Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾದರಿ ಸರ್ಕಾರಿ ಶಾಲೆ: ಕೊಡಗಿನಲ್ಲಿ ತಲೆ ಎತ್ತಿದೆ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ

ವಸತಿ ಶಾಲೆಯಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಸುಸಜ್ಜಿತವಾದ ಬೋಧನಾ ಕೊಠಡಿಗಳು, ಸೈನ್ಸ್​ ಲ್ಯಾಬರೇಟರಿಗಳು, ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, ವಿಶಾಲವಾದ ಡೈನಿಂಗ್ ಹಾಲ್, ಬೋಧಕ ಸಿಬ್ಬಂದಿಗೆ ವಸತಿಗೃಹಗಳು ಹೀಗೆ ಎಲ್ಲಾ ಸಕಲ ಸೌಲಭ್ಯಗಳಿವೆ. ಯಾವುದೇ ಇಂಟರ್​ನ್ಯಾಷನಲ್ ರೆಸಿಡೆನ್ಷಯಲ್​ ಸ್ಕೂಲ್​ಗೆ ಕಮ್ಮಿ ಇಲ್ಲದಂತೆ ಈ ಶಾಲೆಯನ್ನ ನಿರ್ಮಾಣ ಮಾಡಲಾಗಿದೆ.

ಮಾದರಿ ಸರ್ಕಾರಿ ಶಾಲೆ: ಕೊಡಗಿನಲ್ಲಿ ತಲೆ ಎತ್ತಿದೆ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ
ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ
Follow us
preethi shettigar
| Updated By: Skanda

Updated on: Apr 06, 2021 | 12:39 PM

ಕೊಡಗು: ಸಾಮಾನ್ಯವಾಗಿ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯೋರೆ ಹೆಚ್ಚು. ಏಕೆಂದರೆ ಅಲ್ಲಿ ಇರುವ ಸೌಲಭ್ಯಗಳು ಅಷ್ಟೊಂದು ಕಳಪೆಯಾಗಿರುತ್ತವೆ ಎನ್ನುವ ಭಾವನೆಗಳು ಜನರಲ್ಲಿ ಇನ್ನೂ ಇದೆ. ಆದರೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲದಲ್ಲಿ ಇರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಈ ಮಾತುಗಳಿಗೆ ಭಿನ್ನವೆಂಬಂತೆ ಇದೆ. ಈ ಶಾಲೆ ಸರ್ಕಾರಿ ಶಾಲೆಗಳ ಮೇಲೆ ಇರುವ ಕಲ್ಪನೆಗಳನ್ನು ದೂರ ಮಾಡಿ ಹೊಸ ಅನುಭವ ನೀಡುತ್ತದೆ ಅಷ್ಟರಮಟ್ಟಿಗೆ ಈ ಶಾಲೆ ಬದಲಾವಣೆಯನ್ನು ಕಂಡುಕೊಂಡಿದೆ.

ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಕಟ್ಟಡ ಸುಂದರ ಪರಿಸರದ ಮಧ್ಯೆ ತಲೆ ಎತ್ತಿ ನಿಂತಿದೆ. ಸುಮಾರು 50 ಎಕರೆ ವಿಸ್ತಾರ ಪ್ರದೇಶದಲ್ಲಿ 19 ಕೋಟಿ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ವಸತಿ ಶಾಲೆಯನ್ನ ಅತ್ಯಾಧುನಿಕವಾಗಿ ನಿರ್ಮಾಣ ಮಾಡಲಾಗಿದೆ. ಈ ಶಾಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಭಾವಂತ 300 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಶಾಲೆಯನ್ನ ಲೋಕಾರ್ಪಣೆಗೊಳಿಸಿದ್ದಾರೆ.

