ಪಾಸ್ ಇದ್ದರೂ, ಚಲಿಸುತ್ತಿದ್ದ ಬಸ್‌ನಿಂದ ವಿದ್ಯಾರ್ಥಿನಿಯನ್ನ ಹೊರದಬ್ಬಿದ ಕಂಡಕ್ಟರ್‌!

|

Updated on: Nov 19, 2019 | 11:26 AM

ಬೆಂಗಳೂರು: ಬಸ್‌ ಪಾಸ್ ಇದ್ದುದ್ದರಿಂದ ಟಿಕೆಟ್‌ ತೆಗೆದುಕೊಳ್ಳಲು ನಿರಾಕರಿಸಿದ ವಿದ್ಯಾರ್ಥಿನಿಯನ್ನು ಕಂಡಕ್ಟರ್‌ ಬಸ್‌ನಿಂದ ಹೊರದಬ್ಬಿದ ಘಟನೆ ಯಲಚೇನಹಳ್ಳಿಯಲ್ಲಿ ನಡೆದಿದೆ. ಭೂಮಿಕಾ ನಗರದ ಜ್ಯೋತಿ ಕೇಂದ್ರಿಯ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ನವೆಂಬರ್ 11 ರಂದು ಭೂಮಿಕಾ ಕಾಲೇಜು ಮುಗಿಸಿಕೊಂಡು ಊರಿಗೆ ಹೋಗಲು ಕೆಎಸ್ ಆರ್ ಟಿಸಿ ಬಸ್‌ ಹತ್ತಿದ್ದಾಳೆ. ಈ ವೇಳೆ ಕಂಡಕ್ಟರ್‌ ಶಿವಶಂಕರ್ ಟಿಕೆಟ್ ಖರೀದಿಸಲು ಹೇಳಿದ್ದಾನೆ. ಪಾಸ್​ ಇದ್ದ ಕಾರಣ ಭೂಮಿಕಾ ಟಿಕೆಟ್​ ತೆಗೆದುಕೊಳ್ಳಲು ನಿರಾಕರಿಸಿದ್ದಾಳೆ. ಇದ್ರಿಂದ ಸಿಟ್ಟಿಗೆದ್ದ ಕಂಡಕ್ಟರ್‌ ಶಿವಶಂಕರ್ ಚಲಿಸುತ್ತಿದ್ದ ಬಸ್​ನಿಂದ […]

ಪಾಸ್ ಇದ್ದರೂ, ಚಲಿಸುತ್ತಿದ್ದ ಬಸ್‌ನಿಂದ ವಿದ್ಯಾರ್ಥಿನಿಯನ್ನ ಹೊರದಬ್ಬಿದ ಕಂಡಕ್ಟರ್‌!
Follow us on

ಬೆಂಗಳೂರು: ಬಸ್‌ ಪಾಸ್ ಇದ್ದುದ್ದರಿಂದ ಟಿಕೆಟ್‌ ತೆಗೆದುಕೊಳ್ಳಲು ನಿರಾಕರಿಸಿದ ವಿದ್ಯಾರ್ಥಿನಿಯನ್ನು ಕಂಡಕ್ಟರ್‌ ಬಸ್‌ನಿಂದ ಹೊರದಬ್ಬಿದ ಘಟನೆ ಯಲಚೇನಹಳ್ಳಿಯಲ್ಲಿ ನಡೆದಿದೆ.

ಭೂಮಿಕಾ ನಗರದ ಜ್ಯೋತಿ ಕೇಂದ್ರಿಯ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ನವೆಂಬರ್ 11 ರಂದು ಭೂಮಿಕಾ ಕಾಲೇಜು ಮುಗಿಸಿಕೊಂಡು ಊರಿಗೆ ಹೋಗಲು ಕೆಎಸ್ ಆರ್ ಟಿಸಿ ಬಸ್‌ ಹತ್ತಿದ್ದಾಳೆ. ಈ ವೇಳೆ ಕಂಡಕ್ಟರ್‌ ಶಿವಶಂಕರ್ ಟಿಕೆಟ್ ಖರೀದಿಸಲು ಹೇಳಿದ್ದಾನೆ. ಪಾಸ್​ ಇದ್ದ ಕಾರಣ ಭೂಮಿಕಾ ಟಿಕೆಟ್​ ತೆಗೆದುಕೊಳ್ಳಲು ನಿರಾಕರಿಸಿದ್ದಾಳೆ. ಇದ್ರಿಂದ ಸಿಟ್ಟಿಗೆದ್ದ ಕಂಡಕ್ಟರ್‌ ಶಿವಶಂಕರ್ ಚಲಿಸುತ್ತಿದ್ದ ಬಸ್​ನಿಂದ ಭೂಮಿಕಾಳನ್ನ ತಳ್ಳಿದ್ದಾನೆ.

ಬೆಂಗಳೂರಿಂದ ಕನಕಪುರಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಭೂಮಿಕಾಳ ಹಲ್ಲು ಮುರಿದು ಹೋಗಿದೆ. ತೀವ್ರವಾಗಿ ಗಾಯಗಳಾಗಿವೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Published On - 11:20 am, Tue, 19 November 19