ಸಂಕಲನ | ಸಾರಿಗೆ ಮುಷ್ಕರ: ಇಲ್ಲಿದೆ ಮೊದಲ ದಿನದಿಂದ ಈವರೆಗಿನ ಘಟನಾವಳಿಗಳ ಚಿತ್ರಣ

ಡಿ.9ರಂದು ಮೊದಲ ಬಾರಿಗೆ ನೌಕರರು ರಸ್ತೆಗಿಳಿದ ನಂತರ ಈವರೆಗೆ ಅಂದರೆ ಕಳೆದ ನಾಲ್ಕು ದಿನಗಳಲ್ಲಿ ಏನೆಲ್ಲಾ ಬೆಳವಣಿಗೆಗಳು ಆಯಿತು ಎಂಬುದರ ಪಕ್ಷಿನೋಟ ಇಲ್ಲಿದೆ.

ಸಂಕಲನ | ಸಾರಿಗೆ ಮುಷ್ಕರ: ಇಲ್ಲಿದೆ ಮೊದಲ ದಿನದಿಂದ ಈವರೆಗಿನ ಘಟನಾವಳಿಗಳ ಚಿತ್ರಣ
ಸಾಂದರ್ಭಿಕ ಚಿತ್ರ
Follow us
Guruganesh Bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 13, 2020 | 9:19 PM

ಬೆಂಗಳೂರು: ವಿಕಾಸಸೌಧದಲ್ಲಿ ಭಾನುವಾರ ಸಂಜೆ ಮುಷ್ಕರ ಹಿಂಪಡೆಯುತ್ತೇವೆ ಎಂದು ಘೋಷಿಸಿದ್ದ ಸಾರಿಗೆ ನಿಗಮಗಳ ನೌಕರರ ಸಂಘಟನೆ ನಾಯಕರು, ಫ್ರೀಡಂ ಪಾರ್ಕ್​ನಲ್ಲಿ ವರಸೆ ಬದಲಿಸಿದ್ದಾರೆ. ಮತ್ತೆ ಮುಷ್ಕರ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಬಸ್​ಗಳಿಲ್ಲದೆ ಹೈರಾಣಾಗಿದ್ದ ಜನರು ಎಲ್ಲವೂ ಒಂದು ಹಂತಕ್ಕೆ ಬಂತು ಎಂದುಕೊಳ್ಳುವ ಹೊತ್ತಿಗೆ ಸರ್ಕಾರಿ ಬಸ್​ಗಳಷ್ಟೇ ಅಲ್ಲ, ಖಾಸಗಿ ಬಸ್​ಗಳೂ ಇರುವುದಿಲ್ಲ ಎಂದು ಘೋಷಣೆ ಹೊರಬಿದ್ದಿದೆ. ಸಾಮಾನ್ಯ ಜನರ ನೆಮ್ಮದಿ ಕಿತ್ತುಕೊಂಡಿರುವ ಈ ಬೆಳವಣಿಗೆಗಳ ಬಗ್ಗೆ ಜನರು ವ್ಯಾಪಕವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಡಿ.9ರಂದು ಮೊದಲ ಬಾರಿಗೆ ನೌಕರರು ರಸ್ತೆಗಿಳಿದ ನಂತರ ಈವರೆಗೆ ಅಂದರೆ ಕಳೆದ ನಾಲ್ಕು ದಿನಗಳಲ್ಲಿ ಏನೆಲ್ಲಾ ಬೆಳವಣಿಗೆಗಳು ಆಯಿತು ಎಂಬುದರ ಪಕ್ಷಿನೋಟ ಇಲ್ಲಿದೆ.

ಕೋಡಿಹಳ್ಳಿ ಚಂದ್ರಶೇಖರ್ ರಂಗಪ್ರವೇಶಕ್ಕೆ ಏನು ಕಾರಣ?

ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘಗಳ ನೌಕರರ ಮುಷ್ಕರ ಮತ್ತು ಆ ಬೆಳವಣಿಗೆಯನ್ನು ಕೂಲಂಕಷವಾಗಿ ನೋಡಿದಾಗ ರಾಜ್ಯ ಕಾರ್ಮಿಕ ಸಂಘಟನೆಗಳ ಹೆಡೆಮುರಿ ಕಟ್ಟಿ ಅದರ ನಾಯಕತ್ವ ವಹಿಸಿಕೊಳ್ಳಲು ಕೋಡಿಹಳ್ಳಿ ಚಂದ್ರಶೇಖರ ನಿರ್ಧರಿಸಿದ್ದಾರೇನೋ ಎಂಬ ಅನುಮಾನ ಬರುವಂತಿತ್ತು. ಮುಷ್ಕರದ ಕುರಿತಾಗಿ ಮಾತುಕತೆ ಯಾರ ಜೊತೆ ನಡೆಸಬೇಕು ಎಂಬ ದಾರಿ ಕಾಣದೇ ಸರಕಾರ ಕಂಗಾಲಾದಂತಿತ್ತು. ವಾಸ್ತವವಾಗಿ ಕೋಡಿಹಳ್ಳಿ ರಂಗಪ್ರವೇಶದ ಹಿಂದೆ ಏನೆಲ್ಲಾ ಬೆಳವಣಿಗೆಗಳು ಕಾರಣವಾಗಿದ್ದವು? ಈ ಬರಹದಲ್ಲಿದೆ ಮಾಹಿತಿ.

ಕೋ. ಚಂದ್ರಶೇಖರ ಸ್ವಯಂ ನಾಯಕತ್ವ? ಮುಷ್ಕರದ ಬಗ್ಗೆ ಮಾತುಕತೆ ನಡೆಸುವುದು ಯಾರ ಜೊತೆ? ದಾರಿ ಕಾಣದೇ ಸರಕಾರ ಕಂಗಾಲು

ಏನಿದು ಆಂಧ್ರ ಮಾಡೆಲ್? ತಮ್ಮನ್ನು ರಾಜ್ಯ ಸರ್ಕಾರಿ ನೌಕರನ್ನಾಗಿ ಪರಿಗಣಿಸಬೇಕೆನ್ನುವ ರಾಜ್ಯದ ವಿವಿಧ ಸಾರಿಗೆ ನಿಗಮಗಳ ಸಿಬ್ಬಂದಿ ಜಪಿಸುತ್ತಿರುವ ಮಂತ್ರ ‘ಆಂಧ್ರ ಮಾಡೆಲ್’. ಇದೀಗ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಹ ಸಾರಿಗೆ ನಿಗಮ ನೌಕರರ ಸಂಘದ ನಾಯಕರು ಮತ್ತು ಕೆಲ ಸಿಬ್ಬಂದಿಯನ್ನು ಆಂಧ್ರ ಪ್ರದೇಶಕ್ಕೆ ಕಳಿಸಿಕೊಡುವ ಭರವಸೆ ನೀಡಿದ್ದಾರೆ. ಆಂಧ್ರ ಮುಖ್ಯಮಂತ್ರಿ ವೈ.ಎನ್.ಜಗನ್​ಮೋಹನ್ ರೆಡ್ಡಿ ಅಲ್ಲಿನ ಸಾರಿಗೆ ನಿಗಮ ನೌಕರರಿಗೆ ಮಾಡಿದ ಉಪಕಾರವೇನು? ಏನಿದು ‘ಆಂಧ್ರ ಮಾಡೆಲ್’? ಇಲ್ಲಿದೆ ಮಾಹಿತಿ.

Explainer | ಆಂಧ್ರ ಸಾರಿಗೆ ನಿಗಮ ಸಿಬ್ಬಂದಿ ಈಗ ರಾಜ್ಯ ಸರ್ಕಾರಿ ನೌಕರರು: ಏನಿದು ‘ಆಂಧ್ರ ಮಾಡೆಲ್‘?

ಮುಷ್ಕರದ ಮೊದಲ ಹೆಜ್ಜೆ ‘ಸಾರಿಗೆ ನೌಕರರ ನಡಿಗೆ-ಸರ್ಕಾರಿ ನೌಕರರಾಗುವ ಕಡೆಗೆ’ ಎಂಬ ಘೋಷಣೆಯೊಂದಿಗೆ ಸಾರಿಗೆ ಸಿಬ್ಬಂದಿ ಡಿ.9ರಂದು ರಸ್ತೆಗೆ ಇಳಿದರು. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಆರಂಭವಾದ ಕಾಲ್ನಡಿಗೆ ವಿಧಾನಸೌಧದವರೆಗೂ ಜಾಥಾ ನಡೆಸಲು ತೀರ್ಮಾನಿಸಿದರು. ಈ ಹೋರಾಟಕ್ಕೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌, ನಂಜಾವಧೂತ ಶ್ರೀ ಸೇರಿದಂತೆ ಹಲವು ಬೆಂಬಲ ಕೊಟ್ಟಿದ್ದರು.