ವಸತಿ ಶಾಲೆಯಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಸುಸಜ್ಜಿತವಾದ ಬೋಧನಾ ಕೊಠಡಿಗಳು, ವಿಜ್ಞಾನ ಪ್ರಯೋಗಾಲಯಗಳು, ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, ವಿಶಾಲವಾದ ಡೈನಿಂಗ್ ಹಾಲ್, ಬೋಧಕ ಸಿಬ್ಬಂದಿಗೆ ವಸತಿಗೃಹಗಳು ಹೀಗೆ ಎಲ್ಲಾ ಸಕಲ ಸೌಲಭ್ಯಗಳಿವೆ. ಯಾವುದೇ ಅಂತಾರಾಷ್ಟ್ರೀಯ ವಸತಿ ಶಾಲೆಗೆ ಕಮ್ಮಿ ಇಲ್ಲದಂತೆ ಈ ಶಾಲೆಯನ್ನ ನಿರ್ಮಾಣ ಮಾಡಲಾಗಿದೆ. ಇಂತಹ ಶಾಲೆಯಲ್ಲಿ ಕಲಿಯಲು ಮಕ್ಕಳು ಕೂಡ ಬಹಳ ಆಸಕ್ತಿವಹಿಸುತ್ತಿದ್ದಾರೆ.

Atal Bihari Vajpayee Residential School 3

ಶಾಲೆಯನ್ನು ಉದ್ಘಾಟಿಸುತ್ತಿರುವ ಕೋಟ ಶ್ರೀನಿವಾಸ ಪೂಜಾರಿ

ಹಿಂದುಳಿದ ವರ್ಗದ ನೇತೃತ್ವದಲ್ಲಿ ಈ ಶಾಲೆ ನಿರ್ಮಾಣ ಮಾಡಲಾಗಿದೆ. ಎಲ್ಲಾ ಮಕ್ಕಳಿಗೂ ಕೂಡ ಅನುಕೂಲವಾಗುವ ವಸತಿ ಗೃಹ ಮಾಡಬೇಕು ಮತ್ತು ಮೂಲಭೂತ ಸೌಲಭ್ಯಗಳನ್ನು ಮಕ್ಕಳಿಗೆ ನೀಡಬೇಕು ಎನ್ನುವ ಉದ್ದೇಶದಿಂದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ನಿರ್ಮಾಣ ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Atal Bihari Vajpayee Residential School 2

ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಭೋಜನಾಲಯ

ಪಕೃತಿ ವಾತವಾರಣ ನಮಗೆ ಖುಷಿ ಕೊಟ್ಟಿದೆ ಕಟ್ಟಡದಲ್ಲಿ ಉತ್ತಮ ಸೌಲಭ್ಯಗಳು ಇದೆ. ಇನ್ನು ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯ​ಗಳಿದ್ದು, ಉಪಹಾರ ಮಂದಿರವೂ ಇದೆ ಎಂದು ವಿದ್ಯಾರ್ಥಿನಿ ಮೇಘನಾ ತಿಳಿಸಿದ್ದಾರೆ.

ಸರ್ಕಾರವೇನೋ 19 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಶಾಲೆ ನಿರ್ಮಾಣ ಮಾಡಿದೆ. ಆದರೆ ಇದರ ಗುಣಮಟ್ಟವನ್ನ ಮುಂದೆಯೂ ಅದೇ ರೀತಿ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆಗಿದೆ. ಒಂದು ಸರ್ಕಾರಿ ಶಾಲೆಯನ್ನ ಹೀಗೂ ನಿರ್ಮಾಣ ಮಾಡಬಹುದು ಎಂಬುದಕ್ಕೆ ಕೊಡಗಿನ ಈ ಶಾಲೆಯೇ ಉದಾಹರಣೆ ಎನ್ನುವುದಂತೂ ನಿಜ.

(ವರದಿ: ಗೋಪಾಲ್ ಸೋಮಯ್ಯ)

ಇದನ್ನೂ ಓದಿ: 

ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ ಕೋಟೆನಾಡಿನ ಮಾದರಿ ಶಾಲೆ

ದೇವಸ್ಥಾನಕ್ಕೆ ಕೂಡಿಟ್ಟ ಹಣವನ್ನೂ ಸರ್ಕಾರಿ ಶಾಲೆಗೆ ಕೊಟ್ಟ ಗ್ರಾಮಸ್ಥರು; ಶಿಥಿಲಗೊಂಡಿದ್ದ ಶಾಲೆಗೆ ಮರುಜೀವ

(Atal Bihari Vajpayee Residential School constructed in Kodagu)

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು