಿ ನಡೆದಿದೆ.

ಬೆಂಗಳೂರು: ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತದಿಂದ ವ್ಯಕ್ತಿ ಸಾವು
ಹೃದಯಾಘಾತದಿಂದ ಖಾಸಗಿ ಬಸ್​ನಲ್ಲಿ ವ್ಯಕ್ತಿ ಸಾವು
Follow us
sandhya thejappa
| Updated By: shruti hegde

Updated on: Apr 06, 2021 | 11:34 AM

ನೆಲಮಂಗಲ: ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಹದೇವಪುರ ಗ್ರಾಮದ ಬಳಿ ನಡೆದಿದೆ. 50 ವರ್ಷದ ಮಂಗಳೂರಿನ ಆನಂದ್ ಪೂಜಾರಿ ಎಂಬುವವರು ಖಾಸಗಿ ಬಸ್​ನಲ್ಲಿ ಪ್ರಾಯಾಣಿಸುತ್ತಿದ್ದರು. ಈ ವೇಳೆ ಹೃದಯಾಘಾತದಿಂದ ಬಸ್​ನಲ್ಲಿ ಕೊನೆಯುಸಿರು ಎಳೆದಿದ್ದಾರೆ. ಈ ಪ್ರಕರಣ ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ವಿಚಾರಣೆಗಾಗಿ ಖಾಸಗಿ ಬಸ್​ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಜೀವದಹನ; ಮೃತರ ಸಂಖ್ಯೆ 7 ಕ್ಕೇರಿಕೆ ಮಡಿಕೇರಿ: ಮುಗುಟಗೇರಿ ಗ್ರಾಮದಲ್ಲಿ ಸಜೀವದಹನ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಂದು ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತೀವ್ರ ಗಾಯಗೊಂಡಿದ್ದ 28 ವರ್ಷದ ಮಹಿಳೆ ಭಾಗ್ಯ ಇದೀಗ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಏಪ್ರಿಲ್ 3 ರಂದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಎರವರ ಬೋಜ ಎಂಬಾತ ಮದ್ಯ ಸೇವಿಸಿ ಎರವರ ಮಂಜು ಎಂಬುವವರ ಮನೆ ಬಾಗಿಲು ಹಾಕಿ ಬೆಂಕಿ ಹಚ್ಚಿದ್ದ. ಈತನ ದುಷ್ಕೃತ್ಯಕ್ಕೆ ಆರು ಮಂದಿ ಬಲಿಯಾಗಿದ್ದರು. ಈಗ ಗಾಯಗೊಂಡಿದ್ದ ಭಾಗ್ಯ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಏಳಕ್ಕೆ ಏರಿದೆ. ಈ ಪ್ರಕರಣ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಎರವರ ಬೋಜನ ದುಷ್ಕೃತ್ಯದಿಂದ ಈಗಾಗಲೇ ಬೇಬಿ (45), ಸೀತೆ (40), ಪ್ರಾರ್ಥನಾ (6), ವಿಶ್ವಾಸ್ (3), ಪ್ರಕಾಶ್ (7) ವಿಶ್ವಾಸ್ (6) ಸಾವನ್ನಪ್ಪಿದ್ದರು. ಘಟನೆಯಲ್ಲಿ ಪಾಚೆ (60) ಗೆ ಗಾಯವಾಗಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತ ಮಹಿಳೆ ಭಾಗ್ಯ

ಇದನ್ನೂ ಓದಿ

ಕೊರೊನಾ ಹೆಚ್ಚಳ: ಬೆಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಿಗೆ 15 ದಿನ ರಜೆ ಘೋಷಣೆ

ಕೊವಿಡ್ ಸಮಯದಲ್ಲಿ ಸಾರಿಗೆ ನೌಕರರ ಮುಷ್ಕರ ಸರಿಯಲ್ಲ: ಸಚಿವ ಲಕ್ಷ್ಮಣ ಸವದಿ

(man traveling in a bus has died of heart attack in Bengaluru)