ಒಪ್ಪಂದದ ಮೇರೆಗೆ ಕೆಎಸ್‌ಆರ್‌ಟಿಸಿ ಬಸ್ ಲಭ್ಯ: ಷರತ್ತುಗಳು ಏನು?

ಬೆಂಗಳೂರು: ಲಾಕ್​ಡೌನ್ ಅಂತ್ಯವಾಗುವ ಮುನ್ನವೇ ನಿಯಮ ಮತ್ತಷ್ಟು ಸಡಿಲಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ನೀಡಿದೆ. ಮೇ 3ರ ನಂತರ ಲಾಕ್‌ಡೌನ್ ಅಂತ್ಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಒಪ್ಪಂದದ ಮೇರೆಗೆ ಬಸ್ ಓಡಿಸಲು ಕೆಎಸ್‌ಆರ್‌ಟಿಸಿ ಸಿದ್ಧತೆ ನಡೆಸಿದೆ. ಕೈಗಾರಿಕೆಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಐಟಿಬಿಟಿ ವಲಯಗಳಿಗೆ ಬಸ್ ಬಾಡಿಗೆಗೆ ನೀಡಲು KSRTC ನಿರ್ಧರಿಸಿದೆ. ಸರ್ಕಾರ ಅನುಮತಿಸಿರುವ ಅಗತ್ಯಸೇವೆಗಳಿಗೆ ಮಾತ್ರ ಬಸ್ ನೀಡುವುದಾಗಿ KSRTC ಪ್ರಕಟಣೆ ಹೊರಡಿಸಿದೆ. ಸಾಮಾನ್ಯ ಮತ್ತು ರಾಜಹಂಸ ಬಸ್‌ಗಳನ್ನು ಬಾಡಿಗೆಗೆ ನೀಡಲಿದ್ದು, ಕೆಲವೊಂದು ಷರತ್ತುಗಳನ್ನು […]

ಒಪ್ಪಂದದ ಮೇರೆಗೆ ಕೆಎಸ್‌ಆರ್‌ಟಿಸಿ ಬಸ್ ಲಭ್ಯ: ಷರತ್ತುಗಳು ಏನು?
ಕೆಎಸ್​ಆರ್​ಟಿಸಿ ಬಸ್

Updated on: Apr 25, 2020 | 10:14 AM

ಬೆಂಗಳೂರು: ಲಾಕ್​ಡೌನ್ ಅಂತ್ಯವಾಗುವ ಮುನ್ನವೇ ನಿಯಮ ಮತ್ತಷ್ಟು ಸಡಿಲಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ನೀಡಿದೆ. ಮೇ 3ರ ನಂತರ ಲಾಕ್‌ಡೌನ್ ಅಂತ್ಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಒಪ್ಪಂದದ ಮೇರೆಗೆ ಬಸ್ ಓಡಿಸಲು ಕೆಎಸ್‌ಆರ್‌ಟಿಸಿ ಸಿದ್ಧತೆ ನಡೆಸಿದೆ.

ಕೈಗಾರಿಕೆಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಐಟಿಬಿಟಿ ವಲಯಗಳಿಗೆ ಬಸ್ ಬಾಡಿಗೆಗೆ ನೀಡಲು KSRTC ನಿರ್ಧರಿಸಿದೆ. ಸರ್ಕಾರ ಅನುಮತಿಸಿರುವ ಅಗತ್ಯಸೇವೆಗಳಿಗೆ ಮಾತ್ರ ಬಸ್ ನೀಡುವುದಾಗಿ KSRTC ಪ್ರಕಟಣೆ ಹೊರಡಿಸಿದೆ. ಸಾಮಾನ್ಯ ಮತ್ತು ರಾಜಹಂಸ ಬಸ್‌ಗಳನ್ನು ಬಾಡಿಗೆಗೆ ನೀಡಲಿದ್ದು, ಕೆಲವೊಂದು ಷರತ್ತುಗಳನ್ನು ವಿಧಿಸಿದೆ.

ಸಾಮಾನ್ಯ ಬಸ್‌ಗಳ ಬಾಡಿಗೆ ನಿಗದಿ ಮಾಡಿರುವ KSRTC, ಪ್ರತಿ ಕಿಲೋ ಮೀಟರ್​ಗೆ 40 ರೂ, 12 ಗಂಟೆ ಅವಧಿಗೆ 8 ಸಾವಿರ ರೂ,‌ 24 ಗಂಟೆ ಅವಧಿಗೆ 10 ಸಾವಿರ ರೂ. ಬಾಡಿಗೆ ನಿಗದಿ ಮಾಡಲಾಗಿದೆ. ಬಸ್​ನಲ್ಲಿ 20 ಅಥವಾ 30 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.

ರಾಜಹಂಸ ಬಸ್ ಪ್ರತಿ‌ ಕಿಲೋ ಮೀಟರ್​ಗೆ 45 ರೂ, 12 ಗಂಟೆ ಅವಧಿಗೆ 9 ಸಾವಿರ ರೂ. ಹಾಗೂ 24 ಗಂಟೆ ಅವಧಿಗೆ 11,250 ರೂ. ನಿಗದಿ ಪಡಿಸಲಾಗಿದೆ. ರಾಜಹಂಸ ಬಸ್​ನಲ್ಲಿ 16 ಮಂದಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ.

Published On - 10:10 am, Sat, 25 April 20