ಇನ್ನೂ ಆರದ ಕಿಚ್ಚು.. ಇಂದೂ ಕೂಡ ಸಾಲು ಸಾಲು ಪ್ರತಿಭಟನೆ

ಕೋಡಿಹಳ್ಳಿ ಚಂದ್ರಶೇಖರ್ ರಂಗಪ್ರವೇಶ ‘ಬಿಎಂಟಿಸಿ, ಕೆಎಸ್ಆರ್‌ಟಿಸಿ ಸಂಚಾರ ಸಂಪೂರ್ಣ ನಿಲ್ಲಬೇಕು. ಯಾವೊಬ್ಬ ನೌಕರನೂ ಕೆಲಸಕ್ಕೆ ಹಾಜರಾಗೋದಿಲ್ಲ. ಯಾವ ಸಿಬ್ಬಂದಿಗೆ ನೋಟೀಸ್ ಕೊಡ್ತೀರೋ ಕೊಡಿ. ನಾವು ನಿಮ್ಮ ಬಂಡವಾಳ ಆಚೆಗೆ ತೆಗೆಯುತ್ತೇವೆ. ಇಲಾಖೆಯಲ್ಲಿ ಕಳ್ಳತನ ಮಾಡುವವರಿದ್ದರೆ ಅವರ ಬಂಡವಾಳವೂ ಹೊರಗೆ ಬರಲಿ’ ಎಂದು ಫ್ರೀಡಂಪಾರ್ಕ್​ ಬಳಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಾಳೆಯಿಂದ ಕೆಎಸ್​ಆರ್​ಟಿಸಿ-ಬಿಎಂಟಿಸಿ ಸಂಚಾರ ಸಂಪೂರ್ಣ ನಿಲ್ಲಬೇಕು: ಕೋಡಿಹಳ್ಳಿ ಚಂದ್ರಶೇಖರ್

ಅಧಿಕಾರಿಗಳ ವಿರುದ್ಧ ಅಸಮಾಧಾನ ಮುಷ್ಕರದ ಮೊದಲ ದಿನ ಅಧಿಕಾರಿಗಳು ನೌಕರರ ಒಗ್ಗಟ್ಟನ್ನು ತಪ್ಪಾಗಿ ಅಂದಾಜಿಸಿದರೆಂದು ಕಾಣಿಸುತ್ತದೆ. ಹೀಗಾಗಿಯೇ ಡಿ.10ರ ರಾತ್ರಿ ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಕಳಸದ ಮತ್ತು ಬಿಎಂಟಿಸಿ ಎಂಡಿ ಶಿಖಾ, ಬಸ್ ಸಂಚಾರ ಅಬಾಧಿತ ಎಂಬ ಹೇಳಿಕೆ ನೀಡಿದ್ದರು. ಆದರೆ ಮಾರನೇ ದಿನ ಆದದ್ದೇ ಬೇರೆ. ಸರ್ಕಾರ ಸ್ಪಂದಿಸದಿದ್ರೆ ಡಿಪೊಗಳಲ್ಲಿಯೇ ಬಸ್​ಗಳನ್ನು ಬಿಟ್ಟು ಫ್ರೀಡಂ ಪಾರ್ಕ್​ಗೆ ಹೋಗ್ತೀವಿ ಎಂದು ನೌಕರರು ಘೋಷಿಸಿದರು. ಅಧಿಕಾರಿಗಳ ಮಾತು ನಂಬಿ ರಸ್ತೆಗೆ ಬಂದಿದ್ದ ಜನರು, ಬಸ್​ಗಳು ಸಂಚರಿಸುತ್ತವೆ ಎಂದಿದ್ದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ ಸಂಚಾರದಲ್ಲಿ ವ್ಯತ್ಯಯವಿಲ್ಲ: ಮುಷ್ಕರ ಗೊಂದಲಕ್ಕೆ ಅಧಿಕಾರಿಗಳ ಸ್ಪಷ್ಟನೆ

ಆಟೊ ಚಾಲಕರಿಂದ ಜನರ ಸುಲಿಗೆ ಸಾಕಷ್ಟು ಮುಂಚಿತವಾಗಿ ಪ್ರಕಟಣೆ ನೀಡದೆ ಸಾರಿಗೆ ನಿಗಮಗಳ ನೌಕರರು ಏಕಾಏಕಿ ಮುಷ್ಕರಕ್ಕೆ ಮುಂದಾದ ಕಾರಣ ಸಾರ್ವಜನಿಕರು ಪರದಾಡುವಂತಾಯಿತು. ಪರಿಸ್ಥಿತಿಯ ದುರ್ಲಾಭ ಪಡೆದ ಆಟೊ ಚಾಲಕರು ಪ್ರಯಾಣಿಕರನ್ನು ಅಕ್ಷರಶಃ ಸುಲಿಗೆ ಮಾಡಿದರು.

