ಚುನಾವಣೆ ಕಾಲೇ.. ಮಾಜಿ ಸಂಸದ ಮೂಡಲಗಿರಿಯಪ್ಪ ಪುತ್ರ ರಾಜೇಶ್​ಗೆ BJP ಟಿಕೆಟ್​?

ತುಮಕೂರು: ಜಿಲ್ಲೆಯ ಶಿರಾ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ JDS ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ರಾಜೇಶ್ ಗೌಡ ಇಂದು ಮಧ್ಯಾಹ್ನ BJPಗೆ ಸೇರ್ಪಡೆ ಆಗಲಿದ್ದಾರೆ. ಡಾ.ರಾಜೇಶ್ ಮಾಜಿ ಸಂಸದ ಮೂಡಲಗಿರಿಯಪ್ಪರ ಪುತ್ರ. JDS ನಿಂದ ಟಿಕೆಟ್ ಸಿಗುವುದು ಅನುಮಾನವಿರುವ ಹಿನ್ನೆಲೆಯಲ್ಲಿ ಡಾ.ರಾಜೇಶ್​ ಗೌಡ BJPಗೆ ಸೇರಿ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಮೂವರು BJP ಟಿಕೆಟ್ ಆಕಾಂಕ್ಷಿಗಳ ಪೈಕಿ ರಾಜೇಶ್ ಗೌಡ ಒಬ್ಬರಾಗಿದ್ದಾರೆ. ರಾಜೇಶ್ ಗೌಡ ಹೆಸರು ಒಳಗೊಂಡಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ BJP ಕೋರ್ ಕಮಿಟಿ ಪಕ್ಷದ […]

ಚುನಾವಣೆ ಕಾಲೇ.. ಮಾಜಿ ಸಂಸದ ಮೂಡಲಗಿರಿಯಪ್ಪ ಪುತ್ರ ರಾಜೇಶ್​ಗೆ BJP ಟಿಕೆಟ್​?
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Oct 03, 2020 | 12:24 PM

ತುಮಕೂರು: ಜಿಲ್ಲೆಯ ಶಿರಾ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ JDS ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ರಾಜೇಶ್ ಗೌಡ ಇಂದು ಮಧ್ಯಾಹ್ನ BJPಗೆ ಸೇರ್ಪಡೆ ಆಗಲಿದ್ದಾರೆ. ಡಾ.ರಾಜೇಶ್ ಮಾಜಿ ಸಂಸದ ಮೂಡಲಗಿರಿಯಪ್ಪರ ಪುತ್ರ.

JDS ನಿಂದ ಟಿಕೆಟ್ ಸಿಗುವುದು ಅನುಮಾನವಿರುವ ಹಿನ್ನೆಲೆಯಲ್ಲಿ ಡಾ.ರಾಜೇಶ್​ ಗೌಡ BJPಗೆ ಸೇರಿ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಮೂವರು BJP ಟಿಕೆಟ್ ಆಕಾಂಕ್ಷಿಗಳ ಪೈಕಿ ರಾಜೇಶ್ ಗೌಡ ಒಬ್ಬರಾಗಿದ್ದಾರೆ. ರಾಜೇಶ್ ಗೌಡ ಹೆಸರು ಒಳಗೊಂಡಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ BJP ಕೋರ್ ಕಮಿಟಿ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ ಕಳುಹಿಸಿದೆ.

ಇಂದು ಮಧ್ಯಾಹ್ನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸೇರ್ಪಡೆಗೊಳ್ಳಲಿರುವ ಡಾ. ರಾಜೇಶ್​ ಗೌಡಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆಯಿದೆ. ಸೇರ್ಪಡೆ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ 15 ವರ್ಷಗಳಿಂದ JDSನಲ್ಲಿ ಗುರುತಿಸಿಕೊಂಡಿದ್ದ ರಾಜೇಶ್​ಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನಗಳು ನೀಡದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Published On - 12:23 pm, Sat, 3 October 20