AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Road Accident: ಪೆಟ್ರೋಲ್ ಹಾಕಿಸಿ ತೆರಳುವಾಗ ಸಚಿವ ಕೋಟ ಶ್ರೀನಿವಾಸ್​ ಪೂಜಾರಿ ಕಾರ್​ಗೆ KSRTC ಬಸ್​ ಡಿಕ್ಕಿ

Kota Shrinivas Poojari : ಬಿಡದಿ ಬಳಿಯಿರುವ ಕದಂಬ ಹೋಟೆಲ್ ಮುಂಭಾಗದಲ್ಲಿ ರಸ್ತೆ​​ ಕ್ರಾಸ್​ ಮಾಡುವಾಗ ಸಚಿವ ಕೋಟ ಶ್ರೀನಿವಾಸ್​ ಪೂಜಾರಿ ಅವರ ಕಾರು ಅಪಘಾತಕ್ಕೆ ಈಡಾಗಿದೆ. ಸಚಿವರ ಇನೋವಾ ಕಾರಿಗೆ KSRTC ಬಸ್​ ಡಿಕ್ಕಿ ಹೊಡೆದಿದೆ.

Road Accident: ಪೆಟ್ರೋಲ್ ಹಾಕಿಸಿ ತೆರಳುವಾಗ ಸಚಿವ ಕೋಟ ಶ್ರೀನಿವಾಸ್​ ಪೂಜಾರಿ ಕಾರ್​ಗೆ KSRTC ಬಸ್​ ಡಿಕ್ಕಿ
ಸಚಿವ ಕೋಟ ಶ್ರೀನಿವಾಸ್​ ಪೂಜಾರಿ ಕಾರ್​ಗೆ KSRTC ಬಸ್​ ಡಿಕ್ಕಿ
KUSHAL V
|

Updated on:Feb 19, 2021 | 8:33 PM

Share

ಬೆಂಗಳೂರು: ಬಿಡದಿ ಬಳಿಯಿರುವ ಕದಂಬ ಹೋಟೆಲ್ ಮುಂಭಾಗದಲ್ಲಿ ರಸ್ತೆ​​ ಕ್ರಾಸ್​ ಮಾಡುವಾಗ ಸಚಿವ ಕೋಟ ಶ್ರೀನಿವಾಸ್​ ಪೂಜಾರಿ ಅವರ ಕಾರು ಅಪಘಾತಕ್ಕೆ ಈಡಾಗಿದೆ. ಸಚಿವರ ಇನೋವಾ ಕಾರಿಗೆ KSRTC ಬಸ್​ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ಅಪಘಾತದಲ್ಲಿ ಸಚಿವರು ಸೇರಿ ಯಾರಿಗೂ ಅಪಾಯವಾಗಿಲ್ಲ. ಸಚಿವ ಪೂಜಾರಿ ತಮ್ಮ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡು ತೆರಳುವಾಗ KSRTC ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕುಂಬಳಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. KSRTC ಬಸ್ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿತ್ತು. ಅಪಘಾತದಲ್ಲಿ ಕಾರಿನ‌ ಒಂದು ಭಾಗ ಸಂಪೂರ್ಣ ಜಖಂಗೊಂಡಿದೆ.

BNG SRINIVAS POOJARI CAR ACCIDENT 1

ಬಿಡದಿ ಬಳಿಯಿರುವ ಕದಂಬ ಹೋಟೆಲ್ ಮುಂಭಾಗದಲ್ಲಿ ನಡೆದ ಅಪಘಾತ

ಇದನ್ನೂ ಓದಿ: ರಸ್ತೆ ಬದಿ ಆಟಿಕೆ ಮಾರುವ ಮಕ್ಕಳ ಮಾಹಿತಿ ಸಂಗ್ರಹಿಸಿ -BBMP, ಪೊಲೀಸರಿಗೆ ಹೈಕೋರ್ಟ್‌ ನಿರ್ದೇಶನ

Published On - 7:14 pm, Fri, 19 February 21