ಸಾರಿಗೆ ನೌಕರರ ಪ್ರತಿಭಟನೆ ಬಿಸಿ ಜೋರು, ಆಟೋ ಚಾಲಕರಿಂದ ದುಪ್ಪಟ್ಟು ಹಣ ವಸೂಲಿ

ಉಪಯೋಗಕ್ಕೆ ಬರಲಿಲ್ಲ ಸಿಎಂ ಮನವಿ ಸದ್ಯ ಸರ್ಕಾರದ ಪರಿಸ್ಥಿತಿ ಸರಿ ಇಲ್ಲ. ಕೋವಿಡ್ ಹಿನ್ನಲೆಯಲ್ಲಿ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಬೇಡಿಕೆ ಈಡೇರಿಸುವುದು ಕಷ್ಟ ಮುಷ್ಕರ ಬಿಟ್ಟು ಕೆಲಸಕ್ಕೆ ಹೊರಡಿ ಎಂದು ಸಾರಿಗೆ ನೌಕರರಿಗೆ ಬಿಎಸ್​ವೈ ವಿನಂತಿಸಿಕೊಂಡರು. ಆದರೆ ಮುಖ್ಯಮಂತ್ರಿ ವಿನಂತಿಗೆ ಸಾರಿಗೆ ನಿಗಮಗಳ ನೌಕರರು ಬೆಲೆ ಕೊಡಲಿಲ್ಲ.

ಮನೆಯಿಂದ ಹೊರಡುವಾಗ ರಾಜಧಾನಿ ಜನರೇ ಎಚ್ಚರ.. ಎಲ್ಲೆಲ್ಲಿ ಸಾರಿಗೆ ಪ್ರತಿಭಟನೆ ಬಿಸಿ ಹೇಗಿದೆ?

ಸವದಿ ಸಂಧಾನಕ್ಕೆ ನೌಕರರ ಆಕ್ಷೇಪ ಮುಷ್ಕರಕ್ಕೆ ಕರೆ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಸಾರಿಗೆ ನೌಕರರ ಇತರ ಒಕ್ಕೂಟಗಳ ನಾಯಕರನ್ನು ಬದಿಗಿಟ್ಟು, KSRTC ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ರಾಜ್ಯಾಧ್ಯಕ್ಷ ಅನಂತ ಸುಬ್ಬರಾವ್ ಅವರನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಭೆಗೆ ಆಹ್ವಾನಿಸಿದ್ದರು. ನೌಕರರ ಪ್ರತಿಭಟನೆಯಲ್ಲಿ ಅನಂತ ಸುಬ್ಬರಾವ್ ಭಾಗಿಯಾಗಿರಲಿಲ್ಲ. ಮುಷ್ಕರವನ್ನು ಫ್ಲಾಪ್ ಮಾಡಲು ಸಾರಿಗೆ ಸಚಿವರು ಈ ಪ್ಲಾನ್ ಹೂಡಿದ್ರಾ ಎಂಬ ಗುಮಾನಿ ಸಹ ಸಾರಿಗೆ ನೌಕರರಲ್ಲಿ ಮೂಡಿತ್ತು.

ಸಾರಿಗೆ ನೌಕರರ ಮತ್ತೊಂದು ಬಣದೊಂದಿಗೆ ಸಚಿವ ಸವದಿ ಸಂಧಾನ ಸಭೆ: ನೌಕರರ ಆಕ್ಷೇಪ

ಮುಷ್ಕರ ಹಿಂಪಡೆಯಲು ಅನಂತ ಸುಬ್ಬರಾವ್ ಮನವಿ ಸಾರಿಗೆ ನೌಕರರು ದಿಢೀರ್ ಮುಷ್ಕರ ಮಾಡಿದ್ದಾರೆ. ಇದೇ ಮೊದಲ ಮುಷ್ಕರವಲ್ಲ, ಇದೇ ಕೊನೆಯಾಗಲ್ಲ. ಜನರಿಗೆ ತೊಂದರೆ ಕೊಡದೆ ಮುಷ್ಕರ ವಾಪಸ್ ಪಡೆಯಿರಿ ಎಂದು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ಸಾರಿಗೆ ನೌಕರರಿಗೆ ಮನವಿ ಮಾಡಿದರು.

