ಉಡುಪಿ: ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಗರದ KSRTC ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೆಕ್ಯಾನಿಕ್ ಒಬ್ಬರು ತನ್ನದೇ ಶೈಲಿಯಲ್ಲಿ ಡಿಫರೆಂಟ್ ಆಗಿ ಪ್ರತಿಭಟನೆ ನಡೆಸಿದರು. ನಗರದ ಆರಾಧ್ಯ ದೈವ ಶ್ರೀಕೃಷ್ಣನಿಗ ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಸಾರಿಗೆ ನೌಕರರ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ ಡಿಪೋದ ಮೆಕ್ಯಾನಿಕ್ ನಾಗೇಶ್ ಬೋವಿ KSRTC ಬಸ್ ನಿಲ್ದಾಣದಿಂದ ಶ್ರೀಕೃಷ್ಣ ಮಠದವರೆಗೆ ದೀರ್ಘದಂಡ ನಮಸ್ಕಾರ ಮಾಡಿ ಪ್ರತಿಭಟನೆ ನಡೆಸಿದರು. ಅಂದ ಹಾಗೆ, ನಾಗೇಶ್ ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ಪ್ರತಿಭಟನೆ ಮಾಡಲು ಪೊಲೀಸರ ಬಳಿ ಅನುಮತಿ ಕೋರಿದ್ದರು. ಆದರೆ, ನಗರ ಠಾಣೆಯ ಪೊಲೀಸರು ಪ್ರತಿಭಟನೆಗೆ ಅವಕಾಶ ನಿರಾಕರಿಸಿದ್ದರಿಂದ ದೇವರ ಮೊರೆಹೋಗುವ ಮೂಲಕ ನಾಗೇಶ್ ಬೋವಿ ತಮ್ಮ ಪ್ರತಿಭಟನೆ ನಡೆಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ದೀರ್ಘದಂಡ ನಮಸ್ಕಾರ ಹಾಕುತ್ತ ಪ್ರತಿಭಟನೆ ನೆರವೇರಿಸಿದರು.
ನೆಲಮಂಗಲ ಟೋಲ್ ಬಳಿ ರೊಚ್ಚಿಗೆದ್ದ ಕಾರ್ಮಿಕರು: KSRTC ಬಸ್ಗೆ ಅಡ್ಡ ಹಾಕಿ, ಆಕ್ರೋಶ
Published On - 3:29 pm, Sun, 13 December 20