ಮಾಸಿಕ ಪಾಸ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ KSRTC; ಏನದು?
ನಾಲ್ಕು ದಿನಗಳ ಕಾಲ ಕೆಎಸ್ಆರ್ಟಿಸಿ ಬಸ್ ಕಾರ್ಯಾಚರಣೆ ಸ್ಥಗಿತ್ತಗೊಂಡಿತ್ತು. ಹೀಗಾಗಿ, ಮಾಸಿಕ ಬಸ್ ಪಾಸ್ ಪಡೆದಿರುವ ಪ್ರಯಾಣಿಕರು ಸದರಿ ದಿನಗಳಿಗೆ ಮಾಸಿಕ ಪಾಸ್ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಈಗ ಒಪ್ಪಿಗೆ ನೀಡಲಾಗಿದೆ.
ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಡಿಸೆಂಬರ್ 11-14 ರವರೆಗೆ ಸಾರಿಗೆ ನಿಗಮದ ನೌಕರರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ಈ ನಾಲ್ಕು ದಿನ ಬಸ್ಗಳು ರಸ್ತೆಗೆ ಇಳಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾಸಿಕ ಪಾಸ್ ವಿಸ್ತರಣೆ ಮಾಡುವ ನಿರ್ಧಾರಕ್ಕೆ ಕೆಎಸ್ಆರ್ಟಿಸಿ ಬಂದಿದೆ.
ನಾಲ್ಕು ದಿನಗಳ ಕಾಲ ಕೆಎಸ್ಆರ್ಟಿಸಿ ಬಸ್ ಕಾರ್ಯಾಚರಣೆ ಸ್ಥಗಿತ್ತಗೊಂಡಿತ್ತು. ಹೀಗಾಗಿ, ಮಾಸಿಕ ಬಸ್ ಪಾಸ್ ಪಡೆದಿರುವ ಪ್ರಯಾಣಿಕರು ಸದರಿ ದಿನಗಳಿಗೆ ಮಾಸಿಕ ಪಾಸ್ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಸಾಮಾನ್ಯ/ ವೇಗದೂತ ಪಾಸಿನ ಅವಧಿಯನ್ನು ನಾಲ್ಕು ದಿನ ವಿಸ್ತರಣೆ ಮಾಡಲಾಗಿದೆ. ಒಂದೊಮ್ಮೆ ಮಾಸಿಕ ಪಾಸ್ ಡಿಸೆಂಬರ್ 31ಕ್ಕೆ ಅಂತ್ಯವಾದರೆ, ನೀವು ಜನವರಿ ನಾಲ್ಕವರೆಗೂ ಇದೇ ಪಾಸ್ನಲ್ಲಿ ಸಂಚಾರ ನಡೆಸಬಹುದು.
ವಿದ್ಯಾರ್ಥಿ ಪಾಸ್ ವಿತರಣೆ 2020-2021ನೇ ಸಾಲಿನ ವಿದ್ಯಾರ್ಥಿ ಪಾಸ್ ವಿತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ. ಪದವಿ, ವೃತ್ತಿಪರ ಕೋರ್ಸ್, ವೈದ್ಯಕೀಯ ಸಂಶೋಧನೆ, ಪಿಹೆಚ್ಡಿ, ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಪಾಸ್ ವಿತರಣೆ ಮಾಡಲಾಗುತ್ತಿದೆ.
ಪಾಸ್ ಬೇಕಾದವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಡಿಸೆಂಬರ್ 21ರಿಂದ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಮಾಡಲಾಗುತ್ತದೆ. ಬೆಂಗಳೂರು ಒನ್ ಕೇಂದ್ರಗಳಲ್ಲಿ ಪಾಸ್ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8ರಿಂದ ಸಂಜೆ 6.30ರವರೆಗೆ ಪಾಸ್ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.