3 ದಿನದಿಂದ ರಸ್ತೆ ಮಧ್ಯೆಯೇ ಕೆಟ್ಟು ನಿಂತಿರುವ ಕೆಎಸ್​ಆರ್​​ಟಿಸಿ ಬಸ್; ಕೆಸರುಗದ್ದೆಯಾದ ನಗರ ರಸ್ತೆ, ಭತ್ತ ನಾಟಿ ಮಾಡಿದ ಸ್ಥಳೀಯರು

| Updated By: ಸಾಧು ಶ್ರೀನಾಥ್​

Updated on: Aug 19, 2021 | 12:48 PM

ಕೊಡಗು: ಕೆಎಸ್​ಆರ್​​ಟಿಸಿ ಬಸ್ಸೊಂದು ಮೂರು ದಿನಗಳಿಂದ ರಸ್ತೆಯ ಮಧ್ಯೆಯೇ ಕೆಟ್ಟು ನಿಂತಿದೆ. ರಸ್ತೆ ಮಧ್ಯೆಯೇ ಬಸ್ ನಿಂತಿರುವ ಹಿನ್ನೆಲೆ ಇತರೆ ವಾಹನಗಳ ಸವಾರರು ಪರದಾಡುವಂತಾಗಿದೆ. ಈ ಮಧ್ಯೆ, 3 ದಿನ ಕಳೆದರೂ ಸಾರಿಗೆ ಸಿಬ್ಬಂದಿ ಬಸ್ ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸೋಮವಾರಪೇಟೆ-ಶನಿವಾರಸಂತೆ ರಸ್ತೆಯಲ್ಲಿ ಸರ್ಕಾರಿ ಸಾರಿಗೆ ಬಸ್ ಕೆಟ್ಟು ನಿಂತಿದೆ. ಕೆಸರುಗದ್ದೆಯಂತಾದ ನಗರ ರಸ್ತೆ; ಭತ್ತದ ಪೈರು ನಾಟಿ ಮಾಡಿ ಸ್ಥಳೀಯರಿಂದ ಪ್ರತಿಭಟನೆ ಅದು ನಗರ ಮಧ್ಯೆಯಿರುವ ಹೈಟೆಕ್ […]

3 ದಿನದಿಂದ ರಸ್ತೆ ಮಧ್ಯೆಯೇ ಕೆಟ್ಟು ನಿಂತಿರುವ ಕೆಎಸ್​ಆರ್​​ಟಿಸಿ ಬಸ್; ಕೆಸರುಗದ್ದೆಯಾದ ನಗರ ರಸ್ತೆ, ಭತ್ತ ನಾಟಿ ಮಾಡಿದ ಸ್ಥಳೀಯರು
3 ದಿನದಿಂದ ರಸ್ತೆ ಮಧ್ಯೆಯೇ ಕೆಟ್ಟು ನಿಂತಿರುವ ಕೆಎಸ್​ಆರ್​​ಟಿಸಿ ಬಸ್; ಕೆಸರುಗದ್ದೆಯಾದ ನಗರ ರಸ್ತೆ, ಭತ್ತ ನಾಟಿ
Follow us on

ಕೊಡಗು: ಕೆಎಸ್​ಆರ್​​ಟಿಸಿ ಬಸ್ಸೊಂದು ಮೂರು ದಿನಗಳಿಂದ ರಸ್ತೆಯ ಮಧ್ಯೆಯೇ ಕೆಟ್ಟು ನಿಂತಿದೆ. ರಸ್ತೆ ಮಧ್ಯೆಯೇ ಬಸ್ ನಿಂತಿರುವ ಹಿನ್ನೆಲೆ ಇತರೆ ವಾಹನಗಳ ಸವಾರರು ಪರದಾಡುವಂತಾಗಿದೆ. ಈ ಮಧ್ಯೆ, 3 ದಿನ ಕಳೆದರೂ ಸಾರಿಗೆ ಸಿಬ್ಬಂದಿ ಬಸ್ ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸೋಮವಾರಪೇಟೆ-ಶನಿವಾರಸಂತೆ ರಸ್ತೆಯಲ್ಲಿ ಸರ್ಕಾರಿ ಸಾರಿಗೆ ಬಸ್ ಕೆಟ್ಟು ನಿಂತಿದೆ.

ಕೆಸರುಗದ್ದೆಯಂತಾದ ನಗರ ರಸ್ತೆ; ಭತ್ತದ ಪೈರು ನಾಟಿ ಮಾಡಿ ಸ್ಥಳೀಯರಿಂದ ಪ್ರತಿಭಟನೆ

ಅದು ನಗರ ಮಧ್ಯೆಯಿರುವ ಹೈಟೆಕ್ ಪ್ರದೇಶ. ಆದರೆ ಅಲ್ಲಿನ ರಸ್ತೆಗಳು ಹದಗೆಟ್ಟಿವೆ. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ರಸ್ತೆಯಲ್ಲಿ ಭತ್ತ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ನಗರದ ಎಸ್ ಎಸ್ ಬಡಾವಣೆ ಯಎ ಬ್ಲಾಕ್ ನಲ್ಲಿಈ ಘಟನೆ ನಡೆದಿದೆ.

ಕಳೆದ ಐದಾರು ತಿಂಗಳಿಂದ ಈ ಪ್ರದೇಶದಲ್ಲಿ ರಸ್ತೆಗಳು ಹದಗೆಟ್ಟಿವೆ. ಈ ವಿಚಾರವಾಗಿ ಮಹಾನಗರ ಪಾಲಿಕೆಗೆ ಮನವಿ ಕೂಡಾ ಸಲ್ಲಿಸಲಾಗಿದೆ. ಆದ್ರೆ ಯಾರೂ ಕೂಡಾ ಇದರತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಮುಂಗಾರು ಮಳೆ ಆಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತೀವ್ರ ತೊಂದರೆ ಆಗುತ್ತಿದೆ. ಇದಕ್ಕೆ ಮಹಾನಗರ ಪಾಲಿಕೆ ಕಾರಣ ಎಂದು ಸ್ಥಳೀಯರು ಸಿಟ್ಟಿಗೆದ್ದು ನಡು ರಸ್ತೆಯಲ್ಲಿ ಭತ್ತ ನಾಟಿ ಮಾಡಿ ಮಾಡಿದ್ದಾರೆ.

(ksrtc bus stranded on somwarpet road since 3 days)