Drugs..ಪ್ರತಿಯೊಬ್ಬರಿಗೂ ಇದರ ಅವಶ್ಯಕತೆ ಇದೆ: ಕೈ ಶಾಸಕ ಅಮರೇಗೌಡ ಸೀರಿಯಸ್​ ಹೇಳಿಕೆ, ಪೂರ್ತಿ ಓದಿ

| Updated By: ಸಾಧು ಶ್ರೀನಾಥ್​

Updated on: Oct 03, 2020 | 1:46 PM

ಕೊಪ್ಪಳ: Drugs ಮನುಷ್ಯನ ಬಿಟ್ಟು ಇಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಇದರ ಅವಶ್ಯಕತೆ ಇದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ್ ಹೇಳಿದ್ದಾರೆ. ರಾಜ ಮಾಹಾರಾಜರ ಕಾಲದಿಂದಲೂ Drugs ಇದೆ ರಾಜ ಮಾಹಾರಾಜರ ಕಾಲದಿಂದಲೂ ಡ್ರಗ್ಸ್ ಇದೆ. ಇದೀಗ Drugsನಲ್ಲಿ ಅನೇಕ ವೆರೈಟಿಗಳು ಬಂದಿವೆ. Drugs ಕೇಸ್‌ನಲ್ಲಿ ಹೆಚ್ಚಾಗಿ ನಟಿಯರ ಹೆಸರು ಕೇಳಿಬರುತ್ತಿದೆ. ಇದರಿಂದ ನನಗೂ ಮಾನಸಿಕವಾಗಿ ನೋವುಂಟಾಗಿದೆ. ಸಿನಿಮಾ ನಟಿಯರ ತೇಜೋವಧೆ ಮಾಡುವುದು ಸರಿಯಲ್ಲ. ಸಿನಿಮಾ ನಟಿಯರು Drugs ನಲ್ಲಿ ಇನ್ವಾಲ್ವ್ ಆಗಿದ್ದರೂ.. ಅವರಿಗೆ ಶಿಕ್ಷೆಯನ್ನು ಗೌಪ್ಯವಾಗಿ […]

Drugs..ಪ್ರತಿಯೊಬ್ಬರಿಗೂ ಇದರ ಅವಶ್ಯಕತೆ ಇದೆ: ಕೈ ಶಾಸಕ ಅಮರೇಗೌಡ ಸೀರಿಯಸ್​ ಹೇಳಿಕೆ, ಪೂರ್ತಿ ಓದಿ
Follow us on

ಕೊಪ್ಪಳ: Drugs ಮನುಷ್ಯನ ಬಿಟ್ಟು ಇಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಇದರ ಅವಶ್ಯಕತೆ ಇದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ್ ಹೇಳಿದ್ದಾರೆ.

ರಾಜ ಮಾಹಾರಾಜರ ಕಾಲದಿಂದಲೂ Drugs ಇದೆ
ರಾಜ ಮಾಹಾರಾಜರ ಕಾಲದಿಂದಲೂ ಡ್ರಗ್ಸ್ ಇದೆ. ಇದೀಗ Drugsನಲ್ಲಿ ಅನೇಕ ವೆರೈಟಿಗಳು ಬಂದಿವೆ. Drugs ಕೇಸ್‌ನಲ್ಲಿ ಹೆಚ್ಚಾಗಿ ನಟಿಯರ ಹೆಸರು ಕೇಳಿಬರುತ್ತಿದೆ. ಇದರಿಂದ ನನಗೂ ಮಾನಸಿಕವಾಗಿ ನೋವುಂಟಾಗಿದೆ. ಸಿನಿಮಾ ನಟಿಯರ ತೇಜೋವಧೆ ಮಾಡುವುದು ಸರಿಯಲ್ಲ. ಸಿನಿಮಾ ನಟಿಯರು Drugs ನಲ್ಲಿ ಇನ್ವಾಲ್ವ್ ಆಗಿದ್ದರೂ.. ಅವರಿಗೆ ಶಿಕ್ಷೆಯನ್ನು ಗೌಪ್ಯವಾಗಿ ಕೊಡಿಸಬೇಕು. ಶಿಕ್ಷೆಯನ್ನು ಬಹಿರಂಗ ಮಾಡಬಾರದೆಂದು ಶಾಸಕ ಅಮರೇಗೌಡ ಬಯ್ಯಾಪೂರ್ ಹೇಳಿದ್ದಾರೆ.

ಯಾವ ರಾಜಕಾರಣಿಯೂ ಸರಿ ಇಲ್ಲ. ಯಾರೋ ಒಬ್ಬ ಮಾತ್ರ ಮಹಾತ್ಮ ಗಾಂಧಿ ಥರ ಇರುತ್ತಾರೆ. ನಾನು ಈವರೆಗೆ ಸಿಗರೇಟ್ ಸೇದಿಲ್ಲ, ಆಫೀಮ್​ ಬಳಸಿಲ್ಲ ಮತ್ತು ಕ್ಲಬ್‌ಗೂ ಹೋಗಿಲ್ಲ. ಇದಕ್ಕೆ ಹೊಸ ತಲೆಮಾರು, ಹಳೆ ತಲೆಮಾರು ಅಂತಿಲ್ಲ. ಹಳೆ ತಲೆಮಾರಿನ ರಾಜಕಾರಣಿಗಳಿಗೆ ಅವಕಾಶ ಇರಲಿಲ್ಲ. ಆದರೆ, ಈಗ ಅವಕಾಶವಿದೆ ಎಂದು ಅಮರೇಗೌಡ ‌ಬಯ್ಯಾಪೂರ್ ಹೇಳಿದ್ದಾರೆ.

Published On - 1:33 pm, Sat, 3 October 20