ಭಸ್ಮವಾಯ್ತು ಭತ್ತ: ಬಣವೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು
ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಭತ್ತ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ರೈತನ ಒಂದು ವರ್ಷದ ಪರಿಶ್ರಮ ವ್ಯರ್ಥವಾಗಿದೆ.
ಮೈಸೂರು: ವರ್ಷವಿಡೀ ಕಷ್ಟಪಟ್ಟು ಬೆಳೆದಿದ್ದ ಭತ್ತ ಒಕ್ಕಣೆಯಾಗಿ ಮನೆ ಸೇರುವ ಮೊದಲೇ ದುಷ್ಕರ್ಮಿಗಳಿಟ್ಟ ಕಿಚ್ಚಿಗೆ ಹುಲ್ಲಿನ ಸಮೇತ ಭಸ್ಮವಾಗಿದೆ. ಕೆ.ಆರ್.ಪೇಟೆ ತಾಲ್ಲೂಕು ಗಂಧನಹಳ್ಳಿ ಗ್ರಾಮದ ರೈತ ಮಲ್ಲೇಗೌಡ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ.
ಭತ್ತವನ್ನು ಕಟಾವು ಮಾಡಿ ಹೊಲದಲ್ಲಿ ಬಣವೆ ಒಟ್ಟಲಾಗಿತ್ತು. ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಭತ್ತ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ರೈತನ ಒಂದು ವರ್ಷದ ಪರಿಶ್ರಮ ವ್ಯರ್ಥವಾಗಿದೆ. ಕಷ್ಟಪಟ್ಟು ಬೆಳೆದಿದ್ದ ಭತ್ತ ಒಕ್ಕಣೆ ಮಾಡುವ ಮೊದಲೇ ನಾಶವಾಗಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ರೈತರು ವಿನಂತಿಸಿದ್ದಾರೆ.
ಜಮೀನು ವಿವಾದ: ಎರಡು ಕುಟುಂಬಗಳ ನಡುವೆ ಮಾರಾಮಾರಿ, 7 ಮಂದಿಗೆ ಗಾಯ