ಮಾಸಿಕ ಪಾಸ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ KSRTC; ಏನದು?

|

Updated on: Dec 18, 2020 | 9:20 PM

ನಾಲ್ಕು ದಿನಗಳ ಕಾಲ ಕೆಎಸ್ಆರ್​​​ಟಿಸಿ ಬಸ್ ಕಾರ್ಯಾಚರಣೆ ಸ್ಥಗಿತ್ತಗೊಂಡಿತ್ತು. ಹೀಗಾಗಿ, ಮಾಸಿಕ ಬಸ್ ಪಾಸ್ ಪಡೆದಿರುವ ಪ್ರಯಾಣಿಕರು ಸದರಿ ದಿನಗಳಿಗೆ ಮಾಸಿಕ‌ ಪಾಸ್ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಈಗ ಒಪ್ಪಿಗೆ ನೀಡಲಾಗಿದೆ.

ಮಾಸಿಕ ಪಾಸ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ KSRTC; ಏನದು?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಡಿಸೆಂಬರ್​ 11-14 ರವರೆಗೆ ಸಾರಿಗೆ ನಿಗಮದ ನೌಕರರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ಈ ನಾಲ್ಕು ದಿನ ಬಸ್​ಗಳು ರಸ್ತೆಗೆ ಇಳಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾಸಿಕ ಪಾಸ್​ ವಿಸ್ತರಣೆ ಮಾಡುವ ನಿರ್ಧಾರಕ್ಕೆ ಕೆಎಸ್​ಆರ್​ಟಿಸಿ ಬಂದಿದೆ.

ನಾಲ್ಕು ದಿನಗಳ ಕಾಲ ಕೆಎಸ್ಆರ್​​​ಟಿಸಿ ಬಸ್ ಕಾರ್ಯಾಚರಣೆ ಸ್ಥಗಿತ್ತಗೊಂಡಿತ್ತು. ಹೀಗಾಗಿ, ಮಾಸಿಕ ಬಸ್ ಪಾಸ್ ಪಡೆದಿರುವ ಪ್ರಯಾಣಿಕರು ಸದರಿ ದಿನಗಳಿಗೆ ಮಾಸಿಕ‌ ಪಾಸ್ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಸಾಮಾನ್ಯ/ ವೇಗದೂತ ಪಾಸಿನ ಅವಧಿಯನ್ನು ನಾಲ್ಕು ದಿನ ವಿಸ್ತರಣೆ ಮಾಡಲಾಗಿದೆ. ಒಂದೊಮ್ಮೆ ಮಾಸಿಕ ಪಾಸ್ ಡಿಸೆಂಬರ್ 31ಕ್ಕೆ ಅಂತ್ಯವಾದರೆ, ನೀವು ಜನವರಿ ನಾಲ್ಕವರೆಗೂ ಇದೇ ಪಾಸ್​ನಲ್ಲಿ ಸಂಚಾರ ನಡೆಸಬಹುದು.

ವಿದ್ಯಾರ್ಥಿ ಪಾಸ್​ ವಿತರಣೆ
2020-2021ನೇ ಸಾಲಿನ ವಿದ್ಯಾರ್ಥಿ ಪಾಸ್ ವಿತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ. ಪದವಿ, ವೃತ್ತಿಪರ ಕೋರ್ಸ್, ವೈದ್ಯಕೀಯ ಸಂಶೋಧನೆ, ಪಿಹೆಚ್​ಡಿ, ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಪಾಸ್ ವಿತರಣೆ ಮಾಡಲಾಗುತ್ತಿದೆ.

ಪಾಸ್​ ಬೇಕಾದವರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಡಿಸೆಂಬರ್ 21ರಿಂದ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಮಾಡಲಾಗುತ್ತದೆ. ಬೆಂಗಳೂರು ಒನ್ ಕೇಂದ್ರಗಳಲ್ಲಿ ಪಾಸ್ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8ರಿಂದ ಸಂಜೆ 6.30ರವರೆಗೆ ಪಾಸ್​ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

KSRTC ಬಸ್ ಪಲ್ಟಿ, ಇಬ್ಬರು ಸ್ಥಳದಲ್ಲೇ ಸಾವು