ಸಾರಿಗೆ ನೌಕರರ ದಿಢೀರ್ ಮುಷ್ಕರದ ಬಗ್ಗೆ ಮಾಹಿತಿ ಇಲ್ಲ: ಅನಂತ ಸುಬ್ಬರಾವ್

ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಮರಳಿ: ಸವದಿ ಮನವಿ ನಮ್ಮ-ನಿಮ್ಮ ಮಧ್ಯದ ಬಾಂಧವ್ಯ ಹಾಳಾಗುವುದು ಬೇಡ. ಏನೇ ಸಮಸ್ಯೆ ಇದ್ದರೂ ಬಂದು ಚರ್ಚಿಸಿ ಬಗೆಹರಿಸಿಕೊಳ್ಳಿ. ಕೊವಿಡ್ ಪರಿಹಾರ ₹ 30 ಲಕ್ಷ 15 ದಿನಗಳಲ್ಲಿ ನೀಡಲಾಗುವುದು. ರಾತ್ರಿ ಎಷ್ಟೊತ್ತಾದರೂ ನಿಮಗಾಗಿ ಕಾಯುತ್ತಿರುತ್ತೇನೆ. ಬಂದು ಮಾತನಾಡಿ, ಜನರಿಗೆ ತೊಂದರೆಯಾಗುವುದು ಬೇಡ ಎಂದು ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದರು. ಆದರೆ ಸವದಿ ಮಾತಿಗೆ ಸಾರಿಗೆ ನೌಕರರು ಬೆಲೆ ಕೊಡಲಿಲ್ಲ. ಮುಷ್ಕರ ಮುಂದುವರಿಯಿತು.

ಚರ್ಚಿಸೋಣ ಬನ್ನಿ, ಮುಷ್ಕರ ಕೈಬಿಡಿ: ಸಾರಿಗೆ ನೌಕರರಿಗೆ ಸಚಿವ ಸವದಿ ಮನವಿ

ಮುಷ್ಕರಕ್ಕೆ ಸಂಬಂಧಿಸಿದ ಇತರ ಮುಖ್ಯ ಬೆಳವಣಿಗೆಗಳು ಇವು…

ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದ್ದ ಬಸ್ ಚಾಲಕ ರಾತ್ರಿ ಹೃದಯಾಘಾತದಿಂದ ಸಾವು

ಸಾರಿಗೆ ನೌಕರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕರೆ: ಮುಷ್ಕರ ಬಿಟ್ಟು ಕೆಲಸಕ್ಕೆ ಮರಳಿದ ನಂತರ ಮಾತುಕತೆ

ನಡುರಾತ್ರಿ ಗಡುವು ನೀಡಿದ ಸಚಿವ ಸವದಿ, ನಾಳೆಯಿಂದ ಖಾಸಗಿ ಬಸ್ ಬಳಕೆಯ ಎಚ್ಚರಿಕೆ ರವಾನೆ

ಖಾಸಗಿ ಚಾಲಕರ ನೇಮಕಕ್ಕೆ ಚಿಂತನೆ.. ಅವರು ಹತ್ತೇ ದಿನ ಕೆಲಸ ಮಾಡಿದ್ರೂ 3 ತಿಂಗಳ ಸಂಬಳ?

ಫ್ರೀಡಂ ಪಾರ್ಕ್​ನಲ್ಲಿ ಸಾರಿಗೆ ನೌಕರರ ಹರ್ಷೋದ್ಗಾರ: ಮೊಬೈಲ್ ಟಾರ್ಚ್ ಆನ್ ಮಾಡಿ ಸಂತಸ ವ್ಯಕ್ತ

ಮುಷ್ಕರ ಮುಂದುವರಿಯಲಿದೆ, ಯಾರೂ ಬಸ್​ ತೆಗೆಯಬೇಡಿ -ಸರ್ಕಾರಕ್ಕೆ ಮತ್ತೆ ಶಾಕ್​ ಕೊಟ್ಟ ಸಾರಿಗೆ ನೌಕರರು

Published On - 9:08 pm, Sun, 13 December 20

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