ಬೆಂಗಳೂರು: ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸ್ವತಃ ಕಾಂಗ್ರೆಸ್ ಶಾಸಕಿಯೋರ್ವರೇ ತಮ್ಮ ತಾಯಿಗೆ ಬೆಡ್ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡು ಗಳಗಳನೇ ಅತ್ತರು. ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ ಅವರೇ ಕಣ್ಣೀರಾದವರು. ‘ನನ್ನ ತಾಯಿಗೆ ಕೊರೊನಾ ಸೋಂಕಿನಿಂದ ಸೀರಿಯಸ್ ಆಗಿದೆ. ಆದರೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ನನ್ನ ದಾಖಲಿಸಿಕೊಳ್ಳುತ್ತಿಲ್ಲ. ನನಗೆ ತುಂಬಾ ದುಃಖವಾಗುತ್ತಿದೆ’ ಎಂದು ಶಾಸಕಿ ಕುಸುಮಾ ಶಿವಳ್ಳಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಅತ್ತರು.
ಇದೇ ವೇಳೆ ಸಭೆಯ ಉಸ್ತುವಾರಿ ವಹಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಾಸಕಿ ಕುಸುಮಾ ಶಿವಳ್ಳಿಗೆ ಧೈರ್ಯ ತುಂಬಿದರು. ಕಿಮ್ಸ್ ಎಂಡಿ ಜತೆ ಮಾತಾಡುತ್ತೇನೆ. ಈಗಲೇ ದಾಖಲಾತಿ ದೊರೆಯುವಂತೆ ಮಾಡುತ್ತೇನೆ ಎಂದು ಇಬ್ಬರೂ ನಾಯಕರು ಶಾಸಕಿಯ ದುಃಖ ಇಳಿಸಿ ಸಮಾಧಾನ ಮಾಡಿದರು. ಆಗಲೇ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಮ್ಸ್ ನಿರ್ದೇಶಕರಿಗೆ ಕರೆ ಮಾಡಿ ‘ಯಾರಿಗೂ ಬೆಡ್ ನಿರಾಕರಿಸಬೇಡಿ’ ಎಂದು ತರಾಟೆಗೆ ತೆಗೆದುಕೊಂಡರು.
ಮೆಡಿಕಲ್ ಆಕ್ಸಿಜನ್ ಪೂರೈಕೆ ಆಗದೆ 24 ಜನ ಮೃತಪಟ್ಟಿದ್ದಾರೆ. ಹೀಗಾಗಿ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಮೈಸೂರು ಜಿಲ್ಲಾಡಳಿತ ಆಕ್ಸಿಜನ್ ಪೂರೈಕೆ ಮಾಡಿಲ್ಲ. ಇದರಿಂದಲೇ ಸಮಸ್ಯೆ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಆಕ್ಸಿಜನ್ ಸಮಸ್ಯೆ ಬಗ್ಗೆ ಸಚಿವ ಸುರೇಶ್ ಕುಮಾರ್ ಜತೆ ಚರ್ಚಿಸಿದ್ದೆ. ಸಮಸ್ಯೆ ಬಗೆಹರಿಸುವುದಾಗಿ ಸುರೇಶ್ ಕುಮಾರ್ ಹೇಳಿದ್ದರು. ಆದರೂ ಜಿಲ್ಲಾಸ್ಪತ್ರೆಯಲ್ಲಿ 23 ರೋಗಿಗಳು ಮೃತಪಟ್ಟಿದ್ದಾರೆ. ಹೀಗಾಗಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು ಸಿದ್ದರಾಮಯ್ಯನವರೇ ನೀವು ಚಾಮರಾಜನಗರಕ್ಕೆ ಬನ್ನಿ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಒತ್ತಾಯಿಸಿದರು.
ಇದನ್ನೂ ಓದಿ: K Sudhakar Press Meet: ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಸಾವನ್ನಪ್ಪಿದ್ದಾರೆ; ಸಚಿವ ಸುಧಾಕರ್ ಸ್ಪಷ್ಟನೆ
ಆಕ್ಸಿಜನ್ ವ್ಯತ್ಯಯ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊವಿಡ್ ಸೋಂಕಿತರೂ ಸೇರಿ 22 ರೋಗಿಗಳ ಸಾವು
(Kundgol MLA Kusuma Shivalli cried in CLP meeting as her mother did not get bed in Hubli KIMS Hospital though she is a corona infected)