ಸ್ವಗ್ರಾಮಗಳಿಗೆ ತೆರಳುತ್ತಿರುವ ವಲಸೆ ಕಾರ್ಮಿಕರ ಬಳಿ ಕೆಎಸ್ಆರ್ಟಿಸಿ ಸುಲಿಗೆ!
ಬೆಂಗಳೂರು: ಡೆಡ್ಲಿ ಕೊರೊನಾ ವೈರಸ್ ನಿಂಯಂತ್ರಿಸಲು ಮತ್ತೆ ಮೇ 17ರವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ. ಈ ಮಧ್ಯೆ ವಲಸಿಗರು ತಮ್ಮ ಸ್ವಗ್ರಾಮಗಳಿಗೆ ತೆರಳಲು ಅವಕಾಶ ನೀಡಲಾಗಿದೆ. ಹಾಗಾಗಿ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲದೆ ಗಂಟು ಮೂಟೆ ಕಟ್ಟಿಕೊಂಡು ನೂರಾರು ಕಾರ್ಮಿಕರು ಜಮಾವಣೆಗೊಂಡಿದ್ದಾರೆ. ಕೆಲಸವಿಲ್ಲದೆ, ಸಂಬಳವಿಲ್ಲದೆ ಇದ್ದ ಕಾರ್ಮಿಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಸ್ವಗ್ರಾಮಗಳಿಗೆ ತೆರಳಲು ಮುಂದಾಗಿರುವ ಕಾರ್ಮಿಕರ ಬಳಿ ಕೆಎಸ್ಆರ್ಟಿಸಿ ಸಂಸ್ಥೆಯೇ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದೆ. ಪ್ರಯಾಣ ದರ ದುಪ್ಪಟ್ಟು ವಸೂಲಿ ಮಾಡುವ ಮೂಲಕ ಸುಲಿಗೆ […]
ಬೆಂಗಳೂರು: ಡೆಡ್ಲಿ ಕೊರೊನಾ ವೈರಸ್ ನಿಂಯಂತ್ರಿಸಲು ಮತ್ತೆ ಮೇ 17ರವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ. ಈ ಮಧ್ಯೆ ವಲಸಿಗರು ತಮ್ಮ ಸ್ವಗ್ರಾಮಗಳಿಗೆ ತೆರಳಲು ಅವಕಾಶ ನೀಡಲಾಗಿದೆ. ಹಾಗಾಗಿ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲದೆ ಗಂಟು ಮೂಟೆ ಕಟ್ಟಿಕೊಂಡು ನೂರಾರು ಕಾರ್ಮಿಕರು ಜಮಾವಣೆಗೊಂಡಿದ್ದಾರೆ.
ಕೆಲಸವಿಲ್ಲದೆ, ಸಂಬಳವಿಲ್ಲದೆ ಇದ್ದ ಕಾರ್ಮಿಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಸ್ವಗ್ರಾಮಗಳಿಗೆ ತೆರಳಲು ಮುಂದಾಗಿರುವ ಕಾರ್ಮಿಕರ ಬಳಿ ಕೆಎಸ್ಆರ್ಟಿಸಿ ಸಂಸ್ಥೆಯೇ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದೆ. ಪ್ರಯಾಣ ದರ ದುಪ್ಪಟ್ಟು ವಸೂಲಿ ಮಾಡುವ ಮೂಲಕ ಸುಲಿಗೆ ಮಾಡುತ್ತಿದೆ.
ಬೆಂಗಳೂರಿನಿಂದ ಬಾಗಲಕೋಟೆಗೆ ತೆರಳಲು 700ರೂಪಾಯಿ ಬದಲು 1,311 ರೂಪಾಯಿ ವಸೂಲಿ ಮಾಡುತ್ತಿದೆ. ಅದೇ ರೀತಿ ಬಳ್ಳಾರಿಗೆ ತೆರಳಲು 450ರೂ. ಬದಲು 884 ರೂ., ಬೆಳಗಾವಿಗೆ ಹೋಗಲು 800ರೂ. ಬದಲು 1,478 ರೂಪಾಯಿ ಪಡೆಯುತ್ತಿದೆ.
Published On - 10:39 am, Sat, 2 May 20